ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಅಭಿವೃದ್ಧಿಗೆ ಅನುದಾನ ಶಾಸಕರ ಅಸಮಾಧಾನ

Last Updated 7 ಜನವರಿ 2014, 20:15 IST
ಅಕ್ಷರ ಗಾತ್ರ

ದೇವನಹಳ್ಳಿ: ಪೌರಾಡಳಿತ ಇಲಾಖೆ ವತಿಯಿಂದ ನಗರೋತ್ಥಾನ ಯೋಜ ನೆ ಯಡಿ ಬಿಡುಗಡೆ ಮಾಡಿರುವ ₨ 4 ಕೋಟಿ  ಅನುದಾನ ಬರಿ ರಸ್ತೆ ಅಭಿವೃದ್ಧಿಗೆ ಸೀಮಿತಗೊಳಿಸಲಾಗಿದೆ ಎಂದು ಶಾಸಕ ಪಿಳ್ಳ ಮುನಿಶ್ಯಾಮಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಪುರಸಭೆ ವತಿಯಿಂದ ನಗರೋ ತ್ಥಾನ ಯೋಜನೆಯಡಿಯಲ್ಲಿ ರಸ್ತೆ ಡಾಂಬರೀಕರಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು ನಗರ ಸಭೆ ವ್ಯಾಪ್ತಿಯಲ್ಲಿ ಚರಂಡಿ ದುರಸ್ತಿ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಹಲವು ಅಭಿವೃದ್ಧಿ ಕೆಲಸ ಗಳು ಆಗಬೇಕು ಯೋಜನೆಯ ₨ 5 ಕೋಟಿ ಹಣದಲ್ಲಿ ₨ 4 ಕೋಟಿ ರೂ ರಸ್ತೆಗೆ ಮೀಸಲಿಟ್ಟರೆ ಉಳಿದ ಸಮಸ್ಯೆ ಗಳನ್ನು ಹೇಗೆ ಪರಿಹರಿಸಲು ಸಾಧ್ಯವೆಂದರು.

ಬಯಪಾ ವತಿಯಿಂದ ಬೈಪಾಸ್‌ ರಸ್ತೆಯಿಂದ ಪಟ್ಟಣದ ಪ್ರಮುಖ ಬೀದಿ ಮಾರ್ಗವಾಗಿ ನಂದಿ ರಸ್ತೆ ರಾಣಿ ಗ್ರಾಸ್‌ವರೆವಿಗೂ ₨ 50 ಲಕ್ಷ ವೆಚ್ಚ ದಲ್ಲಿ ಹೈಮಾಸ್‌ ಸೋಲಾರ್‌ ದೀಪ ಅಳವಡಿಕೆಗೆ ಕಾಮಗಾರಿ ಶೀಘ್ರದಲ್ಲಿ ಆರಂಭವಾಗಲಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT