ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಉಬ್ಬು ನಿರ್ಮಿಸಲು ಆಗ್ರಹ

Last Updated 24 ಸೆಪ್ಟೆಂಬರ್ 2011, 6:25 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಫುಟ್‌ಪಾತ್‌ಗಳನ್ನು ಕೂಡಲೇ ದುರಸ್ತಿಗೊಳಿಸಬೇಕು ಸೇರಿ ದಂತೆ ವಿವಿಧ ಬೇಡಿಕೆಗಳನ್ನು ಈಡೇರಿ ಸಬೇಕೆಂದು ಒತ್ತಾಯಿಸಿ ಕಾಡಸಿದ್ಧೇಶ್ವರ ಕಲಾ ಹಾಗೂ ಎಚ್.ಎಸ್. ಕೋತಂಬ್ರಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಶುಕ್ರವಾರ ಬೆಳಿಗ್ಗೆ ಪೊಲೀಸರಿಗೆ ಮನವಿ ಸಲ್ಲಿಸಿದರು.

ಬಸ್ ಹತ್ತುವಾಗ ಬಿದ್ದು ತೀವ್ರವಾಗಿ ಗಾಯಗೊಂಡ ಕಾಡಸಿದ್ಧೇಶ್ವರ ಕಾಲೇಜಿನ ವಿದ್ಯಾರ್ಥಿನಿ ಸುವರ್ಣಾ ಉಸಲಕೊಪ್ಪ ಗುರುವಾರ ಮೃತಪಟ್ಟ ಘಟನೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಶುಕ್ರವಾರ ಕಾಲೇಜಿನ ಆವರಣದಲ್ಲಿ ಶ್ರದ್ಧಾಂಜಲಿ ಸಲಿಸಿದರು.

ಬಿವಿಬಿ ಎಂಜಿನಿಯರಿಂಗ್ ಕಾಲೇಜಿ ನಿಂದ ವಿದ್ಯಾನಗರದ ಹಳೆಯ ಪೊಲೀಸ್ ಠಾಣೆಯವರೆಗೆ ವೇಗ ತಡೆಗಳನ್ನು ಹಾಕಬೇಕು. ಬಸ್ ಹಾಗೂ ವಾಹನ ಗಳಿಗೆ ಕಡಿಮೆ ಶಬ್ದ ಮಾಡುವ ಹಾರ್ನ್ ಅಳವಡಿಸಬೇಕು, ಸಂಚಾರ ಪೊಲೀಸ ರನ್ನು ನಿಯೋಜಿಸಬೇಕು. ಜೊತೆಗೆ ಬಸ್‌ಗಳ ವೇಗವನ್ನು ಗಂಟೆಗೆ 30 ಕಿ.ಮೀ.ಗೆ ಮಿತಿಗೊಳಿಸಬೇಕು ಎಂದು ವಿದ್ಯಾರ್ಥಿ ಗಳು ಮನವಿ ಮಾಡಿಕೊಂಡರು. ಸ್ಥಳಕ್ಕೆ ಆಗಮಿಸಿದ ಸಂಚಾರ ಎಸಿಪಿ ಎನ್.ಎಸ್‌ಪಾಟೀಲ ಹಾಗೂ ಉತ್ತರ ಎಸಿಪಿ ಎ.ಬಿ. ಬಡಿಗೇರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ವಿದ್ಯಾನಗರ ಇನ್ಸ್‌ಪೆಕ್ಟರ್ ಕೆ. ಪುಟ್ಟ ಸ್ವಾಮಿ ಹಾಜರಿದ್ದರು.

ಪರಿಹಾರ: `ಸುವರ್ಣಾಳ ಶವ ಸಂಸ್ಕಾರಕ್ಕೆ ನಮ್ಮ ಕಾಲೇಜಿನ ವಿದ್ಯಾ ರ್ಥಿಗಳು, ಪ್ರಾಧ್ಯಾಪಕರು ಹಾಗೂ ಶಿಕ್ಷ ಕೇತರ ಸಿಬ್ಬಂದಿ ಆರು ಸಾವಿರ ರೂಪಾಯಿ ಸಂಗ್ರಹಿಸಿ ನೀಡಿ ದರು. ಜೊತೆಗೆ ಸಾರಿಗೆ ಸಂಸ್ಥೆ ಅಧಿಕಾರಿಗಳು 15 ಸಾವಿರ ರೂಪಾಯಿ ನೀಡಿದರು~ ಎಂದು ಕಾಡಸಿದ್ಧೇಶ್ವರ ಕಾಲೇಜಿನ ಪ್ರಾಚಾರ್ಯ ರಾದ ವಿ.ಎಂ. ಕಿಣಗಿ ತಿಳಿಸಿದರು.

`ಕುಸುಗಲ್ಲ ರಸ್ತೆಯ ಶಬರಿನಗರದ ನಿವಾಸಿಯಾಗಿದ್ದ ಸುವರ್ಣಾ ಉಸಲ ಕೊಪ್ಪ ಇತರರ ಮನೆಗೆಲಸಗಳನ್ನು ಪೂರೈಸಿ ಕಾಲೇಜು ಓದುತ್ತಿದ್ದರು. ಅವರ ತಂದೆ ಕೂಲಿ ಮಾಡುತ್ತಿದ್ದರು. ಅವರ ತಾಯಿ ಕೂಡಾ ಇತರರ ಮನೆಗೆಲಸ ಮಾಡುತ್ತಿದ್ದರು. ಅವರ ಸೋದರ ಟೈಲ್ಸ್ ಕಾರ್ಖಾನೆ ಉದ್ಯೋಗಿ. ಹೀಗೆ ಬಡತನದಲ್ಲಿದ್ದ ಆಕೆಗೆ ಓದುವ ಛಲವಿತ್ತು. ಆದರೆ ಗುರುವಾರ ಕಾಲೇಜು ಮುಗಿಸಿಕೊಂಡು ಗುರುದತ್ತ ಭವನ ಎದುರಿನ ಬಸ್‌ನಿಲ್ದಾಣ ಬಳಿ ಸಿಟಿ ಬಸ್ ಹತ್ತುವಾಗ ಕಾಲು ಜಾರಿ ಬಿದ್ದರು. ಆಗ ಬಸ್ಸಿನ ಹಿಂದಿನ ಗಾಲಿಗಳು ಅವರ ಕಾಲ ಮೇಲೆ ಹಾಯ್ದುದರಿಂದ ತೀವ್ರವಾಗಿ ಗಾಯಗೊಂಡರು. ಕೂಡಲೇ ಕಿಮ್ಸಗೆ ದಾಖಲಿಸ ಲಾಯಿತು. ಆದರೆ ಚಿಕಿತ್ಸೆ ಫಲಕಾ ರಿಯಾಗದೆ ಅವರು ಗುರುವಾರ ಸಂಜೆ ಮೃತಪಟ್ಟರು~ ಎಂದು ಅವರು ವಿವರಿಸಿದರು.

ಹಳೆಯ ವಿದ್ಯಾರ್ಥಿ ಸಂಘದ ಸಭೆ
ಧಾರವಾಡ: ಇಲ್ಲಿನ ಮುರುಘಾಮಠದ ಮುರುಘರಾಜೇಂದ್ರ ಪ್ರಸಾದ ನಿಲ ಯದ ಹಿಂದಿನ ವಿದ್ಯಾರ್ಥಿಗಳ ಸಂಘದ ವಾರ್ಷಿಕ ಸಭೆ ಸೆ. 26 ರಂದು ಬೆಳಿಗ್ಗೆ 11ಕ್ಕೆ ಮಠದ ಆವರಣದಲ್ಲಿ ನಡೆ ಯಲಿದೆ.

ಸಂಘದ ಸದಸ್ಯರು ತಪ್ಪದೇ ಸಭೆಗೆ ಆಗಮಿಸಬೇಕು. ಹೆಚ್ಚಿನ ವಿವರಗಳಿಗೆ ಬಿ.ಸಿ.ಪಾಲಕಾರ (ಮೊ. 94493 54624) ಅವರನ್ನು ಸಂಪರ್ಕಿಸ ಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT