ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಕಾಮಗಾರಿಗೆ ರೂ 50 ಲಕ್ಷ ಅನುದಾನ

Last Updated 19 ಅಕ್ಟೋಬರ್ 2012, 7:10 IST
ಅಕ್ಷರ ಗಾತ್ರ

ರಾಯಬಾಗ: ನಬಾರ್ಡ್ ಯೋಜನೆಯಡಿ ರೂ 50 ಲಕ್ಷ ಅನುದಾನದಲ್ಲಿ ತಾಲ್ಲೂಕಿನ ಬೆಂಡವಾಡ ಗೇಟ್‌ದಿಂದ  ದಂಡಾಪುರದವರೆಗಿನ ರಸ್ತೆಯನ್ನು ಸುಧಾರಣೆ ಮಾಡಿ, ಸಂಪೂರ್ಣ ಡಾಂಬರೀಕರಣ ಮಾಡ ಲಾಗುವುದು. ಇದರಿಂದ ರಾಯಬಾಗ- ಗೋಕಾಕ ನಡುವಿನ ರಸ್ತೆ ಸಂಪರ್ಕಕ್ಕೆ ಅನುಕೂಲವಾಗಲಿದೆ ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದರು.

ಮಂಗಳವಾರ ತಾಲ್ಲೂಕಿನ ಬೆಂಡವಾಡ ಗೇಟ್‌ದಿಂದ ದಂಡಾಪುರದವರೆಗಿನ ರಸ್ತೆ ಸುಧಾರಣೆ  ಹಾಗೂ ಡಾಂಬರೀಕರಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.  ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಮಂಟೂರ- ಜೋಡಟ್ಟಿ ಹಾಗೂ ಚಿಕ್ಕೋಡಿ ಕ್ಷೇತ್ರದ ಒಂದು ರಸ್ತೆಗೆ ಒಂದು ಕೋಟಿ ಅನುದಾನ ಮಂಜೂರು ಮಾಡಲಾಗಿದೆ ಎಂದರು.

ತಾಲ್ಲೂಕಿಗೆ ಸಂಸ್ಕೃತಿ ಇಲಾಖೆಯಿಂದ ತಲಾ 10 ಲಕ್ಷ ಅನುದಾನದಲ್ಲಿ ಮೂರು ಸಮುದಾಯ ಭವನಗಳೂ ಮಂಜೂರಾಗಿದ್ದು ಶೀಘ್ರ ಕಾಮಗಾರಿ ಪ್ರಾರಂಭವಾಗಲಿದೆ ಎಂದರು. ಎಂಜಿನಿಯರ್ ಎ.ಟಿ. ಅಸ್ಕಿ, ತಾ.ಪಂ. ಸದಸ್ಯ ರಾವ ಸಾಬ ದೇಸಾಯಿ, ಜಿ.ಪಂ. ಸದಸ್ಯೆ ನೀಲವ್ವ ಮಳವಾಡ. ಕೆಂಪಣ್ಣ ಮಳವಾಡ, ಗೋವಿಂದರಾವ ದೇಸಾಯಿ, ಅಪ್ಪಾಸಾಬ ಬ್ಯಾಕುಡೆ, ಚೌಗಲಾ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT