ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ದುರಸ್ತಿಗೆ ಆಗ್ರಹಿಸಿ ಕರವೇ ಪ್ರತಿಭಟನೆ

Last Updated 2 ಸೆಪ್ಟೆಂಬರ್ 2013, 6:04 IST
ಅಕ್ಷರ ಗಾತ್ರ

ವಿಜಾಪುರ: ನಗರದಿಂದ ವಿವಿಧ ತಾಲ್ಲೂಕು ಹಾಗೂ ಗ್ರಾಮಗಳಿಗೆ ಸಂಚರಿ ಸಲು ಸಂಪರ್ಕ ಕಲ್ಪಿಸುವ ರಸ್ತೆಗಳು ಸಂಪೂರ್ಣ ಹದಗೆಟ್ಟು ಹೋಗಿರುವುದನ್ನು ಖಂಡಿಸಿ ಕರವೇ ಜಿಲ್ಲಾ ಘಟಕ (ಪ್ರವೀಣ ಶೆಟ್ಟಿ ಬಣ)ದ ಕಾರ್ಯ ಕರ್ತರು ಹಾಗೂ ವಿವಿಧ ಪ್ರಗತಿಪರ ಸಂಘಟನೆಯ ಮುಖಂಡರು ನಗರದಲ್ಲಿ ಗಾಂಧಿವೃತ್ತದಲ್ಲಿ ಭಾನುವಾರ ಜಿಲ್ಲಾಡಳಿತದ ಪ್ರತಿಕೃತಿಯನ್ನು ದಹನ ಮಾಡಿ ಪ್ರತಿಭಟನೆ ನಡೆಸಿದರು.

ನಗರದಲ್ಲಿ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಮುಕ್ತಿ ದೊರೆಯದಿರುವುದು ದೌರ್ಭಾಗ್ಯವೇ ಸರಿ. ಇದಕ್ಕಾಗಿ ಈ ಹಿಂದೆ ಹಲವು ಬಾರಿ ನಡೆಸಿದ ಪ್ರತಿಭಟನೆಗೆ ಜಿಲ್ಲಾಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ. ಇಲ್ಲಿನ ಐತಿಹಾಸಿಕ ಸ್ಮಾರಕ ವೀಕ್ಷಿಸಲು ಬರುವ ಪ್ರವಾಸಿಗರು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ದೂರಿದರು.

ಇನ್ನಾದರೂ ಜಿಲ್ಲಾಧಿಕಾರಿಗಳು ಎಚ್ಚೆತ್ತು ತಕ್ಷಣವೇ ಕೆಟ್ಟು ಹೋದ ಈ ರಸ್ತೆಗಳನ್ನು ನವೆಂಬರ್ 1ರ ಒಳಗಾಗಿ ಕೂಡಲೇ ದುರಸ್ತಿಗೊಳಿಸಿ ಡಾಂಬ ರೀಕರಣ ಮಾಡಬೇಕು. ಇಲ್ಲವಾದರೆ ಕರ್ನಾಟಕ ರಾಜ್ಯೋತ್ಸವದಂದು ನಗರದಲ್ಲಿ ನಡೆಯುವ ಸಮಾರಂಭದಲ್ಲಿ  ಕಪ್ಪುಪಟ್ಟಿ ಕಟ್ಟಿಕೊಂಡು ಪ್ರದರ್ಶನ  ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ಪ್ರತಿಭಟನೆಯಲ್ಲಿ ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಮುತ್ತುರಾಜ್ ಕೊಂಡಗೂಳಿ, ಸುರೇಶ ಬಿಜಾಪೂರ, ಶ್ರಿಶೈಲ ಮುಳಜಿ, ವಿಶ್ವನಾಥ ಭಾವಿ, ಅಕ್ರಂ ಮಾಶ್ಯಾಳಕರ, ಕರವೇ ಇಂಡಿ ತಾಲ್ಲೂಕು ಘಟಕದ ಅಧ್ಯಕ್ಷ ಹುಚ್ಚಪ್ಪ ತಳವಾರ, ಪ್ರಲ್ಹಾದ ಕಾಂಬಳೆ, ರಾಜು ಕಾಶೆಟ್ಟಿ, ವಾಸು ಕಾಳೆ, ಹೈದರಲಿ ನದಾಫ, ಅನೀಲ ಬುರಾಣೂರ, ಸಂಜೀವ ಗುನ್ನಾಪೂರ, ಬಂದೇನವಾಜ ಜಹಾಗೀರದಾರ, ರುಕ್ಮೀಣಿ ಚವ್ಹಾಣ, ಬಸವರಾಜ ಕಾಂಬಳೆ, ಭೀಮಗೊಂಡ ಗುಣದಾಳ, ಹಾಜಿ ಪಿಂಜಾರ, ಈಶ್ವರಗೌಡ ಬಿರಾದಾರ, ಈರನಗೌಡ ಪಾಟೀಲ, ಪವನ ಚವಡೇಕರ, ಮೇತ್ರಿ, ಮಹೇಶ, ಸಾಗರ ರಾಠೋಡ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿ ಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT