ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ದುರಸ್ತಿಗೆ ಗ್ರಾಮಸ್ಥರ ಆಗ್ರಹ

Last Updated 13 ಡಿಸೆಂಬರ್ 2013, 9:21 IST
ಅಕ್ಷರ ಗಾತ್ರ

ವಿಜಯಪುರ: ಪಟ್ಟಣದ ಹೊರವಲ ಯದಲ್ಲಿರುವ ನಾಗರಕೆರೆ ಸಮೀಪದ ಶಿಡ್ಲಘಟ್ಟ ರಸ್ತೆಯಲ್ಲಿ ಪಟ್ಟಣದ ಒಳ ಭಾಗದಿಂದ ಹಾಗೂ ಡಿವಿಯೇಷನ್ ರಸ್ತೆ ಯಿಂದ ಮೇಲೂರು ರಸ್ತೆಗೆ ಸೇರುವ ವೃತ್ತ ಇದೆ. ಈ ಮೂರು ರಸ್ತೆಗಳು ಸಂಧಿಸುವ ಜಾಗದಲ್ಲಿ ರಸ್ತೆ ಉಬ್ಬು ಇಲ್ಲದ ಕಾರಣ  ಸಂಚಾರಕ್ಕೆ ಅಡ್ಡಿ ಯಾಗಿದೆ ಎಂಬುದು ಸಾರ್ವಜನಿಕರ ದೂರು.

ಪಟ್ಟಣದ ಒಳಭಾಗದಿಂದ ಬರುವ ವಾಹನಗಳು ಈ ವೃತ್ತದಲ್ಲಿ ಅಪಘಾತ ಕ್ಕಿಡಾಗಿವೆ. ಈಗಾಗಲೇ ಶಿಡ್ಲಘಟ್ಟದಿಂದ ರಭಸವಾಗಿ ಬರುವ ವಾಹನಗಳು ನಿಯಂತ್ರಣ ತಪ್ಪಿ ನಾಗರಕೆರೆಗೆ ಉರುಳಿ ಬಿದ್ದಿರುವ ಉದಾಹರಣೆಗಳೂ ಇವೆ. ರಸ್ತೆಯ ಮೂರು ದಿಕ್ಕುಗಳಲ್ಲಿ ಹಳ್ಳ ಗಳಿವೆ. ಒಂದು ಭಾಗದಲ್ಲಿ ನಾಗರಕೆರೆ ಕೂಡ ಇದೆ. ಯಾವುದೇ ಭಾಗ ದಲ್ಲಿಯೂ ತಡೆಗೋಡೆಯಿಲ್ಲ. ಇಷ್ಟಾ ದರೂ ಸಂಬಂಧಪಟ್ಟ ಇಲಾಖೆಗಳು ಇತ್ತ ಗಮನಹರಿಸಿಲ್ಲ ಎಂಬುದು ಸಾರ್ವ ಜನಿಕರ ಆರೋಪ.

ರಸ್ತೆಯ ಇಕ್ಕೆಲಗಳಲ್ಲಿ ಗಿಡಗಂಟಿಗಳು ಬೆಳೆದುಕೊಂಡಿವೆ. ಹಾಗಾಗಿ ಪಾದ ಚಾರಿಗಳು ಡಾಂಬರು ರಸ್ತೆಯಲ್ಲಿಯೇ ಓಡಾಡುವಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ. ಈ ಕೂಡಲೇ ಲೋಕೋಪಯೋಗಿ ಇಲಾಖೆ ಹಾಗೂ ಪುರಸಭೆ ರಸ್ತೆ ಬದಿ ಯಲ್ಲಿ ತಡೆಗಲ್ಲುಗಳನ್ನು ಹಾಕುವು ದರ ಜೊತೆಗೆ ಮೂರು ರಸ್ತೆ ಸೇರುವ ಕಡೆ ರಸ್ತೆ ಉಬ್ಬುಗಳನ್ನು ಹಾಕಬೇಕು ಎಂದು  ಸಾರ್ವಜನಿಕರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT