ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ರಿಪೇರಿ ಮಾಡದ ಪುರಸಭೆ

Last Updated 8 ಜೂನ್ 2011, 8:35 IST
ಅಕ್ಷರ ಗಾತ್ರ

ಹೊಳೆನರಸೀಪುರ: ಪಟ್ಟಣದ ಜನನಿಬಿಡ ಪ್ರದೇಶದಲ್ಲೊಂದಾದ ರಿವರ್‌ಬ್ಯಾಂಕ್ ರಸ್ತೆಯು ಗುಂಡಿ ಬಿದ್ದು ಓಡಾಡಲು ಸಾಧ್ಯ ಇಲ್ಲದಷ್ಟು ಹಾಳಾ ಗಿದೆ. ರಸ್ತೆಯ ಎರಡೂ ಬದಿಯಲ್ಲಿ ಕಸದ ರಾಶಿ ಬಿದ್ದಿದ್ದು ಹಂದಿಗಳು ಕಸದ ರಾಶಿಯನ್ನು ರಸ್ತೆಗೆಲ್ಲಾ ಹರಡಿವೆ. ಈ ರಸ್ತೆಯಲ್ಲಿ ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಪುರಸಭೆಯವರು ಇತ್ತ ತಿರುಗಿ ನೋಡುವುದಿಲ್ಲ ಎಂದು ಬಡಾವಣೆಯ ಜನರು ದೂರಿದ್ದಾರೆ.

ಮುಖ್ಯರಸ್ತೆಯ ನಂತರ ರಿವರ್‌ಬ್ಯಾಂಕ್ ರಸ್ತೆ ಅತ್ಯಂತ ಜನನಿಬಿಡ ರಸ್ತೆ. ಈ ರಸ್ತೆಯಲ್ಲಿ ವರ್ಕ್‌ಶಾಪ್, ಟಿಂಬರ್ ಡಿಪೋ, ಹೋಟೆಲ್‌ಗಳು, ಚಿಕ್ಕಪುಟ್ಟ ಅಂಗಡಿಗಳು, ರೈಸ್‌ಮಿಲ್, ಕಲ್ಯಾಣ ಮಂಟಪ ಎಲ್ಲವೂ ಇದೆ. ಪ್ರತಿದಿನ ನೂರಾರು ವಾಹನಗಳು ಈ ರಸ್ತೆಯಲ್ಲಿ ಓಡಾಡುತ್ತಿವೆ. ಬೆಳಿಗ್ಗೆಯಿಂದ ಸಂಜೆವರೆಗೂ ಈ ಬೀದಿಯಲ್ಲಿ          ಜನವೋಜನ. ಆದರೆ, ಈ ರಸ್ತೆ ಸಂಚ ರಿಸಲು ಸಾಧ್ಯ ಇಲ್ಲದಷ್ಟು ಹಾಳಾಗಿದೆ. ಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ಚರಂಡಿಯಲ್ಲಿ ನೀರು ನಿಂತು ಸೊಳ್ಳೆಗಳ ಉಗಮ ಸ್ಥಾನವಾದಂತಾಗಿದೆ.

ಈ ರಸ್ತೆ ಡಾಂಬಾರು ಕಂಡು ಎಷ್ಟು ವರ್ಷಗಳು ಕಳೆದಿದೆಯೋ ಗೊತ್ತಿಲ್ಲ. ಮಳೆಗಾಲದಲ್ಲಿ ನೀರು ನಿಂತು ರಸ್ತೆ ಮತ್ತು ಗುಂಡಿ ಯಾವುದೆಂದು ತಿಳಿಯದೆ ದ್ವಿಚಕ್ರವಾಹನದ ಸವಾರರು ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ. ಚಂರಡಿ ವ್ಯವಸ್ಥೆ ಸರಿಲ್ಲದೇ ಈ ರಸ್ತೆಯ ಗಲೀಜೆಲ್ಲಾ ಹೇಮಾವತಿ ನದಿಗೆ ಹರಿಯುತ್ತಿದೆ.

ನಮ್ಮ ರಸ್ತೆಗೆ ಡಾಂಬಾರು ಹಾಕಿಸಿಕೊಂಡಿ ಎಂದು ಬಡಾವಣೆಯ ಜನರು ಶಾಸಕರಲ್ಲಿ ಮನವಿ ಮಾಡಿ ಮಾಡಿ ಬೇಸತ್ತು ಸುಮ್ಮನಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT