ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಗಳಲ್ಲಿ ಬಿದ್ದಿದೆ ಕಸದ ರಾಶಿ

Last Updated 12 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ತ್ಯಾಜ್ಯದ ಸಮಸ್ಯೆ ಹಂತ ಹಂತವಾಗಿ ಕಡಿಮೆಯಾಗುತ್ತಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೇಳುತ್ತಿದ್ದರೂ ನಗರದ ರಸ್ತೆಗಳಲ್ಲಿ ಕಸ ರಾಶಿ ಬೀಳುವುದು ಮುಂದುವರಿದೇ ಇದೆ.

ನಂದಿನಿ ಬಡಾವಣೆ, ರಾಜಾಜಿನಗರ, ವಿಜಯನಗರ, ಇಂದಿರಾನಗರ, ಕೋರಮಂಗಲದ ಸೇರಿದಂತೆ ನಗರದ ಹಲವು ಭಾಗಗಳ ರಸ್ತೆಗಳಲ್ಲಿ ಕಸ ರಾಶಿ ಬಿದ್ದಿದ್ದ ದೃಶ್ಯ ಶುಕ್ರವಾರವೂ ಕಂಡುಬಂತು.ಮನೆ ಮನಯಿಂದ ಕಸ ಸಂಗ್ರಹ ವ್ಯವಸ್ಥೆ ಸರಿಯಾಗಿ ನಡೆಯದೇ ಇರುವುದು ಕಸ ರಸ್ತೆಯಲ್ಲಿ ರಾಶಿ ಬೀಳಲು ಮುಖ್ಯ ಕಾರಣ ಎಂಬುದು ನಗರದ ನಾಗರಿಕರ ವಾದ.

`ಮನೆ ಮನೆಗಳಿಂದ ಕಸ ಸಂಗ್ರಹ ಮಾಡುವ ವ್ಯವಸ್ಥೆ ಇತ್ತೀಚೆಗೆ ಸರಿಯಾಗಿ ನಡೆಯುತ್ತಿಲ್ಲ. ತ್ಯಾಜ್ಯ ನಿರ್ವಹಣೆ ಹಾಗೂ ಸಂಸ್ಕರಣೆ ಬಗ್ಗೆ ಬಿಬಿಎಂಪಿ ಪ್ರಚಾರ ನಡೆಸುತ್ತಲೇ ಇದೆ. ಆದರೆ, ಮನೆ ಮನೆಯಿಂದ ಕಸ ಸಂಗ್ರಹಣೆಯನ್ನು ಬಿಬಿಎಂಪಿ ಗಂಭೀರವಾಗಿ ಪರಿಗಣಿಸುತ್ತಿಲ್ಲ~ ಎಂದು ನಂದಿನಿ ಬಡಾವಣೆಯ ಜೈ ಮಾರುತಿ ನಗರದ ನಿವಾಸಿ ಪ್ರಮೀಳಾ ದೂರಿದರು.

`ಹಸಿ ಹಾಗೂ ಒಣತ್ಯಾಜ್ಯ ವಿಂಗಡಣೆಗೆ ಬಟೆಟ್‌ಗಳನ್ನು ನೀಡಲಾಗುತ್ತಿದೆ ಎಂದು ಹೇಳಲಾಗಿತ್ತು. ಈಗ ಅದರ ಬಗ್ಗೆ ಮಾತೇ ಇಲ್ಲ. ಮನೆ ಮನೆಗಳಿಂದ ಸಮರ್ಪಕವಾಗಿ ಕಸ ಸಂಗ್ರಹ ಮಾಡಿದರೆ ಜನರು ರಸ್ತೆಗೆ ಕಸ ಸುರಿಯುವುದನ್ನು ನಿಲ್ಲಿಸುತ್ತಾರೆ. ಆದರೆ, ದಂಡ ವಿಧಿಸುತ್ತೇವೆ ಎಂದು ಹೇಳುವ ಪಾಲಿಕೆಗೆ ಇದು ಅರ್ಥವಾಗುತ್ತಿಲ್ಲ~ ಎಂಬುದು ವಿಜಯನಗರದ ರಾಜಮ್ಮ ಅವರ ಮಾತು.

ಬಾಕ್ಸ್‌ಗೆ...
`ಹೊಸ ಟೆಂಡರ್ ನಡೆಯಬೇಕು~

`ಮನೆ ಮನೆಯಿಂದ ಕಸ ಸಂಗ್ರಹ ಮಾಡುವ ವ್ಯವಸ್ಥೆಯಲ್ಲಿ ಕೆಲವು ಕಡೆ ತೊಡಕುಂಟಾಗಿದೆ. ಗುತ್ತಿಗೆದಾರರು ಸರಿಯಾಗಿ ಕಾರ್ಯ ನಿರ್ವಹಿಸದೇ ಈ ಸಮಸ್ಯೆ ತಲೆದೋರಿದೆ. ಸಮರ್ಪಕವಾಗಿ ಕಾರ್ಯ ನಿರ್ವಹಿಸದ ಗುತ್ತಿಗೆದಾರರನ್ನು ಬದಲಿಸುವ ಬಗ್ಗೆ ಚಿಂತನೆ ನಡೆದಿದೆ. ಹೊಸದಾಗಿ ಗುತ್ತಿಗೆದಾರರ ಆಯ್ಕೆಗೆ ಟೆಂಡರ್ ಪ್ರಕ್ರಿಯೆ ನಡೆಯಬೇಕು~
-ಡಿ.ವೆಂಕಟೇಶಮೂರ್ತಿ, ಮೇಯರ್

`ಮೊದಲು ಕಸ ಎತ್ತಿ~
`ಬಿಬಿಎಂಪಿ ದಿನದಿನವೂ ತ್ಯಾಜ್ಯ ನಿರ್ವಹಣೆಗೆ ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಲೇ ಇದೆ. ಆದರೆ, ರಸ್ತೆಗಳಲ್ಲಿ ಬೀಳುವ ಕಸವನ್ನು ಎತ್ತಿಸುವ ಬಗ್ಗೆ ಪಾಲಿಕೆ ಹೆಚ್ಚು ಗಮನ ನೀಡುತ್ತಿಲ್ಲ. ದೂರು ನೀಡಿದಾಗ ಎರಡು ದಿನ ಕಸ ಎತ್ತಲಾಗುತ್ತದೆ. ನಂತರ ಎಂದಿನಂತೆ ಅದೇ ರೀತಿ ಕಸ ರಸ್ತೆಗಳಲ್ಲಿ ಬೀಳುತ್ತದೆ. ರಸ್ತೆಗಳಲ್ಲಿ ಬೀಳುವ ಕಸ ಎತ್ತಿಸುವ ಬಗ್ಗೆ ಪಾಲಿಕೆ ಹೆಚ್ಚು ಗಮನ ನೀಡಲಿ~
-ವೀರೇಶ್, ರಾಜಾಜಿನಗರ 2ನೇ ಹಂತದ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT