ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಗಿಳಿದ ಬೊಲೆರೊ ಮ್ಯಾಕ್ಸಿಟ್ರಕ್

Last Updated 4 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಒಂದು ಟನ್ ಸಾಗಣೆ ಸಾಮರ್ಥ್ಯದ `ಪಿಕಪ್~ ವಾಹನಗಳ ಮಾರುಕಟ್ಟೆ ವರ್ಷಂಪ್ರತಿ ಶೇ 34ರ ಪ್ರಮಾಣದಲ್ಲಿ ವೃದ್ಧಿಯಾಗುತ್ತಿದೆ. ಈ ವಿಭಾಗದಲ್ಲಿ ಮಹೀಂದ್ರಾ ಅಂಡ್ ಮಹೀಂದ್ರಾ ಲಿ.(ಎಂಎಂಎಲ್) ದೊಡ್ಡ ಪಾಲು ಹೊಂದಿದೆ ಎಂದು ಕಂಪೆನಿಯ ಆಟೊಮೋಟಿವ್ ಮಾರಾಟ-ಸೇವೆ ವಿಭಾಗದ ಹಿರಿಯ ಉಪಾಧ್ಯಕ್ಷ ಅರುಣ್ ಮಲ್ಹೋತ್ರಾ ಹೇಳಿದರು.

ನಗರದಲ್ಲಿ ಬುಧವಾರ ಹೊಸ `ಬೊಲೆರೊ ಮ್ಯಾಕ್ಸಿಟ್ರಕ್~ ಸರಕು ಸಾಗಣೆ ವಾಹನವನ್ನು(ಎಕ್ಸ್‌ಷೋರೂಂ ಬೆಲೆ ರೂ. 4.08 ಲಕ್ಷ) ರಾಜ್ಯದ ಮಾರುಕಟ್ಟೆಗೆ ಬಿಡುಗಡೆ ಮಾಡಿ ಅವರು ಮಾತನಾಡಿದರು.

ನಗರೀಕರಣ ಹೆಚ್ಚುತ್ತಿರುವುದರಿಂದ ಸರಕು ಸಾಗಣೆ ವಾಹನಗಳಿಗೂ ಭಾರಿ ಬೇಡಿಕೆ ಇದೆ. `ಮ್ಯಾಕ್ಸಿಮೊ~ ವಾಹನದಿಂದ ಜನಪ್ರಿಯವಾಗಿರುವ `ಎಂಎಂಎಲ್~, 1 ಟನ್‌ನಿಂದ 1.5 ಟನ್ ಸಾಮರ್ಥ್ಯದ ಪಿಕಪ್ ವಾಹನಗಳ ಮಾರುಕಟ್ಟೆಯಲ್ಲಿ ಮೂರನೇ ಎರಡರಷ್ಟು ದೊಡ್ಡ ಪಾಲು ಹೊಂದಿದೆ  ಎಂದು ಕಂಪೆನಿಯ ಮಾರಾಟ ವಿಭಾಗದ ಅಧಿಕಾರಿ ಮಹೇಶ್ ಕುಲಕರ್ಣಿ ಹೇಳಿದರು.

ಹೊಸ ಬೊಲೆರೊ ಮ್ಯಾಕ್ಸಿಟ್ರಕ್ 62 ಬಿಎಚ್‌ಪಿ ಸಾಮರ್ಥ್ಯದ್ದಾಗಿದ್ದು, 2325 ಎಂಡಿಐ ಸುಧಾರಿತ ಯಂತ್ರ ಹೊಂದಿದೆ. ಡೀಸೆಲ್ ಲೀ.ಗೆ 16 ಕಿ.ಮೀ. ಮೈಲೇಜ್, ಪವರ್ ಸ್ಟೇರಿಂಗ್(ಆಯ್ಕೆ) ಇದೆ. 3 ವರ್ಷಗಳ ವಾರಂಟಿಯೂ ಇದೆ ಎಂದು ವಿವರಿಸಿದರು. 

ನಗರ, ಚಿಕ್ಕ ನಗರ, ಪಟ್ಟಣಗಳಿಂದ ಈ ವಾಹನಕ್ಕೆ ಹೆಚ್ಚು ಬೇಡಿಕೆ ಬರುವ ನಿರೀಕ್ಷೆ ಇದೆ. ದೇಶದಾದ್ಯಂತ 800 ಸೇವಾ ಕೇಂದ್ರಗಳ ಮೂಲಕ ಉತ್ತಮ ಸೇವೆ ಒದಗಿಸಲಾಗುತ್ತಿದೆ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT