ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಯನ್ನು ತಿಪ್ಪೆ ಮಾಡುವ ಸಾರಕ್ಕಿ ತರಕಾರಿ ಮಾರುಕಟ್ಟೆ

Last Updated 23 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಕನಕಪುರ ರಸ್ತೆಯ ಸಾರಕ್ಕಿಯಲ್ಲಿರುವ ಮಾರುಕಟ್ಟೆ ಮತ್ತು ಮಂಡಿಗೆ ರೈತರು ತರಕಾರಿ, ತೆಂಗಿನಕಾಯಿ, ಬಾಳೆಎಲೆ ತಂದು ಮಾರಾಟ ಮಾಡುವ ಪ್ರಕ್ರಿಯೆ ಮುಂಜಾನೆ ಆರರಿಂದಲೇ ಶುರುವಾಗುತ್ತದೆ. ಅಂಗಡಿಗಳಲ್ಲಿ ಸಣ್ಣ ಪ್ರಮಾಣದಲ್ಲಿ ತರಕಾರಿ, ಕಾಯಿ ಮಾರಾಟ ಮಾಡುವ ವರ್ತಕರೂ ತಮಗೆ ಬೇಕಾದ ಸಾಮಗ್ರಿ ಖರೀದಿಸಲು ಇಲ್ಲಿಗೆ ಬರುತ್ತಾರೆ.

ಬೆಳಗ್ಗಿನ ಎಂಟು-ಎಂಟೂವರೆ ಹೊತ್ತಿಗೆ ರೈತರು ತಾವು ತಂದ ಸಾಮಗ್ರಿಗಳನ್ನು ಮಾರಾಟ ಮಾಡಿ ಮನೆ ಹಾದಿ ಹಿಡಿಯುವ ಸಮಯ. ಇಲ್ಲಿನ ಮಾರುಕಟ್ಟೆ ಮತ್ತು ಅದರ ಹೊರಗೆ ಅರ್ಥಾತ್ ಸಾರಕ್ಕಿ ಮುಖ್ಯರಸ್ತೆಯಲ್ಲಿ ಪ್ರತಿನಿತ್ಯ ಕಂಡು ಬರುವ ದೃಶ್ಯಗಳಿವು. ಸಮಸ್ಯೆಯೇನೆಂದರೆ, ಹೀಗೆ ರೈತರು ಮತ್ತು ವರ್ತಕರು ವಹಿವಾಟು ಮುಗಿಸಿ ಹೊರಡುವ ಹೊತ್ತಿಗೆ ಸಾರಕ್ಕಿ ಮುಖ್ಯರಸ್ತೆ ಅಕ್ಷರಶಃ ತಿಪ್ಪೆಯಾಗಿರುತ್ತದೆ. ಒಂದಿಷ್ಟು ಮಳೆ ಸುರಿದಿದ್ದರಂತೂ ಕೇಳುವುದೇ ಬೇಡ.

ಕೊಚ್ಚೆಯಲ್ಲೇ ಉರುಳಾಡುವ, ಬಿಕರಿಯಾಗುವ ತರಕಾರಿ ಮೂಟೆಗಳು, ಕಾರ್ಯನಿರ್ವಹಿಸುವ ಕಾಯಿ ಮಂಡಿಗಳು ನೋಡಿದರೆ ವಾಕರಿಕೆ ಬರಿಸುತ್ತವೆ. ಅದನ್ನು ಕಂಡರೆ ಮತ್ತೆ ತರಕಾರಿ ತಿನ್ನಲೇಬಾರದು ಎಂದುಕೊಳ್ಳುವಷ್ಟು ಅಸಹ್ಯ ಹುಟ್ಟುತ್ತದೆ. ಎತ್ತ ಮುಖ ತಿರುವಿದರೂ ಅದೇ ದೃಶ್ಯ. ಮತ್ತೊಂದೆಡೆ, ರಸ್ತೆಯಲ್ಲೇ ಅನಧಿಕೃತ ಮಾರುಕಟ್ಟೆ ತೆರೆದುಕೊಳ್ಳುವ ಕಾರಣ ಟ್ರಾಫಿಕ್‌ ಜಾಮ್‌ ಆಗುತ್ತದೆ. ಇದಕ್ಕೊಂದು ಪರಿಹಾರವಿಲ್ಲವೇ?
- ಡಾ. ವಸುಮತಿ, ದೊಡ್ಡಕಲ್ಲಸಂದ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT