ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಂಕ್ ವಿಜೇತರ ಸಿಹಿನುಡಿ

Last Updated 6 ಜೂನ್ 2012, 19:30 IST
ಅಕ್ಷರ ಗಾತ್ರ

`ವಿದೇಶಕ್ಕೆ ಹೋಗಲ್ಲ~
ಪಿಯುಸಿ ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದೆ. ಈಗ ಸಿಇಟಿ ಎಂಜಿನಿಯರಿಂಗ್‌ನಲ್ಲಿ ಮೊದಲ ರ‌್ಯಾಂಕ್ ಬಂದಿರುವುದು ಸಂತಸ ತಂದಿದೆ. ಪೋಷಕರಿಗೂ ಖುಷಿಯಾಗಿದೆ. ಅಭ್ಯಾಸಕ್ಕೆ ವಿದೇಶಕ್ಕೆ ಹೋಗುವ ಯೋಚನೆ ಇಲ್ಲ. ಭಾರತದಲ್ಲೇ ಉತ್ತಮ ಕಾಲೇಜುಗಳಿವೆ. ಬೆಂಗಳೂರಿನ ಆರ್. ವಿ.ಕಾಲೇಜು ಅಥವಾ ಸುರತ್ಕಲ್‌ನ ಎನ್‌ಐಟಿಕೆನಲ್ಲಿ ವ್ಯಾಸಂಗ ಮಾಡಲು ಬಯಸಿದ್ದೇನೆ.
- ಎಂ.ದೀಪಾ, 1ನೇ ರ‌್ಯಾಂಕ್, ಎಂಜಿನಿಯರಿಂಗ್ ವಿಭಾಗ, ಎಂಇಎಸ್ ಕಿಶೋರ ಕೇಂದ್ರ, ಬೆಂಗಳೂರು

`ಜನರ ಸೇವೆ ಮಾಡುವೆ~
 ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ಇರುವ ನನಗೆ ಡಾಕ್ಟರ್ ಆಗಿ ಜನರ ಸೇವೆ ಮಾಡುವ ಇಚ್ಛೆ ಇದೆ. ಪರೀಕ್ಷೆಗಳಲ್ಲಿ ಉತ್ತಮ ಸಾಧನೆಗೆ ಬೇಕಾದ ಯಶಸ್ಸಿನ ಮಂತ್ರ ಗೊತ್ತಿದೆ. ಮಣಿಪಾಲ್ ಡೀಮ್ಡ ವಿ.ವಿ. ಪ್ರವೇಶ ಪರೀಕ್ಷೆಯಲ್ಲೂ ಪ್ರಥಮ ರ‌್ಯಾಂಕ್ ಗಳಿಸಿರುವ ನನಗೆ ಐಐಟಿಗೆ ಹೋಗುವ ಆಸಕ್ತಿ ಇಲ್ಲ.
ಬೆಂಗಳೂರು ವೈದ್ಯಕೀಯ ಕಾಲೇಜು ಅಥವಾ ಪುದುಚೇರಿಯ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡಲು ಬಯಸಿದ್ದೇನೆ.
- ಅರ್ಚನಾ ಸಾಸಿ, ಮೊದಲ ರ‌್ಯಾಂಕ್, ಎಚ್‌ಎಎಲ್‌ನ ನ್ಯಾಷನಲ್ ಪಬ್ಲಿಕ್ ಸ್ಕೂಲ್, ಬೆಂಗಳೂರು

`ಸ್ವದೇಶದಲ್ಲೇ ಬದುಕು~
 ವಾಸ್ತುಶಿಲ್ಪಿಯಾಗಲು ಬಯಸಿರುವ ನನಗೆ ಅಹಮದಾಬಾದ್‌ನ ಪರಿಸರ ಯೋಜನೆ ಮತ್ತು ತಂತ್ರಜ್ಞಾನ ಕೇಂದ್ರದಲ್ಲಿ ಪ್ರವೇಶ ಪಡೆಯುವ ಉದ್ದೇಶವಿದೆ. ಮುಂದೆ ಹೆಚ್ಚಿನ ವ್ಯಾಸಂಗಕ್ಕಾಗಿ ಜರ್ಮನಿ ಅಥವಾ ಇಂಗ್ಲೆಂಡ್‌ಗೆ ಹೋಗುವ ಆಸೆ ಇದೆ. ವಿದೇಶದಲ್ಲಿ ವ್ಯಾಸಂಗ ಮಾಡಿದರೂ ಅಲ್ಲೇ ನೆಲೆಸುವ ಉದ್ದೇಶವಿಲ್ಲ. ಸ್ವದೇಶಕ್ಕೆ ವಾಪಸಾಗುತ್ತೇನೆ.
- ಎಸ್. ನಕ್ಷಾ, ಮೊದಲ ರ‌್ಯಾಂಕ್, ವಾಸ್ತುಶಿಲ್ಪ ವಿಭಾಗ, ಮೌಂಟ್ ಕಾರ್ಮೆಲ್ ಕಾಲೇಜು, ಬೆಂಗಳೂರು.

`ವೈದ್ಯನಾಗುವೆ~
`ಪ್ರಥಮ ಪಿಯುಸಿಯಿಂದಲೇ ಸಿಇಟಿ ಸಿದ್ಧತೆ ಆರಂಭಿಸಿದ್ದೆ. ನಿಯಮಿತವಾಗಿ ಓದಿದ್ದರಿಂದ ಎರಡನೇ ರ‌್ಯಾಂಕ್ ಬಂದಿದೆ. ಮೈಸೂರು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಎಂಬಿಬಿಎಸ್ ಮಾಡುವ ಗುರಿ ಇದೆ. ತಂದೆ ನಿರಂಜನಕುಮಾರ್ ಬಟ್ಟೆ ವ್ಯಾಪಾರಿ ಆಗಿದ್ದು, ತಾಯಿ ಜಮುನಾಬಾಯಿ ಗೃಹಿಣಿ ಆಗಿದ್ದಾರೆ.
 
ಈ ಸಾಧನೆಯ ಯಶಸ್ಸು ಅವರಿಗೆ ಸಲ್ಲಬೇಕು~ ಎಂದು `ಪ್ರಜಾವಾಣಿ~ ಜೊತೆ ಸಂತಸ ಹಂಚಿಕೊಂಡರು.
-ಪ್ರಿತೇಶ್‌ಕುಮಾರ್‌ಗೆ ಹೊಮಿಯೋಪಥಿಯಲ್ಲಿ ಮೊದಲ ರ‌್ಯಾಂಕ್, ವೈದ್ಯಕೀಯ ವಿಭಾಗ ಎರಡನೇ ರ‌್ಯಾಂಕ್

ಎಂಜಿನಿಯರಿಂಗ್ ವಿಭಾಗ
ಐಎಎಸ್ ಅಧಿಕಾರಿಯಾಗುವ ಕನಸು
ಬಳ್ಳಾರಿ: ವೃತ್ತಿ ಶಿಕ್ಷಣ ಕೋರ್ಸ್‌ನ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಎಂಜಿನಿಯರಿಂಗ್ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ರ‌್ಯಾಂಕ್ ಗಳಿಸಿರುವ ಸ್ಥಳೀಯ ಸ್ವತಂತ್ರ ಪದವಿಪೂರ್ವ (ಬೆಸ್ಟ್) ಕಾಲೇಜು ವಿದ್ಯಾರ್ಥಿ ರಾಜ್ ವಿ. ಜೈನ್, ಐಎಎಸ್ ಅಧಿಕಾರಿಯಾಗುವ ಕನಸು ಹೊತ್ತಿದ್ದಾರೆ. ನಗರದಲ್ಲಿ ಜೀನ್ಸ್ ಪ್ಯಾಂಟ್ ಉತ್ಪಾದನಾ ಘಟಕ ಹೊಂದಿರುವ ವಿನಯಕುಮಾರ್ ಜೈನ್ ಅವರ ಮಗ ರಾಜ್, ಸಿಇಟಿಯಲ್ಲಿ 168 ಅಂಕ ಗಳಿಸಿದ್ದಾರೆ.

ಎಂಜಿನಿಯರ್ ಆಗುವ ಆಸೆ
`ಕೊನೆಯ ಎರಡು ತಿಂಗಳಿನಲ್ಲಿ ಸ್ಪಷ್ಟ ಗುರಿಯೊಂದಿಗೆ ಓದಲು ಆರಂಭಿಸಿದೆ. ಇದರಿಂದಾಗಿ ಉತ್ತಮ ರ‌್ಯಾಂಕ್ ಪಡೆಯಲು ಸಾಧ್ಯವಾಯಿತು. ಬೆಂಗಳೂರು ಅಥವಾ ಮೈಸೂರಿನಲ್ಲೇ ಎಂಜಿನಿಯರಿಂಗ್ ಮಾಡುವ ಆಸೆ ಇದೆ. ವೈದ್ಯಕೀಯ ಕೋರ್ಸ್ ಮಡುವ ಬಗ್ಗೆಯೂ ಯೋಚಿಸುತ್ತಿದ್ದೇನೆ~..

ವೈದ್ಯಕೀಯ/ಎಂಜಿನಿಯರಿಂಗ್‌ನಲ್ಲಿ ರಾಜ್ಯಕ್ಕೆ 6ನೇ ರ‌್ಯಾಂಕ್ ಪಡೆದಿರುವ ಮರಿಮಲ್ಲಪ್ಪ ಕಾಲೇಜಿನ ಶ್ರೇಯಸ್ ನಾಯಕ್  ಉತ್ತಮ ಎಂಜಿನಿಯರ್ ಆಗುವ ಗುರಿ ಹೊಂದಿದ್ದಾರೆ.

ದ್ವಿತೀಯ ಪಿಯುಸಿಯಲ್ಲಿ 590 (ಶೇ 98.33) ಅಂಕ ಪಡೆದು ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದ ಶ್ರೇಯಸ್‌ಗೆ  ಇದೆ. ಭೌತಶಾಸ್ತ್ರ 56, ರಸಾಯನಶಾಸ್ತ್ರ 54, ಗಣಿತಶಾಸ್ತ್ರ 55 ಹಾಗೂ ಜೀವ ವಿಜ್ಞಾನದಲ್ಲಿ 56 ಅಂಕಗಳನ್ನು ಪಡೆದಿದ್ದಾನೆ. ಇವರ ತಂದೆ ಅನಂತ್ ನಾಯಕ್ ಬ್ಯಾಂಕ್ ಉದ್ಯೋಗಿಯಾಗಿದ್ದು, ತಾಯಿ ಗೃಹಿಣಿ ಆಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT