ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ರಾಂಪುರೆ ಕೊಡುಗೆ ಆಪಾರ'

Last Updated 7 ಫೆಬ್ರುವರಿ 2013, 8:00 IST
ಅಕ್ಷರ ಗಾತ್ರ

ಸುರಪುರ: ಹೈದರಾಬಾದ್ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಆ ಮೂಲಕ ಈ ಭಾಗಕ್ಕೆ ಮಹಾದೇವಪ್ಪ ರಾಂಪುರೆ ಉತ್ತಮ ಕೊಡುಗೆ ನೀಡಿದ್ದಾರೆ. ಇಲ್ಲದಿದ್ದರೆ ಅತಿ ಹಿಂದುಳಿದ ಪ್ರದೇಶವಾಗಿದ್ದ ಹೈದರಾಬಾದ್ ಕರ್ನಾಟಕ ಶೈಕ್ಷಣಿಕವಾಗಿ ಇನ್ನಷ್ಟು ಪ್ರಪಾತಕ್ಕೆ ಇಳಿಯುತ್ತಿತ್ತು. ಅವರು ಶಿಕ್ಷಣಕ್ಕೆ ಪರ್ಯಾಯ ಹೆಸರು ಎಂದರೆ ಅತಿಶಯೋಕ್ತಿಯಲ್ಲ ಎಂದು ಪ್ರಾಚಾರ್ಯ ಪ್ರೊ. ಬಿ. ಎಸ್. ಬಡಗಾ ಪ್ರತಿಪಾದಿಸಿದರು.

ಇಲ್ಲಿನ ಪ್ರಭು ಕಲಾ, ವಿಜ್ಞಾನ ಮತ್ತು ಜೆ. ಎಂ. ಬೋಹರಾ ವಾಣಿಜ್ಯ ಪದವಿ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ಮಹಾದೇವಪ್ಪ ರಾಂಪುರೆ ಅವರ ಪುಣ್ಯತಿಥಿಯಲ್ಲಿ ಮಾತನಾಡಿದರು.

ಸಂಸ್ಥೆಯ ಅಡಿಯಲ್ಲಿ ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ನೂರಾರು ಶಾಲಾ, ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಸಾವಿರಾರು ಜನ ಸಿಬ್ಬಂದಿಗೆ ಸಂಸ್ಥೆ ಆಶ್ರಯ ನೀಡಿದೆ. ಸಂಸ್ಥೆಯ ಕಾಲೇಜುಗಳಲ್ಲಿ ಅಭ್ಯಸಿಸಿದ ಲಕ್ಷಾಂತರ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಉತ್ತಮ ಹುದ್ದೆಯಲ್ಲಿ ಇದ್ದಾರೆ. ಈ ಎಲ್ಲ ಸಾಧನೆ ಮಹಾದೇವಪ್ಪ ರಾಂಪುರೆ ಅವರಿಗೆ ಸಲ್ಲಬೇಕು ಎಂದರು.

ಮಹಾದೇವಪ್ಪ ರಾಂಪುರೆ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಡಾ.ಬಿ.ಜಿ. ಭಾವಿ, ಡಾ. ಸಿದ್ದಪ್ಪ, ವೇಣುಗೋಪಾಲ ಜೇವರ್ಗಿ, ರೋಹಿಣಿಕುಮಾರ ಹಿಳ್ಳಿ, ವಿಠಲ ಬಿರಾದಾರ, ಎನ್. ಎಸ್. ಪಾಟೀಲ, ವಿಶ್ವನಾಥ ಎಂ., ಮಹ್ಮದ್ ವಾರಿಸ್ ಕುಂಡಾಲೆ, ಎಸ್. ಎಂ. ಹುನಗುಂದ, ಮಹೇಶ ಗಂವ್ಹಾರ, ವಿಜಯಕುಮಾರ ಬಿರೆದಾರ, ವೀರಣ್ಣ ಜಾಕಾ, ಯಲ್ಲಪ್ಪ ಜಾಗೀರದಾರ, ಶರಣು ಶಿರವಾಳ, ಶಿವು ಕೊಳ್ಳಿ ಇತರರು ಉಪಸ್ಥಿತರಿದ್ದರು. ಬಿ. ಓ. ಬೊಮ್ಮಣ್ಣ ಸ್ವಾಗತಿಸಿದರು. ಧರ್ಮರಾಜ ಪಿಳಬಂಟ ನಿರೂಪಿಸಿದರು. ಸುರೇಶ ಮಾಮಡಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT