ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಕ್ ವಿತ್ ದ ಪ್ರೆಸಿಡೆಂಟ್ ರಸಪ್ರಶ್ನೆ: ಬೆರಗುಗೊಳಿಸಿದ ವಿದ್ಯಾರ್ಥಿಗಳ ಉತ್ತರ

Last Updated 6 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಚೆನ್ನೈನಲ್ಲಿರುವ ಅವೆುರಿಕ ಕಾನ್ಸುಲೇಟ್ ಜನರಲ್ ಕಚೇರಿಯು ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ `ರಾಕ್ ವಿತ್ ದ ಪ್ರೆಸಿಡೆಂಟ್~ ರಸಪ್ರಶ್ನೆ ಸ್ಪರ್ಧಾ ಕಾರ್ಯಕ್ರಮದಲ್ಲಿ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಇತಿಹಾಸ, ರಾಜಕೀಯ ಸ್ಥಿತಿಗತಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ನಗರದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳು ಸರಾಗವಾಗಿ ಉತ್ತರ ನೀಡಿ ಅಚ್ಚರಿ ಮೂಡಿಸಿದರು.

ಅಮೆರಿಕದ ಸ್ವಾತಂತ್ರ್ಯ ದಿನಾಚರಣೆ ಮತ್ತು ಮುಂಬರುವ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಮೂರು ಸುತ್ತಿನ ರಸಪ್ರಶ್ನೆ ಸ್ಪರ್ಧೆಯಲ್ಲಿ ಅಮೆರಿಕ ಚುನಾವಣಾ ಪದ್ಧತಿ, ಅಧ್ಯಕ್ಷರ ವೈಯಕ್ತಿಕ ಸಾಧನೆ, ಅಲ್ಲಿನ ಹೊಸ ಕಾಯ್ದೆಗಳು, ಸಿನಿಮಾ.. ಹೀಗೆ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳಲಾಯಿತು.

ಮೌಂಟ್ ಕಾರ್ಮೆಲ್, ಜ್ಯೋತಿ ನಿವಾಸ್, ಜೈನ್, ಸುರಾನ, ಸೇಂಟ್ ಜೋಸೆಫ್, ಆಲ್-ಅಮೀನ್ ಸೇರಿದಂತೆ 12 ಕಾಲೇಜುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಪ್ರತಿ ಕಾಲೇಜಿನಿಂದ ನಾಲ್ಕು  ವಿದ್ಯಾರ್ಥಿಗಳು ಅಂದರೆ ಒಟ್ಟು 48 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕೊನೆಯ ಸುತ್ತಿನಲ್ಲಿ ಸೇಂಟ್ ಜೋಸೆಫ್ ಕಾಲೇಜು (ಪ್ರಥಮ), ಜ್ಯೋತಿ ನಿವಾಸ್ ಕಾಲೇಜು (ದ್ವಿತೀಯ), ಮೌಂಟ್ ಕಾರ್ಮೆಲ್ ಕಾಲೇಜಿನ ವಿದ್ಯಾರ್ಥಿಗಳು (ತೃತೀಯ) ಬಹುಮಾನ ಪಡೆದರು. ಇವರಿಗೆ ಭಾರತದಲ್ಲಿನ ಅಮೆರಿಕ ರಾಯಭಾರಿ ನ್ಯಾನ್ಸಿ ಜೆ ಪೊವೆಲ್ ಪ್ರಶಸ್ತಿ ವಿತರಿಸಿದರು.

ಪ್ರಥಮ ಬಹುಮಾನ ಪಡೆದ ಸೇಂಟ್ ಜೋಸೆಫ್ ಕಾಲೇಜಿನ ವಿದ್ಯಾರ್ಥಿ ರೋಹನ್ ಮೆಂಜಿಸ್, `ಅಮೆರಿಕ ಕುರಿತು ತಿಳಿದುಕೊಂಡಿರುವ ಜ್ಞಾನವನ್ನು ಪ್ರದರ್ಶಿಸಲು ಹಾಗೂ ಆ ದೇಶದ ಬಗ್ಗೆ ಇನ್ನಷ್ಟು ಮಾಹಿತಿ ಪಡೆದುಕೊಳ್ಳಲು ಇದೊಂದು ಉತ್ತಮ ವೇದಿಕೆಯಾಯಿತು. ಇದನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡು ಪ್ರಥಮ ಬಹುಮಾನ ಗಳಿಸಿರುವುದಕ್ಕೆ ಸಂತಸವೆನಿಸುತ್ತದೆ~ ಎಂದು ಹರ್ಷ ವ್ಯಕ್ತಪಡಿಸಿದರು. ಚೆನ್ನೈನ ಯು.ಎಸ್.ಕಾನ್ಸುಲ್ ಜನರಲ್ ಜೆನ್ನಿಫರ್ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT