ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಕ್ ಸಂಗೀತದ ಸಂಭ್ರಮದಲ್ಲಿ

Last Updated 16 ಜನವರಿ 2012, 19:30 IST
ಅಕ್ಷರ ಗಾತ್ರ

ಸಂಕ್ರಾಂತಿ ಸಂಭ್ರಮಕ್ಕೆ ನಗರದಲ್ಲಿ ಏರ್ಪಡಿಸಿದ್ದ ಬೆಂಗಳೂರು ಹಬ್ಬದಲ್ಲಿ ನಡೆದ ರಾಕ್ ಸಂಗೀತ ರಸದೌತಣವನ್ನೇ ಉಣಬಡಿಸಿತು. ಕಿಂಗ್‌ಫಿಶರ್ ರಾಕ್ ಫೆಸ್ಟಿವಲ್‌ನಲ್ಲಿ ಪ್ರತಿಷ್ಠಿತ ತಂಡಗಳಾದ `ಥರ್ಮಲ್ ಅಂಡ್ ಎ ಕ್ವಾರ್ಟರ್~, `ಭೂಮಿ~, `ಸೀಸರ್ಸ್‌ ಪ್ಯಾಲೇಸ್~ ತಂಡಗಳು ಹಬ್ಬದಲ್ಲಿ ಪಾಲ್ಗೊಂಡಿದ್ದವು.

ಈ ಮೂರು ತಂಡಗಳ ಸಂಗೀತ ಸುಧೆ ಆಸ್ವಾದಿಸಲು ಹಲವೆಡೆಯಿಂದ ಬಂದಿದ್ದ ನೂರಾರು ಪ್ರೇಕ್ಷಕರು ಯುಬಿ ಸಿಟಿಯ ಆಂಪಿಥಿಯೇಟರ್‌ನಲ್ಲಿ ಜಮೆಯಾಗಿದ್ದರು. `ಸೀಸರ್ಸ್‌ ಪ್ಯಾಲೆಸ್~ ಹಾಗೂ `ಭೂಮಿ~ ತಂಡಗಳು ನೆರೆದಿದ್ದ ಕೇಳುಗರ ಲಹರಿಯನ್ನು ಅರ್ಥೈಸಿಕೊಂಡು ಸಂಗೀತದ ಹೊಳೆ ಹರಿಸುತ್ತಿದ್ದರೆ ಕುಳಿತಿದ್ದ ಅಭಿಮಾನಿಗಳು ತಲೆದೂಗುತ್ತಾ ಹೆಜ್ಜೆ ಹಾಕಿದರು. ಬೆಂಗಳೂರು ಮೂಲದ `ಥರ್ಮಲ್ ಅಂಡ್ ಎ ಕ್ವಾರ್ಟರ್~ ತಂಡ ವೇದಿಕೆ ಅಲಂಕರಿಸುತ್ತಿದ್ದಂತೆ ತಂಪಾಗಿದ್ದ ಗಾಳಿಯೂ ಬಿಸಿಯಾದ ಅನುಭವ.

ಕಳೆದ 14ರಿಂದ 16ರವರೆಗೆ ನಡೆದ ಕಿಂಗ್‌ಫಿಶರ್ ರಾಕ್ ಉತ್ಸವದಲ್ಲಿ ಹಲವಾರು ಕಲಾವಿದರು ಪಾಲ್ಗೊಂಡು ಅನೇಕ ಯುವಮನಸ್ಸುಗಳಿಗೆ ಸುಂದರ ಸಂಜೆಯನ್ನು ನೆನಪಿನಲ್ಲಿ ಉಳಿಯುವಂತೆ ಮಾಡಿದರು.

ಬೆಂಗಳೂರು ಹಬ್ಬದ ಭಾಗವಾಗಿ  ಕಿಂಗ್‌ಫಿಶರ್ ರಾಕ್ ಹಬ್ಬ ಯುಬಿ ಸಿಟಿಯಲ್ಲಿ ನಡೆಯಿತು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT