ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಗಿ, ಬತ್ತ ಗದ್ದೆಗೆ ಆನೆ ಹಿಂಡು

Last Updated 20 ಡಿಸೆಂಬರ್ 2013, 6:22 IST
ಅಕ್ಷರ ಗಾತ್ರ

ಬಂಗಾರಪೇಟೆ: ತಾಲ್ಲೂಕಿನ ಗಡಿ ಭಾಗದಲ್ಲಿ ಕಳೆದ 29 ದಿನಗಳಿಂದ ಹೊಲ–ಗದ್ದೆಗಳಿಗೆ ಲಗ್ಗೆಯಿಟ್ಟು ಬೆಳೆ ನಾಶಮಾಡುತ್ತಿರುವ ಆನೆ ಹಿಂಡು ಗುರುವಾರ ರಾತ್ರಿ ಕಾಮಸಮುದ್ರ 6ನೇ ಬ್ಲಾಕ್‌ ಬಳಿ ಕಂಡುಬಂದಿದೆ.

ಕಳೆದ ಎರಡು ದಿನದಿಂದ ಯರ­ಗೋಳು, ಬಲಮಂದೆ ಕಾಡಿನಲ್ಲಿದ್ದ ಆನೆ ಹಿಂಡು ಸುಮಾರು ಐದಾರು ಕಿಲೋ ಮೀಟರ್‌ ಸಂಚರಿಸಿ ಆಂಧ್ರ ಗಡಿ ಭಾಗದತ್ತ ಮುಖ ಮಾಡಿವೆ. ಬುಧ­ವಾರ ರಾತ್ರಿ ಹಾದಿಯಲ್ಲಿ ಸಿಕ್ಕ ಬೋಡೇನಹಳ್ಳಿ, ಕೊಂಗರಹಳ್ಳಿ, ನಡಂ­ಪಲ್ಲಿ, ಹಾರ್ಮಾನಹಳ್ಳಿ, ಬಾದಗುಟ್ಲ­ಹಳ್ಳಿ ಗ್ರಾಮಗಳ ಬೆಳೆಗಳಿಗೆ ದಾಳಿ ಮಾಡಿ ಅಪಾರ ನಷ್ಟ ಮಾಡಿವೆ.

ಹಾರ್ಮಾನಹಳ್ಳಿ ಗ್ರಾಮದ ಚಲ್ಲಪ್ಪ ಎಂಬುವರ ಬತ್ತ ತುಳಿದು ತಿಂದಿವೆ. ಕುಚ್ಚಪ್ಪ ಅವರ ರಾಗಿ ಅಡ್ಡೆಗಳನ್ನು ಕೆಡವಿ ಚೆಲ್ಲಾಪಿಲ್ಲಿಗೊಳಿಸಿವೆ. ಮುನಿ­ರತ್ನಂ ಎನ್ನುವರ ಆಲೂಗಡ್ಡೆ ರಾಶಿ­ಯನ್ನು ತಿಂದಿವೆ. ವೆಂಕಟೇಶಪ್ಪ ಅವರ ಟೊಮೆಟೊ ತೋಟ ತುಳಿದು ನಾಶ­ಪಡಿಸಿವೆ.

ಅಲ್ಲದೆ ಸಮಾಧಿಗೆ ಕಟ್ಟ­ಲಾಗಿದ್ದ ಬೃಂದಾವನ ಕೆಡವಿ ನೆಲಕ್ಕೆ ಉರುಳಿಸಿವೆ ಎಂದು ಹಾರ್ಮಾನಹಳ್ಳಿ ಗ್ರಾಮಸ್ಥ ಬಳ್ಳಾರಿ ವೆಂಕಟೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.  

ಬೋಡೇನಹಳ್ಳಿ ಗ್ರಾಮದ ರಾಮರೆಡ್ಡಿ ಎಂಬುವರ ಟೊಮೆಟೊ ಬೆಳೆ ಸಂಪೂರ್ಣವಾಗಿ ತುಳಿದಿವೆ. ರಾಮ­ಚಂದ್ರ, ಶ್ರೀರಾಮರೆಡ್ಡಿ ಅವರ ರಾಗಿ ಬೆಳೆ ತಿಂದಿವೆ ಎಂದು ಬೋಡೇನಹಳ್ಳಿ ಗ್ರಾಮದ ಪಂಚಾಯಿತಿ ಮಾಜಿ ಸದಸ್ಯ ಲಕ್ಷ್ಮಿನಾರಾಯಣ ತಿಳಿಸಿದರು.
ಮೂರು ಗುಂಪುಗಳಾಗಿದ್ದ ಆನೆಗಳನ್ನು ಒಂದು ಗೂಡಿಸಲಾಗಿದೆ.

ಬನ್ನೇರಘಟ್ಟ-­ದಿಂದ ಕರೆಸಿರುವ 12 ಮಂದಿ ವಿಶೇಷ ಪರಿಣಿತ ತಂಡ ಸೇರಿದಂತೆ 120 ಮಂದಿ ಆನೆ ನಿಯಂತ್ರಿಸುವಲ್ಲಿ ಹರ­ಸಾಹಸ ಪಡುತ್ತಿದ್ದೇವೆ. ಹಗಲು ಕಾಡಿ­ನಲ್ಲಿ ವಿಶ್ರಮಿಸುತ್ತಿದ್ದು, ರಾತ್ರಿ ವೇಳೆ ಮಾತ್ರ ಹೊರಗಡೆ ಬರು­ತ್ತಿರುವು­ದರಿಂದ ಕಾರ್ಯಾಚರಣೆ ಕುಂಠಿತ­ಗೊಂಡಿದೆ ಎಂದು ಬಂಗಾರ­ಪೇಟೆ ವಲಯ ಅರಣ್ಯ ಅಧಿಕಾರಿ ಚಂದ್ರ­ಶೇಖರ ರೆಡ್ಡಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT