ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾರಣಿಗಳಿಗೆ ಸೇನೆ ಮುಖಾಂತರ ಹಣ: ತನಿಖೆಗೆ ಸಿದ್ಧ-ಶಿಂಧೆ

ಕಾಶ್ಮೀರದಲ್ಲಿ ಸ್ಥಿರತೆ
Last Updated 24 ಸೆಪ್ಟೆಂಬರ್ 2013, 9:11 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮಾಜಿ ಸೇನಾ ಮುಖ್ಯಸ್ಥರಾದ ವಿ.ಕೆ. ಸಿಂಗ್ ಅವರು `ಜಮ್ಮು ಮತ್ತು ಕಾಶ್ಮೀರದಲ್ಲಿ `ಸ್ಥಿರತೆ' ಕಾಪಾಡಲು ಅಲ್ಲಿನ ರಾಜಕಾರಣಿಗಳಿಗೆ ಸೇನೆ ಮುಖಾಂತರ ಅಕ್ರಮವಾಗಿ ಹಣ ನೀಡಲಾಗಿದೆ' ಎಂಬುದನ್ನು  ಬಹಿರಂಗಪಡಿಸಿದರೆ ಅಂತಹವರ ವಿರುದ್ಧ ಸರ್ಕಾರ ತನಿಖೆ ನಡೆಸಲು ಸಿದ್ಧವಿದೆ ಎಂದು ಗೃಹ ಸಚಿವ ಸುಶೀಲ್‌ಕುಮಾರ್ ಶಿಂಧೆ ಮಂಗಳವಾರ ತಿಳಿಸಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸಚಿವರಿಗೆ ಪತ್ರಕರ್ತರು ಜನರಲ್ ವಿ.ಕೆ.ಸಿಂಗ್ ಆರೋಪದ ಬಗ್ಗೆ ಗಮನ ಸೆಳೆದಾಗ `ಯಾರು ಯಾರಿಗೆ ಅಕ್ರಮವಾಗಿ ಹಣ ನೀಡಲಾಗಿದೆ ಎಂಬುದನ್ನು ವಿ.ಕೆ. ಸಿಂಗ್ ಬಹಿರಂಗಪಡಿಸಿದರೆ ಸರ್ಕಾರ ಅವರ ವಿರುದ್ಧ ತನಿಖೆ ನಡೆಸುವುದು ಎಂದರು.

ವಿ.ಕೆ.ಸಿಂಗ್ ಕಾಶ್ಮೀರದಲ್ಲಿ ಸ್ಥಿರ ಆಡಳಿತ ಸ್ಥಾಪಿಸುವ ಸಲುವಾಗಿ ಅಲ್ಲಿನ ರಾಜಕಾರಣಿಗಳು ಮತ್ತು ವಿವಿಧ ಸಂಘಸಂಸ್ಥೆಗಳಿಗೆ ಸೇನೆ ಮುಖಾಂತರ ಹಣ ಹಂಚಲಾಗಿದೆ ಎಂದು ನಿನ್ನೆ  ಆರೋಪ ಮಾಡಿದ್ದರು.

ಈ ಪ್ರಕರಣಕ್ಕೆ ಅವರೇ ಪ್ರಮುಖ ಸಾಕ್ಷಿಯಾಗಿರುವುದರಿಂದ ನಡೆದಿರುವ ಅಕ್ರಮವನ್ನು ಬಹಿರಂಗಪಡಿಸಿದರೆ ಸರ್ಕಾರ ಮುಂದಿನ ಕ್ರಮ ಜರುಗಿಸಲಿದೆ ಎಂದು ಶಿಂಧೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT