ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ನಾಟಕೋತ್ಸವ

Last Updated 7 ಅಕ್ಟೋಬರ್ 2011, 18:30 IST
ಅಕ್ಷರ ಗಾತ್ರ

ಬೆಂಗಳೂರು:  ಇಲ್ಲಿಯ ಜೆ.ಪಿ.ನಗರದಲ್ಲಿರುವ `ರಂಗಶಂಕರ~ವು ಅಕ್ಟೋಬರ್ 15ರಿಂದ 23ರವರೆಗೆ `ನಾಟಕದಲ್ಲಿ ರಾಜಕೀಯ~ ಕುರಿತು ನಾಟಕೋತ್ಸವ- 2011ನ್ನು ಹಮ್ಮಿಕೊಂಡಿದ್ದು, ಇದೇ ಸಂದರ್ಭದಲ್ಲಿ ವಿಚಾರ ಸಂಕಿರಣ, ಸಿನಿಮಾ ಪ್ರದರ್ಶನ ಮತ್ತು ರಾಜಕೀಯ ವಿಡಂಬನಾತ್ಮಕ ವ್ಯಂಗ್ಯಚಿತ್ರಗಳ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ.

ನಗರದಲ್ಲಿ ಶುಕ್ರವಾರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಚಲನಚಿತ್ರ ನಿರ್ದೇಶಕ ಪ್ರಕಾಶ್ ಬೆಳವಾಡಿ ಮತ್ತು ರಂಗಶಂಕರದ ಸಂಸ್ಥಾಪಕಿ ಅರುಂಧತಿ ನಾಗ್ ಅವರು ಈ ಮಾಹಿತಿ ನೀಡಿದರು.

ನೀಲಕಂಠೇಶ್ವರ ನಾಟ್ಯ ಸಂಘದ (ನೀನಾಸಂ) ಕಲಾವಿದರು ಅಭಿಯನಯಿಸಲಿರುವ `ಕಂತು~, ಸಂಕೇತ್ ತಂಡದ `ನಮ್ಮೂರ ಹೊಟ್ಟೆ ಬಾಕರು~, ಮತ್ತು ಸಿ.ಎಫ್.ಡಿ. ತಂಡದ `ಟಾಂಗೋ~ ಎಂಬ ಮೂರು ಹೊಸ ಪ್ರಯೋಗಗಳು ಸೇರಿದಂತೆ ಆರು ನಾಟಕಗಳ ಪ್ರದರ್ಶನ ನಡೆಯಲಿದೆ.

ನಾಟಕ ಮತ್ತು ಕಲಾವರ್ಧಕ ಶಿಬಿರವನ್ನು ಖ್ಯಾತ ಕಲಾ ವಿಮರ್ಶಕ ಸದಾನಂದ ಮೆನನ್ ನಡೆಸಿಕೊಡಲಿದ್ದು, ರಮಾಕಾಂತ ಗುಂಡೇಚ, ಮಾರ್ಗಿ ಮಧು, ಬಾಲನ್ ನಂಬಿಯಾರ್, ಸುನಿಲ್ ಕೊಠಾರಿ ಅವರು ಶಿಬಿರದಲ್ಲಿ ಮಾತನಾಡಲಿದ್ದಾರೆ.

ವಿಚಾರ ಸಂಕಿರಣವು `ಐಡೆಂಟಿಟಿ: ರಾಜನಿಷ್ಠೆ ಮತ್ತು ಪರಭಾರೆ~ ಕುರಿತು ನಡೆಯಲಿದ್ದು, ಪ್ರಕಾಶ್ ಬೆಳವಾಡಿ ಪ್ರಸ್ತುತಪಡಿಸಲಿದ್ದಾರೆ. ಅಂಕಣಕಾರ ಆಕಾರ್ ಪಟೇಲ್ ಅವರು ನರೇಂದ್ರ ಮೋದಿ ಕುರಿತು `ದಿ ಇಂಪಾಸಿಬಲ್ ಲೀಪ್ ಫ್ರಂ ಗುಜರಾತಿ ಅಸ್ಮಿತ ಟು ಇನ್‌ಕ್ಲುಸಿವ್ ಇಂಡಿಯಾ~ ಎಂಬ ವಿಷಯದ ಬಗ್ಗೆ ಮಾತನಾಡಲಿದ್ದಾರೆ.

ಡಾ.ಚಂದನಗೌಡ ಅವರು `ಬೆಂಗಳೂರು ಮತ್ತು ಕನ್ನಡತನದ ಪ್ರಶ್ನೆ~ ಕುರಿತು ತಮ್ಮ ವಿಚಾರ ಮಂಡಿಸಲಿದ್ದಾರೆ.
ಬರಹಗಾರ್ತಿ ಡಾ.ಆರ್ಶಿಯ ಸತ್ತಾರ್ ಅವರು `ಅಸ್ ಎಂಡ್ ದೆಮ್ ಯೂರೋಪ್ಸ್, ಫೈಲ್ಡ್ ರೊಮ್ಯಾನ್ಸ್ ವಿಥ್ ಕಲ್ಚರಲಿಸಂ~ ಕುರಿತು           ಮಾತನಾಡಲಿದ್ದಾರೆ.

ನಾಟಕೋತ್ಸವದಲ್ಲಿ ಪ್ರದರ್ಶನಗೊಳ್ಳುವ ನಾಟಕಗಳು-ಕಂತು, ಕಾಮ್ರೇಡ್ ಕುಂಭಕರ್ಣ, ಕೃಷ್ಣ ಸಂಧಾನ, ತೀಸವಿ ಶತಾಬ್ದಿ, ಟಾಂಗೋ, ನಮ್ಮೂರು ಬೆಂಕಿ ಬಾಕರು. ನಾಟಕಗಳಿಗೆ ರೂ 100 (ತಲಾ ಒಂದು ಪ್ರದರ್ಶನಕ್ಕೆ) ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ. ಟಿಕೆಟ್‌ಗಳು ರಂಗಶಂಕರದ ಬಾಕ್ಸ್ ಆಫೀಸ್‌ನಲ್ಲಿ ಮತ್ತು www.ind-i-a-s-t-a-ge.in, www.bo-ok-m-y-s-h-ow.co-m-ನಲ್ಲಿ ಪಡೆಯಬಹುದು.

ಚಲನಚಿತ್ರಗಳು-ನೀರೋಸ್ ಗೆಸ್ಟ್ಸ್, ಇರಾನ್ (ಈಸ್ ನಾಟ್ ಎ ಪ್ರಾಬ್ಲಂ). ಚಲನಚಿತ್ರಗಳಿಗೆ ಉಚಿತ ಪ್ರವೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT