ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯದಿಂದ ದೂರ ಇರಲು ಬಿಎಸ್‌ವೈಗೆ ಸಲಹೆ

Last Updated 8 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೊಸ ಪಕ್ಷ ಸ್ಥಾಪಿಸುವ ಬದಲು ರಾಜಕೀಯದಿಂದಲೇ ದೂರ ಇರಬೇಕು~ ಎಂದು ಧಾರವಾಡದ ಸಮಾಜ ಪರಿವರ್ತನಾ ಸಂಸ್ಥೆ ಮುಖ್ಯಸ್ಥ ಎಸ್.ಆರ್‌ಹಿರೇಮಠ  ಸೋಮವಾರ ಇಲ್ಲಿ ಹೇಳಿದರು.

`ಹೊಸ ಪಕ್ಷವನ್ನು ಸ್ಥಾಪಿಸುವವರು ಮೊದಲು ತಮ್ಮ ಬೆನ್ನನ್ನು ನೋಡಿಕೊಳ್ಳಬೇಕು. ಆರೋಪ ಹೊತ್ತಿರುವವರು ರಾಜಕೀಯದಿಂದ ದೂರವಿದ್ದು ಪಾರದರ್ಶಕ, ಪ್ರಾಮಾಣಿಕ ರಾಜಕಾರಣಕ್ಕೆ ಅವಕಾಶ ನೀಡಬೇಕು~ ಎಂದು ಪತ್ರಿಕಾಗೋಷ್ಠಿಯಲ್ಲಿ ಸಲಹೆ ನೀಡಿದರು.

`ಭ್ರಷ್ಟಾಚಾರ ಆರೋಪ ಹೊತ್ತಿರುವ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿ ಮತ್ತು ಧರ್ಮಸಿಂಗ್ ಕೂಡಾ ಸಾರ್ವಜನಿಕ ಜೀವನದಿಂದ ವಿಮುಕ್ತರಾಗಬೇಕು~ ಎಂದೂ ಅವರು ಒತ್ತಾಯಿಸಿದರು. `ಭ್ರಷ್ಟಾಚಾರ ವಿರುದ್ಧ ಹೋರಾಟದಲ್ಲಿ ನಿರತರಾಗಿರುವ ಅರವಿಂದ ಕೇಜ್ರಿವಾಲ್ ಹೊಸ ಪಕ್ಷ ಕಟ್ಟುವುದರಲ್ಲಿ ತಪ್ಪೇನೂ ಇಲ್ಲ. ಭ್ರಷ್ಟ ರಾಜಕೀಯ ತುಂಬಿರುವ ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಾಮಾಣಿಕತೆ, ಜನರ ಆಶೋತ್ತರಗಳಿಗೆ ಸ್ಪಂದಿಸುವ ದೃಷ್ಟಿಯಲ್ಲಿ ಅವರಿಗೆ ನಮ್ಮ ಬೆಂಬಲವಿದೆ~ ಎಂದರು.

`ಅದಿರು ಸಾಗಣೆಯಲ್ಲಿ ಡಿ.ಕೆ.ಶಿವಕುಮಾರ್, ಕುಮಾರಸ್ವಾಮಿ, ಧರ್ಮಸಿಂಗ್ ನಡೆಸಿರುವ ಅಕ್ರಮ ವ್ಯವಹಾರದ ದಾಖಲೆಗಳನ್ನು ವಕೀಲ ಪ್ರಶಾಂತ್ ಭೂಷಣ್ ಅವರಿಗೆ ಈಗಾಗಲೇ ನೀಡಿದ್ದೇನೆ  ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT