ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜತಾಂತ್ರಿಕನಿಗೆ ಬೀಳ್ಕೊಡುಗೆ

Last Updated 11 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ಭಾರತೀಯ ರಾಜತಾಂತ್ರಿಕ ಕಚೇರಿಯ ಹಿರಿಯ ಅಧಿಕಾರಿ ಆಸೀಫ್ ಇಬ್ರಾಹಿಂ ಅವರಿಗೆ ಇಲ್ಲಿನ ಭಾರತೀಯ ಸಮುದಾಯ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಿತು.

 ಮೂರು ವರ್ಷ ಅಧಿಕಾರ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಇಬ್ರಾಹಿಂ ತಾಯ್ನಾಡಿಗೆ ಮರಳಲಿದ್ದು, ಂದೂಜಾ ಕುಟುಂಬ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿತ್ತು.

ಹಂಗಾಮಿ ರಾಯಭಾರಿ ರಾಜೇಶ್ ಪ್ರಸಾದ್, ಬ್ರಿಟನ್ ಪಾರ್ಲಿಮೆಂಟ್ ಮೇಲ್ಮನೆ ಸದಸ್ಯರಾದ ಗುಲಾಮ್ ನೂನ್, ರಾಜ್ ಲೂಂಬಾ, ಹಮೀದ್, ಭಾರತೀಯ ವಿದ್ಯಾ ಭವನದ ಅಧ್ಯಕ್ಷ ಜೋಗಿಂದರ್ ಸಂಗೇರ್ ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.   ಜಿ.ಪಿ ಹಿಂದೂಜಾ ಉದ್ಯಮ ಗುಂಪಿನ ಪರವಾಗಿ ಸಂಜಯ್ ಹಿಂದೂಜಾ ಶುಭ ಹಾರೈಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT