ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಭವನದಲ್ಲಿ ಮಹಾತ್ಮನ ಗಾಯನ...

Last Updated 2 ಅಕ್ಟೋಬರ್ 2012, 18:55 IST
ಅಕ್ಷರ ಗಾತ್ರ

ಬೆಂಗಳೂರು: `ವೈಷ್ಣವ ಜನತೋ ತೇನೆ ಕಹಿಯೆ ಜಿ, ಪೀಡ್ ಪರಾಯೇ ಜಾನೆರೆ...~ ಗೀತೆ ಹರಿಯುತ್ತಿದ್ದಂತೆ ಅಲ್ಲಿ ನೆರೆದಿದ್ದವರ ಮನಗಳಲ್ಲಿ ಗಾಂಧಿ ಸ್ಮೃತಿಯು ಅಲೆ ಅಲೆಯಾಗಿ ಹೊಮ್ಮಿತು. ತಣ್ಣಗೆ ಕೊರೆಯುತ್ತಿದ್ದ ಸಂಜೆಯಲ್ಲಿ ರಾಜಭವನದ ಗಾಜಿನ ಮನೆ ಗಾಂಧಿ ಜಯಂತಿಯ ಆಚರಣೆಗೆ ಸಾಕ್ಷಿಯಾಯಿತು.

ಸರ್ವೋದಯ ಅಂತರರಾಷ್ಟ್ರೀಯ ಟ್ರಸ್ಟ್ ಬೆಂಗಳೂರು ದೂರದರ್ಶನ ಕೇಂದ್ರ ಮತ್ತು ಆಕಾಶವಾಣಿ ಕೇಂದ್ರದ ಸಹಯೋಗದಲ್ಲಿ ಮಂಗಳವಾರ `ಗಾಂಧಿ ಜಯಂತಿ- ಅಹಿಂಸಾ ಮಹೋತ್ಸವ~ ನೃತ್ಯ ಹಾಗೂ ಗೀತ ನಮನ ಕಾರ್ಯಕ್ರಮವನ್ನು ಏರ್ಪಡಿಸಿತ್ತು.

ಗಾಯಕಿ ಭಾರತಿ ಪ್ರತಾಪ್ ಅವರು `ವೈಷ್ಣವ ಜನತೋ ತೇನೆ ಕಹಿಯೆ~ ಗೀತೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಿದರು. ನೃತ್ಯ ಕಲಾವಿದೆ ಪದ್ಮಜಾ ಸುರೇಶ್ ಮತ್ತು ತಂಡದವರು `ಅಹಿಂಸಾ ಶಕ್ತಿ~ ನೃತ್ಯರೂಪಕ ಪ್ರಸ್ತುತಪಡಿಸಿದರು.

ಕಾಂಗೋದ ಗಾಯಕರು ಹಾಡಿದ `ವಿ ಆರ್ ದೇರ್~ (ನಾವಲ್ಲಿದ್ದೇವೆ) ಹಾಗೂ ನೇಪಾಳದ ಕಲಾವಿದೆಯರ ನೃತ್ಯ ಮತ್ತು ರುವಾಂಡದ ಕಲಾವಿದೆಯರು ಪ್ರಸ್ತುತಪಡಿಸಿದ `ಅರಿ ಹೆಹೆ~ (ಶಾಂತಿ) ನೃತ್ಯಗಳು ಪ್ರೇಕ್ಷಕರ ಮನಸೂರೆಗೊಂಡವು.

ಫ್ರಾಂಕ್ ಆಂಥೋನಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಸರ್ವ ಧರ್ಮಗಳ ಧರ್ಮ ಗುರುಗಳಿಂದ ಧರ್ಮ ಗ್ರಂಥಗಳ ಪಠಣ ನಡೆಯಿತು.

ರಾಜ್ಯಪಾಲ ಹಂಸರಾಜ್ ಭಾರದ್ವಾಜ್, ಕೊಳದ ಮಠ ಮಹಾಸಂಸ್ಥಾನದ ಡಾ.ಶಾಂತವೀರ ಸ್ವಾಮೀಜಿ, ಆರ್ಚ್‌ಡಿಯೋಸಿಸ್‌ನ ಚಾನ್ಸಲರ್ ಎ.ಎಸ್. ಅಂಥೋನಿ ಸ್ವಾಮಿ, ಆರ್ಚ್ ಬಿಷಪ್‌ರ ಪ್ರತಿನಿ ಸಿ.ಫ್ರಾನ್ಸಿಸ್, ಮಹಾಬೋ ಸೊಸೈಟಿಯ ಆನಂದ್ ಭಂತೇಜಿ, ಹೈಕೋರ್ಟ್ ನ್ಯಾಯಮೂರ್ತಿ ಕೆ.ಶ್ರೀಧರ್ ರಾವ್, ಬ್ರಿಟನ್ನಿನ ಉಪ ಹೈ ಕಮಿಷನರ್ ಇಯಾನ್ ಫೆಲ್ಟನ್, ಜರ್ಮನ್ ಕಾನ್ಸುಲ್ ಜನರಲ್ ಹ್ಯಾನ್ಸ್ ಗುಂಟರ್ ಲಾಫ್ಲರ್, ರಷ್ಯಾ ಸಮೂಹಗಳ ಭಾರತದ ಮುಖ್ಯ ಪ್ರತಿನಿ ಅಲೆಗ್ಸಾಂಡರ್ ಉಸ್ತಿನೋವ್ ಮತ್ತಿತರರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT