ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ತಾನ್ ರಾಯಲ್ಸ್‌ಗೆ ಸುಲಭ ಗೆಲುವು

Last Updated 13 ಮೇ 2012, 19:30 IST
ಅಕ್ಷರ ಗಾತ್ರ

ಜೈಪುರ (ಪಿಟಿಐ): ಕಷ್ಟವಾಗಲಿಲ್ಲ ಗೆಲುವು. ಇಷ್ಟವಾಗುವಂಥ ಬ್ಯಾಟಿಂಗ್; ಎದುರಾಳಿ ಪಡೆಗೆ ಸವಾಲಾಗುವಂಥ ಬೌಲಿಂಗ್. ಪರಿಣಾಮ ರಾಜಸ್ತಾನ ರಾಯಲ್ಸ್‌ಗೆ 45 ರನ್‌ಗಳ ಸುಲಭ ಜಯ.

`ಟಾಸ್~ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡಾಗಲೇ ರಾಹುಲ್ ದ್ರಾವಿಡ್ ಮೊಗದಲ್ಲಿ ವಿಶ್ವಾಸದ ನಗು. ನಿರೀಕ್ಷೆ ಹುಸಿಯಾಗಲಿಲ್ಲ. ಭಾನುವಾರದ ಪಂದ್ಯದಲ್ಲಿ ಪುಣೆ ವಾರಿಯರ್ಸ್ ಪಡೆಯು ವಾರಿಯರ್ಸ್‌ಗೆ ಶರಣಾಯಿತು.

ಈ ಜಯದಿಂದ ಆಸೆಯ ಚಿಗುರೊಂದು ಮೂಡಿದ್ದಂತೂ ನಿಜ. ಐಪಿಎಲ್ ಟೂರ್ನಿಯ ಪ್ಲೇಆಫ್‌ನಲ್ಲಿ ಆಡುವ ಲೆಕ್ಕಾಚಾರ ಮಾಡಲು ರಾಯಲ್ಸ್‌ಗೆ ಸಣ್ಣದೊಂದು ಅವಕಾಶ. ವಾರಿಯರ್ಸ್‌ಗೆ ಮಾತ್ರ ಅದೃಷ್ಟ ಕೈಬಿಟ್ಟು ನಡೆದ ಅನುಭವ.

ಹದಿನಾಲ್ಕು ಪಂದ್ಯಗಳಲ್ಲಿ ಏಳರಲ್ಲಿ ಗೆದ್ದು ಹದಿನಾಲ್ಕು ಪಾಯಿಂಟುಗಳನ್ನು ಗಳಿಸಿರುವ ರಾಜಸ್ತಾನ ರಾಯಲ್ಸ್ ಇನ್ನೂ ಆಸೆ ಕೈಬಿಟ್ಟಿಲ್ಲ. ಬಾಕಿ ಇರುವ ಇನ್ನೆರಡು ಪಂದ್ಯಗಳಲ್ಲಿ ಯಶ ಪಡೆದು ಲೀಗ್ ಪಟ್ಟಿಯಲ್ಲಿ ಮೊದಲ ನಾಲ್ಕರಲ್ಲಿ ಒಂದು ಸ್ಥಾನಕ್ಕೆ ಪೈಪೋಟಿ ನಡೆಸುವ ಅವಕಾಶದ ಬಾಗಿಲಿನ್ನೂ ತೆರೆದಿದೆ.

ಅಜಿಂಕ್ಯ ರಹಾನೆ (61; 47 ಎಸೆತ, 7 ಬೌಂಡರಿ) ಹಾಗೂ ಶೇನ್ ವ್ಯಾಟ್ಸನ್ (58; 31 ಎ., 6 ಬೌಂ., 4 ಸಿ.) ಜೊತೆಯಾಗಿ ಎರಡನೇ ವಿಕೆಟ್‌ನಲ್ಲಿ 94 ರನ್‌ಗಳನ್ನು ಗಳಿಸಿದ್ದು ರಾಯಲ್ಸ್‌ಗೆ ಈ ಪಂದ್ಯದಲ್ಲಿ ಗೆಲುವಿನ ವಿಶ್ವಾಸ ನೀಡಿತು. ಇಪ್ಪತ್ತು ಓವರುಗಳಲ್ಲಿ ನಾಲ್ಕು ವಿಕೆಟ್ ಮಾತ್ರ ಕಳೆದುಕೊಂಡ ವಿಜಯಿ ತಂಡವು 170 ರನ್ ಗಳಿಸಿತು.

ಪ್ರಭಾವಿ ದಾಳಿ ನಡೆಸುವ ಬೌಲರ್‌ಗಳನ್ನು ಹೊಂದಿದ ರಾಯಲ್ಸ್ ಎದುರು ಈ ಗುರಿ ಮುಟ್ಟುವುದು ವಾರಿಯರ್ಸ್‌ಗೆ ಕಷ್ಟವಾಗುತ್ತದೆ ಎನ್ನುವ ನಿರೀಕ್ಷೆಯೂ ತಪ್ಪಾಗಲಿಲ್ಲ. ಅಜಿತ್ ಚಾಂದಿಲಾ (13ಕ್ಕೆ4) ಮೊನಚಿನ ದಾಳಿಯು `ದಾದಾ~ ಪಡೆಗೆ ದೊಡ್ಡ ಪೆಟ್ಟು ನೀಡಿತು. ನಾಯಕ ಗಂಗೂಲಿ, ಜೆಸ್ಸಿ ರೈಡರ್, ರಾಬಿನ್ ಉತ್ತಪ್ಪ ಹಾಗೂ ಅನುಸ್ತಾಪ್ ಮಜುಮ್ದಾರ್ ಎರಡಂಕಿಯ ಮೊತ್ತವನ್ನೂ ಮುಟ್ಟಲಿಲ್ಲ. ವಾರಿಯರ್ಸ್ ತನ್ನ ಪಾಲಿನ ಇಪ್ಪತ್ತು ಓವರುಗಳು ಕೊನೆಗೊಂಡಾಗ ಗಳಿಸಿದ್ದು ಒಂಬತ್ತು ವಿಕೆಟ್ ನಷ್ಟಕ್ಕೆ 125 ರನ್ ಮಾತ್ರ.

ಸ್ಕೋರ್ ವಿವರ:
ರಾಜಸ್ತಾನ ರಾಯಲ್ಸ್: 20 ಓವರುಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 170
ರಾಹುಲ್ ದ್ರಾವಿಡ್ ಸಿ ರಾಬಿನ್ ಉತ್ತಪ್ಪ ಬಿ ಆಶಿಶ್ ನೆಹ್ರಾ  21
ಅಜಿಂಕ್ಯಾ ರಹಾನೆ ಬಿ ಆ್ಯಂಜೆಲೊ ಮ್ಯಾಥ್ಯೂಸ್  61
ಶೇನ್ ವ್ಯಾಟ್ಸನ್ ಬಿ ಆಶಿಶ್ ನೆಹ್ರಾ  58
ಬ್ರಾಡ್ ಹಾಡ್ಜ್ ಸಿ ಸೌರವ್ ಗಂಗೂಲಿ ಬಿ ಆಶಿಶ್ ನೆಹ್ರಾ  14
ಸ್ಟುವರ್ಟ್ ಬಿನ್ನಿ ಔಟಾಗದೆ  06
ಜಾನ್ ಬೋಥಾ ಔಟಾಗದೆ  07
ಇತರೆ: (ವೈಡ್-3)  03
ವಿಕೆಟ್ ಪತನ: 1-29 (ರಾಹುಲ್ ದ್ರಾವಿಡ್; 4.3), 2-123 (ಶೇನ್ ವ್ಯಾಟ್ಸನ್; 14.3), 3-156 (ಬ್ರಾಡ್ ಹಾಡ್ಜ್, 18.2), 4-162 (ಅಜಿಂಕ್ಯಾ ರಹಾನೆ; 19.2).
ಬೌಲಿಂಗ್: ಮುರಳಿ ಕಾರ್ತಿಕ್ 4-0-39-0 (ವೈಡ್-2), ಆಶಿಶ್ ನೆಹ್ರಾ 4-0-23-3, ಭುವನೇಶ್ವರ ಕುಮಾರ್ 4-0-33-0, ರಾಹುಲ್ ಶರ್ಮ 3-0-31-0, ಆ್ಯಂಜೆಲೊ ಮ್ಯಾಥ್ಯೂಸ್ 4-0-29-1, ಜೆಸ್ಸಿ ರೈಡರ್ 1-0-15-0
ಪುಣೆ ವಾರಿಯರ್ಸ್: 20 ಓವರುಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 125
ಸೌರವ್ ಗಂಗೂಲಿ ಸ್ಟಂಪ್ಡ್ ಶ್ರೀವತ್ಸ ಗೋಸ್ವಾಮಿ ಬಿ ಅಜಿತ್ ಚಾಂಡಿಲ  02
ಜೆಸ್ಸಿ ರೈಡರ್ ಸಿ ಶೇನ್ ವ್ಯಾಟ್ಸನ್ ಬಿ ಅಜಿತ್ ಚಾಂದಿಲಾ  01
ರಾಬಿನ್ ಉತ್ತಪ್ಪ ಸ್ಟಂಪ್ಡ್ ಶ್ರೀವತ್ಸ ಗೋಸ್ವಾಮಿ ಬಿ ಅಜಿತ್    ಚಾಂಡಿಲ  06
ಅನುಸ್ತಾಪ್ ಮಜುಮ್ದಾರ್ ಸಿ ಮತ್ತು ಬಿ ಅಜಿತ್ ಚಾಂಡಿಲ  09
ಕ್ಯಾಲ್ಲೂಮ್ ಫರ್ಗ್ಯುಸನ್ ಎಲ್‌ಬಿಡಬ್ಲ್ಯು ಬಿ ಜಾನ್ ಬೋಥಾ  23
ಸ್ಟೀವನ್ ಸ್ಮಿತ್ ಸಿ ಬ್ರಾಡ್ ಹಾಡ್ಜ್ ಬಿ ಜಾನ್ ಬೋಥಾ  37
ಆ್ಯಂಜೆಲೊ ಮ್ಯಾಥ್ಯೂಸ್ ಸಿ ಅಜಿಂಕ್ಯಾ ರಹಾನೆ ಬಿ                      ಶೇನ್ ವ್ಯಾಟ್ಸನ್  23
ಭುವನೇಶ್ವರ ಕುಮಾರ್ ಬಿ ಶಾನ್ ಟೇಟ್  03
ಮುರಳಿ ಕಾರ್ತಿಕ್ ಔಟಾಗದೆ  08
ರಾಹುಲ್ ಶರ್ಮ ಸಿ ಅಜಿಂಕ್ಯಾ ರಹಾನೆ ಬಿ ಶೇನ್ ವ್ಯಾಟ್ಸನ್   00
ಆಶಿಶ್ ನೆಹ್ರಾ ಔಟಾಗದೆ  09
ಇತರೆ: (ಬೈ-1, ಲೆಗ್‌ಬೈ-1, ವೈಡ್-1, ನೋಬಾಲ್-1) 04
ವಿಕೆಟ್ ಪತನ: 1-3 (ಜೆಸ್ಸಿ ರೈಡರ್; 0.5), 2-3 (ಸೌರವ್ ಗಂಗೂಲಿ; 0.6), 3-11 (ರಾಬಿನ್ ಉತ್ತಪ್ಪ; 2.1), 4-26 (ಅನುಸ್ತಾಪ್ ಮಜುಮ್ದಾರ್; 4.5), 5-60 (ಕ್ಯಾಲ್ಲೂಮ್ ಫರ್ಗ್ಯುಸನ್; 10.1), 6-89 (ಸ್ಟೀವನ್ ಸ್ಮಿತ್; 14.1), 7-106 (ಭುವನೇಶ್ವರ ಕುಮಾರ್; 16.2), 8-110 (ಆ್ಯಂಜೆಲೊ ಮ್ಯಾಥ್ಯೂಸ್; 17.2), 9-112 (ರಾಹುಲ್ ಶರ್ಮ; 17.6).
ಬೌಲಿಂಗ್: ಅಜಿತ್ ಚಾಂಡಿಲ 4-0-13-4, ಶೇನ್ ವ್ಯಾಟ್ಸನ್ 3-0-19-2 (ವೈಡ್-1), ಶಾನ್ ಟೇಟ್ 4-0-25-1 (ನೋಬಾಲ್-1), ಜಾನ್ ಬೋಥಾ 4-0-25-2, ಸಿದ್ದಾರ್ಥ್ ತ್ರಿವೇದಿ 3-0-24-0, ಸ್ಟುವರ್ಟ್ ಬಿನ್ನಿ 2-0-17-0
ಫಲಿತಾಂಶ: ರಾಜಸ್ತಾನ ರಾಯಲ್ಸ್‌ಗೆ 45 ರನ್‌ಗಳ ಗೆಲುವು.
ಪಂದ್ಯ ಶ್ರೇಷ್ಠ: ಅಜಿತ್ ಚಾಂಡಿಲ (ರಾಜಸ್ತಾನ ರಾಯಲ್ಸ್). 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT