ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜೀನಾಮೆ ಕೊಟ್ಟು ರಾಜ್ಯದ ಮಾನ ಕಾಪಾಡಿ

Last Updated 13 ಫೆಬ್ರುವರಿ 2012, 5:55 IST
ಅಕ್ಷರ ಗಾತ್ರ

ಶಿರಹಟ್ಟಿ: ಸರ್ಕಾರ ನಡೆಸುವ ನೈತಿಕ ಹಕ್ಕನ್ನು ಕಳೆದುಕೊಂಡಿರುವ ಬಿಜೆಪಿ ಸರ್ಕಾರ ತಕ್ಷಣ ರಾಜೀನಾಮೆ ಕೊಟ್ಟು ರಾಜ್ಯದ ಮರ್ಯಾದೆ ಉಳಿಸಬೇಕು. ರಾಷ್ಟ್ರಮಟ್ಟದಲ್ಲಿ ಉತ್ತಮ ರಾಜಕೀಯ ತಳಹದಿ ಹೊಂದಿರುವ ಕರ್ನಾಟಕ ರಾಜ್ಯದ ಮರ್ಯಾದೆಯನ್ನು ಹಾಳುಮಾಡಿದ್ದಾರೆ ಎಂದು ಎಚ್.ಕೆ. ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಿನ ಶ್ರೀಕ್ಷೇತ್ರ ವರವಿ ಗ್ರಾಮದ ಮೌನೇಶ್ವರ ದೇವಸ್ಥಾನದ ಆವರಣದಲ್ಲಿ  ಶನಿವಾರ ಜರುಗಿದ ಕಾಂಗ್ರೆಸ್ ಕಾರ್ಯಕರ್ತರ ಸಮಾ ವೇಶದಲ್ಲಿ ಭಾಗವಹಿಸಿ ಮಾತ ನಾಡಿದರು.

ದೇವಾಲಯದಂತಹ ಪವಿತ್ರ ಸ್ಥಾನದಲ್ಲಿ ಕುಳಿತು ಮೂವರು ಸಚಿವರು ಮಾಡಿರುವ ಘನಂದಾರಿ ಕೆಲಸಗಳನ್ನು ಜನರು ಅರ್ಥೈಸಿಕೊಳ್ಳಬೇಕು. ಅಭಿವೃದ್ಧಿ ಕಾರ್ಯಗಳತ್ತ ಚಿಂತಿಸದೇ ನೀಲಿಚಿತ್ರಗಳನ್ನು ನೋಡುತ್ತ ಕಾಲಹರಣ ಮಾಡುತ್ತಿರುವ ಇಂತಹ ಸಚಿವರ ಅಗತ್ಯ ನಮಗಿದೆಯೇ ಎಂಬುದರತ್ತ ಚಿಂತನೆ ಮಾಡಬೇಕು. ಇಂತಹ ಸರ್ಕಾರವನ್ನು ಮುಂದು ವರಿಯಲು ಅವಕಾಶ ನೀಡಬಾರದು ಎಂದರು.

ರೈತ ಬಂಡಾಯ ಮೂಲಕ ರಾಷ್ಟ್ರಗಮನ ಸೆಳೆದಿದ್ದ ನರಗುಂದ ತಾಲ್ಲೂಕು ಇಂದು ಮಾಜಿ ಸಚಿವರ ನೀಲಿಚಿತ್ರ ಪ್ರಕರಣದಿಂದ ತಲೆತಗ್ಗಿಸುವಂತಾಗಿದೆ ಎಂದು ಮಾಜಿ ಸಚಿವ ಬಿ.ಆರ್. ಯಾವಗಲ್ಲ ರಾಜ್ಯ ಸರ್ಕಾರವನ್ನು ತರಾಟೆಗೆ ತಗೆದುಕೊಂಡರು.

ಎಐಸಿಸಿ ಸದಸ್ಯ ಹನುಮಂತರಾವ್ ಮಾತನಾಡಿ, ಕರ್ನಾಟಕದಲ್ಲಿ ಅಧಿಕಾರ ವಹಿಸಿಕೊಂಡ ಅವಧಿಯಿಂದ ಈವರೆಗೆ ಭ್ರಷ್ಟಾಚಾರ ಮತ್ತು ಸರ್ವಾಧಿಕಾರದಿಂದ ಆಡಳಿತವನ್ನು ನಡೆಸುತ್ತಿರುವ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕು. ಅನುಕಂಪದಿಂದ ಅಧಿಕಾರ ಹಿಡಿದ ರಾಜ್ಯ ಬಿಜೆಪಿ ಮುಖಂಡರ ಬಣ್ಣ ಬಯಲಾಗಿದ್ದು, ಯಾವುದೇ ಸಮಯದಲ್ಲಿ ಚುನಾವಣೆ ಬರಬಹುದು. ಪಕ್ಷದ ಕಾರ್ಯಕರ್ತರು ಸನ್ನದ್ದರಾಗಬೇಕೆಂದು ಕರೆ ನೀಡಿದರು.

ಪಕ್ಷದ ಜಿಲ್ಲಾಧ್ಯಕ್ಷ ಜಿ.ಎಸ್. ಗಡ್ಡದೇವರಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹನಮಂತಯ್ಯ, ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಮಾಜಿ ಶಾಸಕ ಜಿ.ಎಸ್. ಪಾಟೀಲ, ವಾಸಣ್ಣ ಕುರಡಗಿ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಶಿವಪ್ರಕಾಶ ಮಹಾಜನಶೆಟ್ಟರ, ದೀಪಕ್ ಲಮಾಣಿ, ರಾಮಣ್ಣ ಲಮಾಣಿ, ಲಕ್ಷ್ಮಣಗೌಡ ಪಾಟೀಲ, ಈರಣ್ಣ ಅಂಗಡಿ, ಎಚ್.ಆರ್. ನಾಯಕ, ದೃವರಾಜ ಹೊನ್ನಪ್ಪನವರ, ಟಿ. ಈಶ್ವರ, ಜಿ.ಪಂ. ಸದಸ್ಯ ಹೇಮಗಿರೀಶ ಹಾವಿನಾಳ, ಪುರಸಭೆ ಅಧ್ಯಕ್ಷೆ ಜಯಕ್ಕ ಕಳ್ಳಿ, ಪ.ಪಂ. ಅಧ್ಯಕ್ಷ ಎಚ್.ಡಿ. ಮಾಗಡಿ, ಭೀಮಸಿಂಗ್ ರಾಠೋಡ, ಸಂಗನಗೌಡ ಪಾಟೀಲ, ದಶರಥ ಗಾಣಿಗೇರ, ಪರಮೇಶ ಲಮಾಣಿ, ಯು.ಎನ್. ಹೊಳಲಾಪೂರ, ಗುಡಿಸಾಗರ, ದೇವಪ್ಪ ಲಮಾಣಿ, ವಿರೂಪಾಕ್ಷ ಪಡಿಗೇರ ಮತ್ತಿತರರು ಉಪಸ್ಥಿತರಿದ್ದರು.

ಶಂಕರಗುರು ಬಿಳಿಮಗ್ಗದ ಸ್ವಾಗತಿಸಿದರು. ಮಹೇಶ ಹಾರೋಗೇರಿ ಕಾರ್ಯಕ್ರಮ ನಿರೂಪಿಸಿದರು. ಬುಡನಶ್ಯಾ ಮಕಾಂದರ ವಂದಿಸಿದರು.

ವಿವಿಧ ಪಕ್ಷಗಳ ಕಾರ್ಯಕರ್ತರಾದ ಈರಣ್ಣ ಮಠಪತಿ, ಮಾನಪ್ಪ ದೊಡ್ಡೊರ, ಮಲ್ಲೇಶ ಪೂಜಾರ, ಅಶೋಕ ಹರಿಜನ, ಶರಣಯ್ಯ ಮಠಪತಿ, ಶಿವು ಹರತಾಳ ಇದೇ ಸಂದರ್ಭದಲ್ಲಿ ಮುಖಂಡರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ  ಸೇರ್ಪಡೆಗೊಂಡರು.             

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT