ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ರಾಜೀವ್ ಅವರನ್ನು ಕಣ್ಣಾರೆ ನೋಡಿದ್ದೆ'

ಆಗಿನ ಕಾರ್ಯಕರ್ತರೇ ಈಗಿನ ನಾಯಕರು !
Last Updated 25 ಏಪ್ರಿಲ್ 2013, 8:57 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ರಾಹುಲ್ ಗಾಂಧಿ ಈ ಬಾರಿ ರಾಜ್ಯದ ವಿಧಾನಸಭಾ ಚುನಾವಣೆಯ ಪ್ರಚಾರರಲ್ಲಿ ನಿರತರಾಗಿದ್ದಾರೆ. ಈ ಸಂದರ್ಭದಲ್ಲಿ ರಾಹುಲ್ ಅವರ ತಂದೆ ಶಿಡ್ಲಘಟ್ಟಕ್ಕೆ ಆಗಮಿಸಿದ್ದು ಕೆಲವರು ಈಗಲೂ ನೆನಪಿಸಿಕೊಳ್ಳುತ್ತಾರೆ.

`ಅಲ್ನೋಡು ಬಿಳಿ ಬಟ್ಟೆ ಹಾಕಿಕೊಂಡು ಬೆಳ್ಳಗಿದ್ದಾರಲ್ಲ, ಅವರೇ ರಾಜೀವ್ ಗಾಂಧಿ. ಇಂದಿರಾ ಗಾಂಧಿಯವರ ಮಗ ಎಂದು ನನ್ನ ತಂದೆ ಗಾಡಿಯೊಂದರ ಮೇಲೆ ನಿಲ್ಲಿಸಿ, ನನಗೆ ತೋರಿಸಿದ್ದರು' ಎಂದು ಕೃಷ್ಣಪ್ಪ ಹೇಳುತ್ತಾರೆ.  25 ವರ್ಷಗಳ ಹಿಂದೆ ಅಂದರೆ 1989ರ ಆಸುಪಾಸಿನ ದಿನವೊಂದರಲ್ಲಿ ನಡೆದ ಮಸುಮಸುಕಾದ ಘಟನೆಯನ್ನು ನೆನಪಿಸಿಕೊಳ್ಳುವ ಅವರು, `ಚುನಾವಣಾ ಪ್ರಚಾರಕ್ಕೆಂದು ರಾಜೀವ್‌ಗಾಂಧಿ ಶಿಡ್ಲಘಟ್ಟದ ಸರ್ಕಾರಿ ಪ್ರೌಢಶಾಲೆಯ ಮೈದಾನಕ್ಕೆ ಹೆಲಿಕಾಪ್ಟರಿನಲ್ಲಿ ಆಗಮಿಸಿದ್ದರು. ಒಂದೆಡೆ ಹೆಲಿಕಾಪ್ಟರ್, ಮತ್ತೊಂದೆಡೆ ರಾಜೀವ್ ಗಾಂಧಿ ಎರಡೂ ಒಮ್ಮೆಗೆ ನೋಡಬಹುದೆಂದು ನಮ್ಮ ತಂದೆ ಅಲ್ಲಿ ಕರೆದುಕೊಂಡು ಹೋಗಿದ್ದರು' ಎನ್ನುತ್ತಾರೆ.

ಆಗ ರಾಜೀವ್‌ಗಾಂಧಿಯವರನ್ನು ಭೇಟಿ ಮಾಡಿದವರಲ್ಲಿ ಈಗಿಲ್ಲ, ಇನ್ನು ಕೆಲವರು ಪ್ರಸಕ್ತ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಸಂಸದ, ಕೆಪಿಸಿಸಿ ಅಧ್ಯಕ್ಷರಾಗಿದ್ದ ವಿ.ಕೃಷ್ಣಾರಾವ್ ಮತ್ತು ಚಿಕ್ಕಬಳ್ಳಾಪುರದ ಸಿ.ವೆಂಕಟರಾಯಪ್ಪ ಇತಿಹಾಸ ಪುಟ ಸೇರಿದ್ದಾರೆ. ರಾಜೀವ್ ಅವರನ್ನು ಭೇಟಿಯಾದ ನಾಲ್ವರು ಈಗ ಕಣದಲ್ಲಿದ್ದಾರೆ.

ಮೂವರು ಕಾಂಗ್ರೆಸ್ ಅಭ್ಯರ್ಥಿಗಳಾಗಿದ್ದರೆ, ಒಬ್ಬರು ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ.   ಶಿಡ್ಲಘಟ್ಟ ಕ್ಷೇತ್ರದಲ್ಲಿ ವಿ.ಮುನಿಯಪ್ಪ, ಬೆಂಗಳೂರಿನ ಜಯನಗರ ಕ್ಷೇತ್ರದಲ್ಲಿ ಎಂ.ಸಿ.ವೇಣುಗೋಪಾಲ್ ಮತ್ತು ತುಮಕೂರಿನ ಕೊರಟಗೆರೆ ಕ್ಷೇತ್ರದಲ್ಲಿ ಈಗಿನ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದಾರೆ. ಗೌರಿಬಿದನೂರಿನಲ್ಲಿ ಅಶ್ವತ್ಥನಾರಾಯಣರೆಡ್ಡಿ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. 

`ರಾಷ್ಟ್ರೀಯ ನಾಯಕರನ್ನು ಈಗಿನಂತೆ ನಾವು ಟೀವಿಯಲ್ಲಿ ನೋಡುವಂತಿರಲಿಲ್ಲ. ಅವರನ್ನು ನೋಡುವುದೇ ಒಂದು ಖುಷಿ ಸಂಗತಿಯಾಗಿತ್ತು. ಈಗ ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್  ಇದೆ. ಅದರಲ್ಲಿ ಈಗ ಕ್ಯಾಮೆರಾನೂ ಇದೆ. ಆದರೆ ಆಗ ಕಪ್ಪು ಬಿಳುಪು ಚಿತ್ರವೇ ನಮಗೆ ವಿಶೇಷ. ನಮ್ಮ ತಂದೆ ತಂದುಕೊಟ್ಟಿದ್ದ ರಾಜೀವ್ ಗಾಂಧಿ ಬಂದಾಗಿನ ಚಿತ್ರಗಳನ್ನು ಈಗಲೂ ಇಟ್ಟುಕೊಂಡಿದ್ದೇನೆ' ಎಂದು ಕೃಷ್ಣಪ್ಪ `ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT