ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜೀವ್ ಗಾಂಧಿ ಆರೋಗ್ಯ ವಿ.ವಿ. ಕಾಯ್ದೆ ಗೆ ತಿದ್ದು ಪಡಿ

ಸಿಂಡಿಕೇಟ್ ಅಧಿಕಾರ ಮೊಟಕು
Last Updated 3 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಸುವರ್ಣಸೌಧ (ಬೆಳಗಾವಿ): ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯದ ಕುಲಪತಿ ಅವಧಿಯನ್ನು ಒಂದು ಅವಧಿಗೆ ಸೀಮಿತಗೊಳಿಸುವ, ಸಿಂಡಿಕೇಟ್‌ನಲ್ಲಿ ಹಿರಿಯ ಅಧಿಕಾರಿ ಗಳನ್ನು ಸದಸ್ಯರನ್ನಾಗಿ ಮಾಡಲು ಅವಕಾಶ ಕಲ್ಪಿಸುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ತಿದ್ದುಪಡಿ) ಮಸೂದೆಗೆ ವಿಧಾನಸಭೆ ಮಂಗಳವಾರ ಒಪ್ಪಿಗೆ ನೀಡಿತು.

ಇದರಿಂದ ಸಿಂಡಿಕೇಟ್ ಅಧಿಕಾರ ಮೊಟಕುಗೊಳ್ಳಲಿದ್ದು, ಸರ್ಕಾರಕ್ಕೆ ಹೆಚ್ಚಿನ ಅಧಿಕಾರ ದೊರೆಯಲಿದೆ. ವೈದ್ಯ ಕೀಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯದರ್ಶಿಗಳು, ಸರ್ಕಾರದಿಂದ ನೇಮಕಗೊಳ್ಳುವ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಆರು ಮಂದಿ ಸದಸ್ಯರು ಸಿಂಡಿಕೇಟ್ ನಲ್ಲಿ ಇರುತ್ತಾರೆ.

ಕುಲಸಚಿವ (ಆಡಳಿತ) ಸ್ಥಾನಕ್ಕೆ  ಐಎಎಸ್ ಅಥವಾ ಹಿರಿಯ ಕೆಎಎಸ್ ಅಧಿಕಾರಿಯನ್ನು ನೇಮಕ ಮಾಡಲಾಗು ತ್ತದೆ. ಅದೇ ರೀತಿ ಕುಲಸಚಿವ (ಮೌಲ್ಯ ಮಾಪನ) ಸ್ಥಾನಕ್ಕೆ ಕೆಎಎಸ್ ಅಧಿಕಾರಿ ಅಥವಾ ಕನಿಷ್ಠ 5 ವರ್ಷ ಸೇವೆ ಸಲ್ಲಿ ಸಿರುವ ವೈದ್ಯಕೀಯ ಸಂಸ್ಥೆಯ ಪ್ರಾಧ್ಯಾ ಪಕರನ್ನು ನೇಮಕ ಮಾಡಲು ತಿದ್ದುಪಡಿ ಮಸೂದೆಯಲ್ಲಿ ಅವಕಾಶ ಕಲ್ಪಿಸ ಲಾಗಿದೆ.

ರಾಜ್ಯ ಲೆಕ್ಕಪತ್ರ ಇಲಾಖೆ ಯಲ್ಲಿ ಜಂಟಿ ನಿಯಂತ್ರಕರ ವೃಂದಕ್ಕೆ ಸೇರಿದ ಒಬ್ಬ ಅಧಿಕಾರಿಯನ್ನು ಹಣ ಕಾಸು ಅಧಿಕಾರಿಯನ್ನಾಗಿ ನೇಮಕ ಮಾಡಲಾಗುತ್ತದೆ. ಅನುದಾನಿತ ಅಥವಾ ಅನುದಾನ ರಹಿತ ಖಾಸಗಿ ಕಾಲೇಜುಗಳ ಅಥವಾ ಸಂಸ್ಥೆಯ ಸಿಬ್ಬಂ ದಿಯನ್ನು ವಿಶ್ವವಿದ್ಯಾಲಯದ ಹುದ್ದೆಗ ಳಿಗೆ ನಿಯೋಜನೆ ಮೇಲೆ ತೆಗೆದು ಕೊ ಳ್ಳಲು ಅವಕಾಶ ಇರುವುದಿಲ್ಲ. ಆದರೆ, ಸರ್ಕಾರಿ ವೈದ್ಯಕೀಯ ಕಾಲೇಜು ಅಥ ವಾ ಸಂಸ್ಥೆಯ ಸಿಬ್ಬಂದಿಯನ್ನು 3 ವರ್ಷ ದ ಅವಧಿಗೆ ತೆಗೆದು ಕೊಳ್ಳಲು ಅವಕಾಶ ಇರುತ್ತದೆ.

ಇದುವರೆಗೆ ಎರಡನೇ ಬಾರಿಗೆ ಕುಲಪತಿಯಾಗಿ ಮುಂದುವರಿಯಲು ಅವಕಾಶ ಇತ್ತು. ಆದರೆ, ತಿದ್ದುಪಡಿ ಯಿಂದಾಗಿ ಕುಲಪತಿ ಅಧಿಕಾರ ಒಂದು ಅವಧಿಗೆ ಮಾತ್ರ ಸೀಮಿತವಾಗಲಿದೆ. ಕುಲಪತಿ ನೇಮಕಕ್ಕೆ ರಚನೆಯಾಗುವ ಶೋಧನಾ ಸಮಿತಿಯಲ್ಲಿ ಕುಲಪತಿ, ಸರ್ಕಾರ ಹಾಗೂ ಸಿಂಡಿಕೇಟ್ ಸೂಚಿ ಸಿದ ತಲಾ ಒಬ್ಬರು ಇರುತ್ತಾರೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ ಅವರು ಮಂಡಿಸಿದ ತಿದ್ದುಪಡಿ ಮಸೂದೆಗೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷಗಳ ಸದ ಸ್ಯರು, ‘ಸಣ್ಣಪುಟ್ಟ ಬದಲಾವಣೆಗಳನ್ನು ತರುವ ಬದಲು, ಸಮಗ್ರವಾಗಿ ತಿದ್ದು ಪಡಿ ತರಬೇಕಾಗಿದೆ. ಆದ್ದರಿಂದ ತರಾ ತುರಿಯಲ್ಲಿ ಮಂಡಿಸುವ ಬದಲು ಮತ್ತೊಮ್ಮೆ ತನ್ನಿ’ ಎಂದು ಆಗ್ರಹಿಸಿ ದರು.

ಆದರೆ ಇದಕ್ಕೆ ಒಪ್ಪದ ಸಚಿವರು, ‘ತುರ್ತಾಗಿ ಇದಕ್ಕೆ ಒಪ್ಪಿಗೆ ಪಡೆಯ ಬೇಕಾಗಿದೆ. ` ೧೪೦ ಕೋಟಿ ವೆಚ್ಚದಲ್ಲಿ ಆಟೊಮೇಷನ್ ಯೋಜನೆ ಯನ್ನು ಸಿಂಡಿಕೇಟ್ ತೆಗೆದುಕೊಳ್ಳಲು ಹೊರ ಟಿದೆ. ಇಷ್ಟೊಂದು ದೊಡ್ಡ ಮೊತ್ತವನ್ನು ಯಾರೋ ವೆಚ್ಚ ಮಾಡಿ ಮನೆಗೆ ಹೋಗುವುದಾದರೆ ಹೇಗೆ?’ ಎಂದು ವಸ್ತುಸ್ಥಿತಿಯನ್ನು ಮನವರಿಕೆ ಮಾಡಿ ಕೊಟ್ಟರು.

‘ದಿನಬೆಳಗಾದರೆ ವಿಶ್ವವಿದ್ಯಾಲಯ ದಲ್ಲಿ ಅವಾಂತರಗಳು ನಡೆಯುತ್ತಿವೆ. ಇದನ್ನು ಮುಂದುವರಿಯಲು ಬಿಡ ಬಾರದು. ಪಾರದರ್ಶಕವಾಗಿ ಆಡಳಿತ ನಡೆಯಬೇಕು ಎಂಬ ಉದ್ದೇಶದಿಂದ ತಿದ್ದುಪಡಿ ತರಲಾಗುತ್ತಿದೆ’ ಎಂದು ಸಮರ್ಥಿಸಿಕೊಂಡರು. 

ಮಂಡನೆ: ಕೃಷಿ ವಿಜ್ಞಾನಗಳ ವಿವಿಗಳ (ತಿದ್ದುಪಡಿ) ಮಸೂದೆ, ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ (ಕ್ರಷರ್ಗಳ) ನಿಯಂತ್ರಣ ಮಸೂದೆ ಯನ್ನು ವಿಧಾನ ಸಭೆಯಲ್ಲಿ ಮಂಡಿಸ ಲಾಯಿತು. ಕೃಷಿ ವಿವಿಯ ವ್ಯವಸ್ಥಾಪನಾ ಮಂಡ ಳಿಯಲ್ಲಿ ಪ್ರಸ್ತುತ ೨೨ ಮಂದಿ ಸದಸ್ಯ ರಿದ್ದು, ಆ ಸಂಖ್ಯೆಯನ್ನು ಹತ್ತಕ್ಕೆ ಇಳಿ ಸಲು ತಿದ್ದುಪಡಿ ಮಸೂದೆ ಅವಕಾಶ ಕಲ್ಪಿಸುತ್ತದೆ.

ಜಲ್ಲಿಪುಡಿ ಘಟಕಗಳಿಗೆ ತಡ ಮಾಡದೆ ಪರವಾನಗಿ ನೀಡಲು ಮತ್ತು ಅವುಗಳ ಚಟುವಟಿಕೆ ನಿಯಂತ್ರಿ ಸಲು ಲೈಸನ್ಸಿಂಗ್ ಮತ್ತು ನಿಯಂತ್ರಣ ಪ್ರಾಧಿಕಾರ ರಚಿಸಲಾ ಗುತ್ತದೆ. ಯಾವುದು ಸುರಕ್ಷಿತ ವಲಯ ಎಂಬು ದನ್ನು ಪ್ರಾಧಿಕಾರ ಗುರುತಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT