ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜೀವ್ ಹಂತಕರ ಗಲ್ಲು ಶಿಕ್ಷೆಗೆ ಕಾಲಹರಣ ಬೇಡ

Last Updated 8 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಮಾಜಿ ಪ್ರಧಾನಿ ದಿ. ರಾಜೀವ ಗಾಂಧಿ ಅವರ ಹಂತಕರ ಕುರಿತು ಕರುಣೆ ತೋರುವವರೂ (ಪ್ರ.ವಾ. ಆ. 29) ಇದ್ದಾರೆ. ಇನ್ನೊಂದು ಕಡೆ ರಾಷ್ಟ್ರ ರಕ್ಷಣೆ ಕುರಿತಂತೆ ಪ್ರಧಾನಿ ಹುದ್ದೆಯನ್ನು ಲೋಕಪಾಲ್ ಮಸೂದೆಯಿಂದ ದೂರ ಇಡಬೇಕು ಎನ್ನುವವರೂ ಇದ್ದಾರೆ.

ಈಗಿನ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇದೆಲ್ಲ ವಿಚಿತ್ರ ವಿದ್ಯಮಾನಗಳು ನಡೆಯುತ್ತಲೇ ಇವೆ. ದಿ. ರಾಜೀವ್‌ಗಾಂಧಿ ಹಂತಕರಿಗೆ ವಿಧಿಸಿರು ಶಿಕ್ಷೆಯನ್ನು ಈ ಹಂತದಲ್ಲಿ ಪ್ರಶ್ನಿಸುವುದಾಗಲಿ, ಸೋನಿಯಾ ಗಾಂಧಿಯವರನ್ನು ಸಂಪರ್ಕಿಸುವುದಾಗಲಿ ಸರ್ವಥಾ ಸಲ್ಲದು.

ಆಗಿನ ಪ್ರಧಾನಿ ರಾಜೀವಗಾಂಧಿ ಅವರ ಹತ್ಯೆಯ ಮರುದಿನ ರಾತ್ರಿ ಶ್ರೀ ಪೆರಂಬುದೂರಿಗೆ ಅಕಸ್ಮಾತ್ ಭೇಟಿ ನೀಡಿ ಕಣ್ಣೀರು ಹಾಕಿದ ವಿದ್ಯಾರ್ಥಿಗಳಲ್ಲಿ ನಾನೂ ಒಬ್ಬ! ಇಪ್ಪತ್ತು ವರ್ಷ ಕಳೆಯಿತು. ಇನ್ನು ವೃಥಾ ಕಾಲಹರಣ ಕೂಡದು. 
 -

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT