ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಅಥ್ಲೆಟಿಕ್ ಚಾಂಪಿಯನ್‌ಷಿಪ್: ಆಳ್ವಾಸ್ ಸ್ಪರ್ಧಿಗಳ ಮೇಲುಗೈ

Last Updated 12 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ದಾವಣಗೆರೆ:  ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮಹಮ್ಮದ್ ಹಾಫೀಸ್ ಇಲ್ಲಿ ಜಿಲ್ಲಾ ಅಥ್ಲೆಟಿಕ್ ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ 29ನೇ ರಾಜ್ಯ ಜೂನಿಯರ್ ಮತ್ತು ಸೀನಿಯರ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ 20 ವರ್ಷ ವಯೋಮಿತಿಯ ವಿಭಾಗದ 100 ಮೀಟರ್ಸ್ ಓಟದಲ್ಲಿ ಬಂಗಾರದ ಸಾಧನೆ ತೋರಿದರು.

ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಸಂಜೆ ನಡೆದ ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಸ್ಪರ್ಧೆಯಲ್ಲಿ ಬಿ.ಎ.ಎರಡನೇ ವರ್ಷದ ವಿದ್ಯಾರ್ಥಿ ಮಹಮ್ಮದ್ ಕೊನೆಯ 30 ಮೀಟರ್ಸ್ ಇರುವಾಗ ಅತ್ಯುತ್ತಮ ರೀತಿಯಲ್ಲಿ ವೇಗ ಹೆಚ್ಚಿಸಿಕೊಂಡು ಮೊದಲಿಗರಾಗಿ ಗುರಿ ಮುಟ್ಟಿ (10.70ಸೆಕೆಂಡು) ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು.ಮೂಲತಃ ಮಂಗಳೂರಿನ ಕಾಟಿಪಳ್ಳದ ಈತ ಈಗಾಗಲೇ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಹಲವು ಕ್ರೀಡಾಕೂಟಗಳಲ್ಲಿ ಗಮನ ಸೆಳೆದಿದ್ದು, ಇದು ಅವರ ಶ್ರೇಷ್ಠ ಸಾಮರ್ಥ್ಯವಾಗಿದೆ.

ಬಾಲಕಿಯರ 16 ವರ್ಷ ವಯೋಮಿತಿಯೊಳಗಿನವರ 100 ಮೀಟರ್ಸ್ ಓಟದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ 9ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಸಿಮಿ 12.20 ಸೆಕೆಂಡುಗಳಲ್ಲಿ ಓಡಿ ಮೊದಲಿಗರಾಗಿ ಗುರಿತಲುಪಿದರು.

ಇವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನವರು. 18 ವರ್ಷದೊಳಗಿನ ಬಾಲಕರ ವಿಭಾಗದ ಟ್ರಿಪಲ್‌ಜಂಪ್‌ನಲ್ಲಿ ಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಂದೇಶ್, ಹ್ಯಾರಿಸ್ಟನ್ ಮತ್ತು ಸಿದ್ಧಾರ್ಥ ಗೆದ್ದುಕೊಂಡರು.

ಮೊದಲ ದಿನ ಯಾವುದೇ ದಾಖಲೆಗಳು ಮೂಡಿ ಬರಲಿಲ್ಲ. ಬಹುತೇಕ ಸ್ಪರ್ಧೆಗಳಲ್ಲಿ ಮೂಡುಬಿದಿರೆಯ ಆಳ್ವಾಸ್ ಸಂಸ್ಥೆಯ ಸ್ಪರ್ಧಿಗಳೇ ಮೇಲುಗೈ ಸಾಧಿಸಿದ್ದು ಎದ್ದು ಕಂಡಿತು.

ಮೊದಲ ದಿನದ ಫಲಿತಾಂಶಗಳು ಇಂತಿವೆ:

ಪುರುಷರ ವಿಭಾಗ: 100 ಮೀ. ಓಟ : 16ರ ವಯೋಮಿತಿ: ಜಾಕ್ಸನ್ ಎಫ್. ಪೆರೇರ (ದಕ್ಷಿಣ ಕನ್ನಡ) (ಕಾಲ; 11.38 ಸೆ.)-1, ಶಹನವಾಜ್ (ಡಿವೈಎಸ್‌ಎಸ್, ಕೂಡಿಗೆ)-2, ನಿಶಾಲ್ ಉತ್ತಪ್ಪ (ಕೊಡಗು)-3.

18ರ ವಯೋಮಿತಿ: ಮೋಹಿತಾಕ್ಷ (ಡಿವೈಎಸ್‌ಎಸ್, ಬೆಂಗಳೂರು. ಕಾಲ; 11.10 ಸೆ.)-1, ರಾಯಲ್ ಡಿ~ಸಿಲ್ವ (ದಕ್ಷಿಣ ಕನ್ನಡ)-2, ಪವನ್ ಕುಮಾರ್ (ಧಾರವಾಡ)-3.

20ರ ವಯೋಮಿತಿ: ಮಹಮದ್ ಹಾಫೀಸ್ (ಆಳ್ವಾಸ್ ಶಿಕ್ಷಣ ಸಂಸ್ಥೆ, ಮೂಡುಬಿದಿರೆ. ಕಾಲ; 10.70 ಸೆ.)-1, ಸತ್ಯಶೀಲನ್ (ಯಂಗ್‌ಸ್ಟಾರ್ ಸ್ಪೋರ್ಟ್ಸ್ ಕ್ಲಬ್, ಬೆಂಗಳೂರು)-2, ಬಿ.ಆರ್. ರಂಗನಾಥ್ (ಡಿವೈಎಸ್‌ಎಸ್ ಬೆಂಗಳೂರು)-3.

800 ಮೀ. ಓಟ: 16ರ ವಯೋಮಿತಿ: ಯು.ಪಿ. ಸಚಿನ್ (ಡಿವೈಎಸ್‌ಎಸ್ ಬೆಂಗಳೂರು. ಕಾಲ; 2.02 ಸೆ.)-1, ಆರ್.ಎನ್. ಸತೀಶ್ (ಆಳ್ವಾಸ್ ಶಿಕ್ಷಣ ಸಂಸ್ಥೆ, ಮೂಡುಬಿದಿರೆ)-2, ಎಸ್. ಚಂದ್ರು ( ಕೋಲಾರ)-3,

20ರ ವಯೋಮಿತಿ: ಬಾರ್ತಾಲೋಮ ಪುಟ್ಟರಾಜ್ (ಡಿವೈಎಸ್‌ಎಸ್ ಬೆಂಗಳೂರು. ಕಾಲ; 2.02 ಸೆ.)-1, ಎಂ. ಯೆರ‌್ರಯ್ಯ (ಡಿವೈಎಸ್‌ಎಸ್, ಬೆಂಗಳೂರು)-2, ಕೆ.ಬಿ. ಯಶವಂತ (ದಕ್ಷಿಣ ಕನ್ನಡ)-3,

1000 ಮೀ. ಓಟ:
16ರ ವಯೋಮಿತಿ: ಶರತ್ (ಡಿವೈಎಸ್‌ಎಸ್ ಕೂಡಿಗೆ. ಕಾಲ; 2.46.6 ಸೆ.)-1, ಲೋಕ್ಯಾ (ಡಿವೈಎಸ್‌ಎಸ್ ಕೂಡಿಗೆ)-2, ರಿಯಾಜ್ ಅಹಮದ್ (ವಿದ್ಯಾನಗರ, ಬೆಂಗಳೂರು)-3.

ಹೈಜಂಪ್: 16ರ ವಯೋಮಿತಿ: ರವಿತೇಜ (ವೈಎಸ್‌ಸಿ ಬೆಂಗಳೂರು. ಎತ್ತರ: 1.76 ಮೀ.)-1, ಕೆ. ನಿತಿನ್ (ಎಸ್‌ಡಿಎಂ ಉಜಿರೆ)-2, ಅನಿಲ್ (ಆಳ್ವಾಸ್, ಮೂಡುಬಿದಿರೆ)-3.

18ರ ವಯೋಮಿತಿ: ಪಿ.ಎಂ. ಮಂಜುನಾಥ್ (ಆಳ್ವಾಸ್ ಮೂಡುಬಿದಿರೆ. ಎತ್ತರ 1.66 ಮೀ.)-1, ಜಿ. ಆಕಾಶ್ (ಹಾಸನ)-2, ಕೃಷ್ಣಮೂರ್ತಿ (ಕೋಲಾರ)-3,

ಮಹಿಳೆಯರ ವಿಭಾಗ: 800 ಮೀ. ಓಟ: 18ರ ವಯೋಮಿತಿ: ಕೆ.ಎ. ಅರ್ಚನಾ (ಭಾರತ ಕ್ರೀಡಾ ಪ್ರಾಧಿಕಾರ, ಮಡಿಕೇರಿ ಕಾಲ: 2.25. ಸೆ.)-1, ವಿ. ಪ್ರಿಯಾಂಕಾ (ಡಿವೈಎಸ್‌ಎಸ್, ಮೈಸೂರು)-2, ಎ.ಎ. ಲಿಖಿತ್ (ಆಳ್ವಾಸ್, ಮೂಡಬಿದಿರೆ)-3. 1000 ಮೀ ಓಟ: 16ರ ವಯೋಮಿತಿ: ಸಿ. ಪೂರ್ಣಿಮಾ (ಡಿವೈಎಸ್‌ಎಸ್, ಮೈಸೂರು) (ಕಾಲ; 3.16.2 ಸೆ.)-1, ತ್ರಿಶಾ (ವಿದ್ಯಾನಗರ, ಬೆಂಗಳೂರು)-2, ಪ್ರಜ್ಞಾ (ದಕ್ಷಿಣ ಕನ್ನಡ)-3,

20ರ ವಯೋಮಿತಿ; ಫರೀನ್ ಎನ್. ಶೇಖ್ (ಬೆಳಗಾವಿ) (ಕಾಲ: 2.25 ಸೆ.)-1, ಕೆ.ಆರ್. ಮೇಘನಾ (ಮೈಸೂರು)-2, ಸಿ. ನವ್ಯಶ್ರೀ (ಡಿವೈಎಸ್‌ಎಸ್, ಮೈಸೂರು)-3,

1500 ಮೀ (ಮುಕ್ತ ವಿಭಾಗ): ಕೆ.ಸಿ. ಶ್ರುತಿ (ಡಿವೈಎಸ್‌ಎಸ್, ಬೆಂಗಳೂರು) (ಕಾಲ; 4.55 ಸೆ.)-1, ಎ.ಎಸ್. ಸುಜಾತಾ (ಆಳ್ವಾಸ್, ಮೂಡುಬಿದಿರೆ)-2, ಪ್ರೀತಿ. ಎಂ. ಮುನವಳ್ಳಿ (ಧಾರವಾಡ)-3, ಹೈಜಂಪ್: 20ರ

ವಯೋಮಿತಿ:
ಪಿ.ಬಿ. ಸುಮಿತ್ರಾ (ಡಿವೈಎಸ್‌ಎಸ್, ಮೈಸೂರು (ದೂರ; 1.53 ಮೀ.) -1, ಕೆ.ಯು. ಬಬಿತಾ (ಶಿವಮೊಗ್ಗ)-2, ಸಿ.ಎಲ್. ಹರ್ಷಿತಾ (ಆಳ್ವಾಸ್, ಮೂಡುಬಿದಿರೆ)

ಷಾಟ್‌ಪಟ್: 20ರ ವಯೋಮಿತಿ: ಯು. ನಿಶಾ (ಆಳ್ವಾಸ್ ಮೂಡುಬಿದಿರೆ) (ದೂರ; 10.79 ಮೀ.)-1, ಎಚ್.ಸಿ. ರಮ್ಯಾ (ಆಳ್ವಾಸ್, ಮೂಡುಬಿದಿರೆ)-2, ಎಚ್. ಮಾನಸಾ (ಆಳ್ವಾಸ್, ಮೂಡುಬಿದಿರೆ)-3,
ಮುಕ್ತ ಸ್ಪರ್ಧೆ: ಎಸ್. ಸುಷ್ಮಾ (ಮೈಸೂರು) (ದೂರ; 11.23 ಮೀ.) -1, ಯು. ನಿಶಾ (ಆಳ್ವಾಸ್  ಮೂಡಬಿದ್ರಿ)-2.
ಜಾವೆಲಿನ್ ಎಸೆತ:  16ರ ವಯೋಮಿತಿ: ಕೆ. ದೀಕ್ಷಾ (ಆಳ್ವಾಸ್ ಮೂಡುಬಿದಿರೆ) (ದೂರ; 31.70 ಮೀ) -1, ಎ.ಡಿ. ಚೇತನಾ (ಆಳ್ವಾಸ್, ಮೂಡುಬಿದಿರೆ)-2, ಡಬ್ಲ್ಯೂ.ಆರ್. ಹರ್ಷಿತಾ (ಡಿವೈಎಸ್‌ಎಸ್, ಮೈಸೂರು)-3,
18ರ ವಯೋಮಿತಿ: ಜಿ.ಕೆ. ನಮಿತಾ (ಆಳ್ವಾಸ್, ಮೂಡುಬಿದಿರೆ) (ದೂರ; 29.49 ಮೀ.)-1), ಎನ್. ಕಾವ್ಯಾ (ಆಳ್ವಾಸ್, ಮೂಡಬಿದ್ರಿ)-2, ಅಶ್ವಿನಿ ನೈಲ್     (ಡಿವೈಎಸ್‌ಎಸ್, ಕೊಡಗು)-3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT