ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಅಥ್ಲೆಟಿಕ್ ಚಾಂಪಿಯನ್‌ಷಿಪ್: ಮಿಂಚಿದ ಸುಧೀರ್, ನಿವೇದಿತಾ

Last Updated 6 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಇರ್ಫಾನ್ ಶೇಖ್, ನಿವೇದಿತಾ, ದೀಕ್ಷಾ, ಜಾಕ್ಸನ್ ಫಿಡೆಲ್, ಸುಧೀರ್, ಎಸ್. ಪ್ರಣೀತಾ ಪ್ರದೀಪ್, ತಿಪ್ಪವ್ವ ಸಣ್ಣಕ್ಕಿ ಹಾಗೂ ಎಸ್.ಇ. ಶಂಶೀರ್ ಅವರು ಇಲ್ಲಿ ನಡೆಯುತ್ತಿರುವ 27ನೇ ರಾಜ್ಯ ಸೀನಿಯರ್ ಹಾಗೂ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ವಿವಿಧ ವಿಭಾಗಗಳಲ್ಲಿ ಎರಡನೇ ದಿನ ನೂತನ ದಾಖಲೆಯ ಜೊತೆಗೆ ಸ್ವರ್ಣದ ಪದಕ ಗೆದ್ದುಕೊಂಡರು.

ಬೆಂಗಳೂರು ನಗರ ಜಿಲ್ಲಾ ಅಥ್ಲೆಟಿಕ್ ಸಂಸ್ಥೆ ಆಶ್ರಯದಲ್ಲಿ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ಲಾಂಗ್ ಜಂಪ್, ಟ್ರಿಪಲ್ ಜಂಪ್, ಹ್ಯಾಮರ್ ಥ್ರೋ, 100 ಮೀ. ಓಟ, ಶಾಟ್‌ಪಟ್, 5000ಮೀ ಓಟದ ಸ್ಪರ್ಧೆಯಲ್ಲಿ ನೂತನ ದಾಖಲೆಗಳು ನಿರ್ಮಾಣವಾದವು.

ಪುರುಷರ 100ಮೀ. ಓಟದ ಸ್ಪರ್ಧೆಯಲ್ಲಿ ಫ್ಯೂಷನ್ ಅಥ್ಲೆಟಿಕ್‌ನ ಬೋಪಣ್ಣ ದಾಖಲೆಯೊಂದನ್ನು (ಕಾಲ-10.4ಸೆ) ಸರಿಗಟ್ಟಿದರು. 1995ರಲ್ಲಿ ಲೊಯಿನೆಲ್ ಜಾನ್ಸನ್, 2000 ಕ್ಲೋಫಡ್ ಜೋಶವಾ ಹಾಗೂ 2006ರಲ್ಲಿ ವಿಲಾಸ್ ಎನ್. ದಾಖಲೆ (ಕಾಲ-10.4ಸೆ) ನಿರ್ಮಿಸಿದ್ದರು.

ಶನಿವಾರ ಚಿನ್ನ ಗೆದ್ದವರು: ಬಾಲಕರ ವಿಭಾಗ: 14 ವರ್ಷದೊಳಗಿನವರು: ಟ್ರಯಥ್ಲಾನ್: ಗಣೇಶ್ ಗೌಡ (ಕ್ರೀಡಾ ಶಾಲೆ, ವಿದ್ಯಾನಗರ), 1358ಪಾಯಿಂಟ್; ಲಾಂಗ್ ಜಂಪ್: ಜಾಕ್ಸನ್ ಫಿಡೆಲ್ (ದಕ್ಷಿಣ ಕನ್ನಡ), ದೂರ-5.87ಮೀ. (ಹಳೆಯ ದಾಖಲೆ-5.66ಮೀ). ಶಾಟ್‌ಪಟ್: ಲಕ್ಷ್ಮಣ್ (ಬಾದಾಮಿ) ದೂರ-10.2ಮೀ.

16 ವರ್ಷದೊಳಗಿನವರು: ಶಾಟ್‌ಪಟ್: ಜಿ. ಗೌತಮ್ (ಆಳ್ವಾಸ್), ದೂರ-12.28ಮೀ; ಜಾವಲಿನ್ ಥ್ರೋ: ಕಾರ್ತಿಕ್ (ಉಡುಪಿ), 43.18ಮೀ; ರಿಲೇ: ಬಿಜಾಪುರ ತಂಡ, ಕಾಲ-2:08.7ಸೆ; ಹ್ಯಾಮರ್ ಥ್ರೋ: ಜಾವೇದ್ ಅಬ್ದುಲ್ ರಜಾಕ್ (ಬಿಜಾಪುರ), ದೂರ-36.50ಮೀ. 100 ಮೀ ಹರ್ಡಲ್ಸ್: ಸಂತೋಷ್ (ಆಳ್ವಾಸ್) ಕಾಲ-14.5. 100 ಮೀ ಓಟ: ನಾರಾಯಣ ಶೈಲೇಶ್ (ಇಂಡೋ ಜರ್ಮನ್ ಕ್ಲಬ್) ಕಾಲ-11.3ಸೆ; 400 ಮೀ ಓಟ: ಟಿ. ಅಕ್ಷಯ್ (ಎಸ್‌ಟಿಎಸ್ ಬೆಳಗಾವಿ), ಕಾಲ-11.6ಸೆ.

18 ವರ್ಷದೊಳಗಿವನರು: 10 ಕಿ.ಮೀ. ನಡಿಗೆ: ಅಕ್ಷಯ್ ಬಿ. ತಳವಾರ್ (ಎಸ್‌ಎಐ ಧಾರವಾಡ), 53:42.6ಸೆ; ಟ್ರಿಪಲ್ ಜಂಪ್: ಎಸ್.ಇ. ಸಂಶೀರ್ (ಆಳ್ವಾಸ್, ಮೂಡು ಬಿದಿರೆ), ಕಾಲ-14.82ಮೀ. (ಹಳೆಯ ದಾಖಲೆ-14.64ಮೀ); ಲಾಂಗ್ ಜಂಪ್: ಎಸ್.ಇ. ಸಂಶೀರ್ (ಆಳ್ವಾಸ್) ದೂರ-7.07ಮೀ (ಹಳೆಯ ದಾಖಲೆ-6.87ಮೀ). ಜಾವಲಿನ್ ಥ್ರೋ: ಬಿನೋದ್ ಮುಂಡಾ (ಯಂಗ್ ಸ್ಟಾರ್ಸ್‌ ಸ್ಪೋರ್ಟ್ಸ್ ಪ್ರಮೋಟರ್ ಟ್ರಸ್ಟ್), ದೂರ-46.98ಮೀ; ಶಾಟ್‌ಪಟ್: ಸಾಯಿರಾಜ್ (ಆಳ್ವಾಸ್), ದೂರ-14.21ಮೀ; ಹ್ಯಾಮರ್ ಥ್ರೋ: ಸುಧೀರ್ (ಆಳ್ವಾಸ್), ದೂರ-49.39ಮೀ (ಹಳೆಯ ದಾಖಲೆ-46.75ಮೀ); 100 ಮೀ ಓಟ: ಇರ್ಫಾನ್ ಶೇಕ್ (ಎಸ್‌ಎಐ ಬೆಂಗಳೂರು), ಕಾಲ-10.7ಸೆ (ಹಳೆಯ ದಾಖಲೆ-10.9ಸೆ.); ರಿಲೇ: ಇಂಡಿಯನ್ ಅಥ್ಲೆಟಿಕ್ ಅಕಾಡೆಮಿ, ಕಾಲ-2:06.6ಸೆ. 110ಮೀ ಹರ್ಡಲ್ಸ್: ಫಕೀರಪ್ಪ ವಿ. ಬಣಗಿ (ಎಸ್‌ಎಐ ಧಾರವಾಡ), ಕಾಲ-14.5ಸೆ.

20 ವರ್ಷದೊಳಗಿನವರು:
10 ಕಿ.ಮೀ ನಡಿಗೆ: ವಿನೋದ್ ಎಸ್. ಹೂಗಾರ್ (ಎಸ್‌ಎಐ ಧಾರವಾಡ), ಕಾಲ- 56:00.01ಸೆ; ಹ್ಯಾಮರ್ ಥ್ರೋ: ಕಾಸೀಮ್ (ಚಾಲುಕ್ಯ ಸ್ಪೋರ್ಟ್ಸ್ ಕ್ಲಬ್, ಬಾದಾಮಿ), ದೂರ-51.20ಮೀ; ಟ್ರಿಪಲ್ ಜಂಪ್: ಪ್ರಹುಲ್ (ಎಂಇಜಿ), 14.25ಮೀ; ಲಾಂಗ್ ಜಂಪ್: ಜೋಯೆಲ್ ಅನುಷ್ ಕಾರ್ಡಿಜ್ (ಆಳ್ವಾಸ್), ದೂರ-6.95ಮೀ; 5000 ಮೀ. ಓಟ: ಸತ್ಯೇಂದ್ರ ಕುಮಾರ್ (ಕರ್ನಾಟಕ ಬಾಲಕರ ಕ್ಲಬ್), ಕಾಲ-15:42.7ಸೆ.
ಪುರುಷರ ವಿಭಾಗ: 5000 ಮೀ ಓಟ: ಶನವಾಸ್ (ಎಂಇಜಿ), ಕಾಲ-15:44.0ಸೆ; 20 ಕಿ. ಮೀ. ನಡಿಗೆ: ಎಂ. ಶಂಕರ್ (ಎಂಇಜಿ), ಕಾಲ-1 ಗಂಟೆ 44:16.0; ಹ್ಯಾಮರ್ ಥ್ರೋ: ಸುರೇಂದರ್ ಕುಮಾರ್ (ಎಂಇಜಿ), ದೂರ-56.57ಮೀ; ಲಾಂಗ್ ಜಂಪ್: ಎಂ. ಅರ್ಶಿದ್ (ಏರ್ ಫೋರ್ಸ್), 7.39ಮೀ; 100ಮೀ ಓಟ: ಬೋಪಣ್ಣ ಜಿ.ಎನ್ (ಫ್ಯೂಷನ್ ಅಥ್ಲೆಟಿಕ್ಸ್), 10.4ಸೆ. 110 ಮೀ. ಹರ್ಡಲ್ಸ್: ಸುಮಂತ್ ಎಂ.ಕೆ. (ಆಳ್ವಾಸ್), ಕಾಲ-14.1ಸೆ; 400ಮೀ ಓಟ: ಉನ್ನಿ ಕುಟ್ಟನ್ (ಎಂಇಜಿ) ಕಾಲ-50.0ಸೆ. 4್ಡ100 ಮೀ.

ಬಾಲಕಿಯರ ವಿಭಾಗ: 14 ವರ್ಷದೊಳಗಿನವರು: ಶಾಟ್‌ಪಟ್: ನಿವೇದಿತಾ (ಉತ್ತರ ಕನ್ನಡ), ದೂರ-8.93ಮೀ (ಹಳೆಯ ದಾಖಲೆ-8.67ಮೀ); ಲಾಂಗ್ ಜಂಪ್: ದೀಕ್ಷಾ (ದಕ್ಷಿಣ ಕನ್ನಡ), ದೂರ-5.44ಮೀ (ಹಳೆಯ ದಾಖಲೆ-5.32ಮೀ).

16 ವರ್ಷದೊಳಗಿನವರು: 100 ಮೀ ಓಟ: ಎಸ್. ಪ್ರಣೀತಾ ಪ್ರದೀಪ್ (ಇಂಡೋ ಜರ್ಮನ್ ಕ್ಲಬ್), ಕಾಲ-12.5ಸೆ; ಡಿಸ್ಕಸ್ ಥ್ರೋ: ಜಿ.ಎಸ್. ಪ್ರಿಯಾಂಕ (ದಕ್ಷಿಣ ಕನ್ನಡ), ದೂರ-31.99ಮೀ; ಲಾಂಗ್ ಜಂಪ್: ಎಸ್. ಪ್ರಣೀತ್ ಪ್ರದೀಪ್ (ಇಂಡೋ ಜರ್ಮನ್ ಕ್ಲಬ್), ದೂರ-5.75ಮೀ. (ಹಳೆಯ ದಾಖಲೆ-5.73ಮೀ).

18 ವರ್ಷದೊಳಗಿನವರು: 100 ಮೀ. ಹರ್ಡಲ್ಸ್: ಮೇಘನಾ ಶೆಟ್ಟಿ (ಇಂಡೋ ಜರ್ಮನ್ ಕ್ಲಬ್), ಕಾಲ-14.5ಸೆ; 100 ಮೀ ಓಟ: ಮೇಘನಾ ಶೆಟ್ಟಿ (ಇಂಡೋ ಜರ್ಮನ್ ಕ್ಲಬ್), ಕಾಲ-12.4ಸೆ; 400ಮೀ: ಪ್ರಿಯಾಂಕ (ಎಸ್‌ಎಐ ಬೆಂಗಳೂರು), 59.9ಸೆ; ಲಾಂಗ್‌ಜಂಪ್: ಮನೀಷ್ (ಆಳ್ವಾಸ್) ದೂರ-5.54ಮೀ.

20 ವರ್ಷದೊಳಗಿನವರು: 10 ಕಿ.ಮೀ. ನಡಿಗೆ ಸ್ಪರ್ಧೆ: ಆಶಾ ಕೆ.ಬಿ. (ದಕ್ಷಿಣ ಕನ್ನಡ), 1ಗಂಟೆ 08:1ಸೆ; 100 ಮೀ. ಹರ್ಡಲ್ಸ್: ಪ್ರಜ್ಞಾ ಎಸ್. ಪ್ರಕಾಶ್ (ಇಂಡೋ ಜರ್ಮನ್ ಕ್ಲಬ್), ಕಾಲ-15.7ಸೆ; 5000 ಮೀ. ಓಟ: ಎ.ಎಸ್. ಸುಜಾತ (ಆಳ್ವಾಸ್), ಕಾಲ-19:38.2ಸೆ; 100 ಮೀ ಓಟ: ವಿದ್ಯಾ ಸಾಗರ್ (ಆಳ್ವಾಸ್), 400 ಮೀ ಓಟ: ಸುಷ್ಮಿತಾ ದೇವದಾಸ್ (ಆಳ್ವಾಸ್), ಕಾಲ-58.6ಸೆ, 4್ಡ400ಮೀ ರಿಲೇ: ಡಿವೈಎಸ್‌ಎಸ್ ಮೈಸೂರು, ಕಾಲ-51.1ಸೆ; ಲಾಂಗ್ ಜಂಪ್: ಜೊಯ್ಲಿನಿ ಎನ್ (ಆಳ್ವಾಸ್) ದೂರ-5.84ಮೀ; 1500 ಮೀ ಓಟ: ಶಾರದ ರಾಣಿ (ಡಿವೈಎಸ್‌ಎಸ್ ಮೈಸೂರು), 4:514ಸೆ.

ಮಹಿಳೆಯರ ವಿಭಾಗ: 5000 ಮೀ ಓಟ: ತಿಪ್ಪವ್ವ ಸಣ್ಣಕ್ಕಿ (ಸೌತ್ ವೆಸ್ಟರ್ನ್ ರೈಲ್ವೆ), ಕಾಲ-18:14.81ಸೆ (ಹಳೆಯ ದಾಖಲೆ-18:27.2ಸೆ); 100 ಮೀ. ಹರ್ಡಲ್ಸ್: ಶ್ರೇಯಾ ದೇಶಪಾಂಡೆ (ಎಸ್‌ಟಿಎಸ್, ಬೆಳಗಾವಿ); 400 ಮೀ ಓಟ: ಟಿ.ಆರ್. ಶ್ರುತಿ (ಶಿವಮೊಗ್ಗ), ಕಾಲ-58.0ಸೆ; 4್ಡ100 ಮೀ. ರಿಲೇ: ಎಸ್‌ಎಐ ಧಾರವಾಡ ಕಾಲ-51.0ಸೆ; ಲಾಂಗ್ ಜಂಪ್: ಐಶ್ವರ್ಯ (ಯುವಿಸಿಇ, ಬೆಂಗಳೂರು), ದೂರ- 5.73ಮೀ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT