ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಅಥ್ಲೆಟಿಕ್ ಚಾಂಪಿಯನ್‌ಷಿಪ್; ಮಿಂಚಿದ ಹರ್ಷಿತ್, ರಶ್ಮಿ, ರೆಬೆಕ್ಕಾ

Last Updated 5 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಎಸ್. ಹರ್ಷಿತ್, ಕೆ. ರಶ್ಮಿ ಹಾಗೂ ರೆಬೆಕ್ಕಾ ಜೋಸ್ ಅವರು ಇಲ್ಲಿ ಆರಂಭವಾದ 27ನೇ ರಾಜ್ಯ ಸೀನಿಯರ್ ಹಾಗೂ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ವಿವಿಧ ವಿಭಾಗಗಳಲ್ಲಿ ನೂತನ ದಾಖಲೆ ಜೊತೆಗೆ `ಚಿನ್ನ~ದ ಅಥ್ಲೀಟ್‌ಗಳು ಎನಿಸಿದರು.

ಬೆಂಗಳೂರು ನಗರ ಜಿಲ್ಲಾ ಅಥ್ಲೆಟಿಕ್ ಸಂಸ್ಥೆ ಆಶ್ರಯದಲ್ಲಿ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಚಾಂಪಿಯನ್‌ಷಿಪ್‌ನ ಮೊದಲ ದಿನ ಬೆಂಗಳೂರು ಸ್ಪೋರ್ಟ್ಸ್ ಕ್ಲಬ್‌ನ ಎಸ್. ಹರ್ಷಿತ್ ಬಾಲಕರ 18 ವರ್ಷದೊಳಗಿನವರ ವಿಭಾಗದ ಹೈ ಜಂಪ್ ಸ್ಪರ್ಧೆಯಲ್ಲಿ ದಾಖಲೆ ನಿರ್ಮಿಸಿದರು. ಅವರು 2.11 ಮೀ. ಎತ್ತರ ಜಿಗಿದರು. ಈ ಮೊದಲು 2010ರಲ್ಲಿ ಹರ್ಷಿತ್ ನಿರ್ಮಿಸಿದ್ದ ದಾಖಲೆ (2.01ಮೀ.) ಅವರ ಹೆಸರಲ್ಲಿತ್ತು.

ಮೂಡು ಬಿದಿರೆಯ ಆಳ್ವಾಸ್‌ನ ಕೆ. ರಶ್ಮಿ ಬಾಲಕಿಯರ 18 ವರ್ಷದೊಳಗಿನವರ ವಿಭಾಗದ ಜಾವಲಿನ್ ಥ್ರೋ ಸ್ಪರ್ಧೆಯಲ್ಲಿ ದಾಖಲೆ (ದೂರ: 39.20) ನಿರ್ಮಿಸಿದರು. ಹಳೆಯ ದಾಖಲೆ 38.78ಮೀಟರ್ ದೂರ ಇತ್ತು. ಡಿವೈಎಸ್‌ಎಸ್ ಬೆಂಗಳೂರಿನ ರೆಬೆಕ್ಕಾ ಜೋಸ್ ಬಾಲಕಿಯರ 20 ವರ್ಷದೊಳಗಿವನವರ 100 ಮೀ. ಓಟದ ಸ್ಪರ್ಧೆಯಲ್ಲಿ ನೂತನ ದಾಖಲೆ (ಕಾಲ- 11.8ಸೆ.) ಬರೆದರು. ಈ ಮೊದಲು 2003ರಲ್ಲಿ ಬಿಂದುರಾಣಿ 12.00ಸೆಕೆಂಡ್‌ಗಳಲ್ಲಿ ತಲುಪಿದ್ದ ಗುರಿಯೇ ಶ್ರೇಷ್ಠ ದಾಖಲೆಯಾಗಿತ್ತು.

ಶುಕ್ರವಾರ ಚಿನ್ನ ಗೆದ್ದವರು: ಬಾಲಕರ ವಿಭಾಗ: 14 ವರ್ಷದೊಳಗಿನವರು: ಹೈ ಜಂಪ್: ನಿತಿನ್ ಕುಮಾರ್, ಎತ್ತರ 1.58ಮೀ. 16 ವರ್ಷದೊಳಗಿನವರು             1000ಮೀ. ಓಟ: ಆರ್. ರಾಕೇಶ್       (ಯುವ ಕ್ಲಬ್), ಕಾಲ: 2:35.9ಸೆ.; ಹೈಜಂಪ್: ಜೆಸ್ಸಿ ಸಂದೇಶ್ (ಅರ್ಜುನ್ ಟ್ರ್ಯಾಕ್ ಆ್ಯಂಡ್ ಫೀಲ್ಡ್ ಕ್ಲಬ್), ಎತ್ತರ- 1.83ಮೀ; ಡಿಸ್ಕಸ್ ಥ್ರೋ: ಜಾವೇದ್ (ಬಿಜಾಪುರ), ದೂರ -32.65ಮೀ.

18 ವರ್ಷದೊಳಗಿವನರು: 1000ಮೀ ಓಟ: ಯರಿಯಪ್ಪ (ಡಿವೈಎಸ್‌ಎಸ್, ಬೆಂಗಳೂರು), ಕಾಲ-2:38.08ಸೆ; ಡಿಸ್ಕಸ್ ಥ್ರೋ: ಆರ್.ಎಸ್. ಸುಧೀರ್ (ಆಳ್ವಾಸ್), ದೂರ-40.80ಮೀ; ಹೈ ಜಂಪ್: ಎಸ್. ಹರ್ಷಿತ್ (ಬೆಂಗಳೂರು ಸ್ಪೋರ್ಟ್ಸ್ ಕ್ಲಬ್), ದೂರ-2.11ಮೀ (ಹಳೆಯ ದಾಖಲೆ 2.01ಮೀ.).
20 ವರ್ಷದೊಳಗಿವನರು: 800 ಮೀ. ಓಟ: ನವೀನ್ ಜಿ.ಎಸ್ (ಡಿವೈಎಸ್‌ಎಸ್ ಬೆಂಗಳೂರು), ಕಾಲ-1:59.9ಸೆ; 4್ಡ400ಮೀ. ರಿಲೇ: ಡಿಕೆಎಎ, ಕಾಲ-3:22.1ಸೆ.; ಜಾವಲಿನ್‌ಥ್ರೋ: ಮನ್‌ಹೀತ್ ವಿಠ್ಠಲ್ (ದಕ್ಷಿಣ ಕನ್ನಡ), ದೂರ-54.85.

ಪುರುಷರ ವಿಭಾಗ: 800 ಮೀ ಓಟ: ಡಿಬಿನ್ ಡೇವಿಸ್ (ಎಂಇಜಿ), ಕಾಲ-1:55.5ಸೆ; ಟ್ರಿಪಲ್ ಜಂಪ್: ವಾಸೀಮ್ ಸಿಂಗ್ (ಎಂಇಜಿ), 15.06; 4್ಡ400 ರಿಲೇ: ಭಾರತೀಯ ಅಥ್ಲೆಟಿಕ್ ಅಕಾಡೆಮಿ, ಕಾಲ-3:18.3ಸೆ; ಜಾವಲಿನ್ ಥ್ರೋ: ಪುರಂದರ್ (ಕಾರ್ಪೋರೇಷನ್ ಬ್ಯಾಂಕ್), ದೂರ-66.15ಮೀ.
ಬಾಲಕಿಯರ ವಿಭಾಗ: 16 ವರ್ಷದೊಳಗಿನವರು: 1000ಮೀ ಓಟ: ಕೆ.ಎ. ಅರ್ಚನಾ (ಎಸ್‌ಎಐ ಮಡಿಕೇರಿ), ಕಾಲ-3:11.9ಸೆ; ಜಾವಲಿನ್ ಥ್ರೋ: ನಮಿತಾ ಜಿ.ಕೆ. (ಆಳ್ವಾಸ್, ಮೂಡುಬಿದಿರೆ), ದೂರ-26.18ಮೀ; ರಿಲೇ: ಡಿವೈಎಸ್‌ಎಸ್ ವಿಜಯನಗರ, ಕಾಲ-2:26.3ಸೆ.

18 ವರ್ಷದೊಳಗಿನವರು: 1000 ಮೀ ಓಟ: ವಿ. ಪ್ರಿಯಾಂಕ (ಎಸ್‌ಎಐ ಬೆಂಗಳೂರು), ಕಾಲ-3:02.9ಸೆ; ಜಾವಲಿನ್ ಥ್ರೋ: ರಶ್ಮಿ ಕೆ. (ಆಳ್ವಾಸ್, ಮೂಡುಬಿದಿರೆ), ದೂರ-39.20ಮೀ. (ಹಳೆಯ ದಾಖಲೆ-38.48ಮೀ.), ಹೈಜಂಪ್: ಸುಷ್ಮಿತಾ (ದಕ್ಷಿಣ ಕನ್ನಡ), ಎತ್ತರ: 1.49ಮೀ; ರಿಲೇ: ಡಿವೈಎಸ್‌ಎಸ್, ಕಾಲ-2:25.5ಸೆ.

20 ವರ್ಷದೊಳಗಿನವರು
: 800 ಮೀ ಓಟ: ಸೌಮ್ಯ ಸಾವಂತ್ (ಯಂಗ್ ಸ್ಟಾರ್ಸ್‌ ಸ್ಪೋರ್ಟ್ಸ್ ಪ್ರಮೋಟರ್ಸ್‌ ಟ್ರಸ್ಟ್), ಕಾಲ-2:21.6ಸೆ; ಶಾಟ್‌ಪಟ್: ಬಿ. ಸಾಧನಾ (ಮೌಂಟ್ ಕಾರ್ಮೆಲ್ ಕಾಲೇಜ್), ದೂರ-8.92ಮೀ; ಜಾವಲಿನ್ ಥ್ರೋ: ಜಿ. ಮಧುಕೇಶ್ಕರ್ (ಆಳ್ವಾಸ್), ದೂರ-29.64; 100 ಮೀ. ಓಟ: ರೆಬೆಕ್ಕಾ ಜೋಸ್ (ಡಿವೈಎಸ್‌ಎಸ್, ಬೆಂಗಳೂರು), ಕಾಲ-11.8ಸೆ, (ಹಳೆಯ ದಾಖಲೆ-12.00ಸೆ).

ಮಹಿಳೆಯರ ವಿಭಾಗ: 800 ಮೀ. ಓಟ: ಕೆ.ಸಿ. ಶ್ರುತಿ (ಡಿವೈಎಸ್‌ಎಸ್ ಬೆಂಗಳೂರು), ಕಾಲ-2:18.5ಸೆ; ಶಾಟ್‌ಪಟ್: ನೀಲಮ್ (ಸೌತ್ ವೆಸ್ಟರ್ನ್ ರೈಲ್ವೆ), ದೂರ-12.17ಮೀ; ಜಾವಲಿನ್ ಥ್ರೋ: ಶಾಹೆಜಹಾನಿ (ಡಿವೈಎಸ್‌ಎಸ್, ಮೈಸೂರು), ದೂರ-42.44ಮೀ; 100 ಮೀ ಓಟ: ಮಂಜುಶ್ರೀ (ಎಸ್‌ಎಐ ಬೆಂಗಳೂರು), ಕಾಲ-12.00ಸೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT