ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಜೂನಿಯರ್ ಅಥ್ಲೆಟಿಕ್ ಕೂಟ

Last Updated 3 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಶಿವಮೊಗ್ಗ: ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಗೌತಮ್ ಬಾಲಕರ 18 ವರ್ಷದೊಳಗಿನವರ ವಿಭಾಗದ ಡಿಸ್ಕಸ್ ಎಸೆತದಲ್ಲಿ ಮತ್ತು ಇದೇ ಕಾಲೇಜಿನ ನಮಿತಾ ಜಿ.ಕೆ. ಷಾಟ್‌ಪಟ್‌ನಲ್ಲಿ ನೂತನ ಕೂಟ ದಾಖಲೆ ಸ್ಥಾಪಿಸಿದರು. ನಗರದ ನೆಹರೂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಜ್ಯ ಜೂನಿಯರ್ ಅಥ್ಲೆಟಿಕ್ ಕೂಟದಲ್ಲಿ ಮೊದಲ ದಿನವಾದ ಶನಿವಾರ ಇವರಿಬ್ಬರನ್ನು ಬಿಟ್ಟರೆ ಉಳಿದವರಿಂದ `ದಾಖಲೆ' ಸಾಧನೆ ಮೂಡಿಬರಲಿಲ್ಲ.

ಚೀನಾದಲ್ಲಿ ಇದೇ ತಿಂಗಳ 19 ರಿಂದ ನಡೆಯುವ ಏಷ್ಯಾ ಯುವ ಅಥ್ಲೆಟಿಕ್ ಕೂಟದಲ್ಲಿ ಭಾಗವಹಿಸಲಿರುವ ನಮಿತಾ ಷಾಟ್‌ಪಟ್ ಅನ್ನು 13.13 ಮೀಟರ್ ದೂರಕ್ಕೆ ಎಸೆದು, ಹಳೆಯ ದಾಖಲೆ (12.38 ಮೀ.) ಸುಧಾರಿಸಿದರು.ಗೌತಮ್, ಇದೇ ವಯೋವರ್ಗದ ಬಾಲಕರ ವಿಭಾಗದಲ್ಲಿ ಡಿಸ್ಕಸ್ ಅನ್ನು 48.56 ಮೀ. ದೂರಕ್ಕೆ ಎಸೆದು ಸುಲಭವಾಗಿ ಅಗ್ರಸ್ಥಾನ ಪಡೆದರು. ಈ ವಿಭಾಗದ ಎಲ್ಲ ಮೂರೂ ಸ್ಥಾನಗಳು ಆಳ್ವಾಸ್ ಕ್ರೀಡಾ ಕ್ಲಬ್‌ನ ಪಾಲಾದವು.

ಫಲಿತಾಂಶಗಳು: ಮೊದಲ ಸ್ಥಾನ ಮಾತ್ರ:
ಬಾಲಕರು: 16 ವರ್ಷದೊಳಗಿನವರು: 1000 ಮೀ ಓಟ: ಪ್ರಕಾಶ್ (ಆಳ್ವಾಸ್, ಕಾಲ: 2ನಿ.44.06 ಸೆ.); ಹೈಜಂಪ್: ಎಂ.ಪ್ರೇರಣ್ (ಬೆಂಗಳೂರು ಸ್ಪೋರ್ಟ್ಸ್ ಕ್ಲಬ್, ಎತ್ತರ: 1.71 ಮೀ.); ಡಿಸ್ಕಸ್ ಎಸೆತ: ಆರ್.ಪಿ.ಶರತ್ ಬಾಬು (ಆಳ್ವಾಸ್, ದೂರ: 37.5 ಮೀ).

18 ವರ್ಷದೊಳಗಿನವರು: 800 ಮೀಟರ್ ಓಟ: ಎಂ.ಜೆ. ಅಶ್ವಿನ್ (ಡಿವೈಎಸ್‌ಎಸ್, ಬೆಂಗಳೂರು, ಕಾಲ: 2ನಿ.02.06 ಸೆ.); ಡಿಸ್ಕಸ್ ಎಸೆತ: ಜಿ.ಗೌತಮ್ (ಆಳ್ವಾಸ್, ದೂರ: 48.56 ಮೀ.); ಹೈಜಂಪ್: ಜೆಸ್ಸಿ ಸಂದೇಶ್ (ಗೋವರ್ಕರ್ ಸ್ಕೂಲ್ ಆಫ್ ಜಂಪರ್ಸ್, ಬೆಂಗಳೂರು, ಎತ್ತರ: 1.95 ಮೀ.); ಡಿಸ್ಕಸ್ ಎಸೆತ: ಜಿ.ಗೌತಮ್ (ಆಳ್ವಾಸ್, ದೂರ: 48.56 ಮೀ. ನೂತನ ದಾಖಲೆ).

20 ವರ್ಷದೊಳಗಿನವರು: 800 ಮೀ. ಓಟ: ಎನ್.ವಿನಯ್ (ಬೆಂಗಳೂರು, ಕಾಲ: 1ನಿ.57.0ಸೆ); ಜಾವೆಲಿನ್ ಎಸೆತ: ಕೆ.ಎಂ.ಗಿರೀಶ್ (ಶಿವಮೊಗ್ಗ, ದೂರ: 53.45 ಮೀ.); 1600 ಮೀ. ರಿಲೆ: ಆಳ್ವಾಸ್ (ಕಾಲ: 3ನಿ.25.1 ಸೆ.).

ಬಾಲಕಿಯರು: 16 ವರ್ಷದೊಳಗಿನವರು: 1000 ಮೀ ಓಟ: ಮೇಘಾ (ಮೈಸೂರು, ಕಾಲ: 3ನಿ.08.1 ಸೆ.); ಜಾವೆಲಿನ್ ಎಸೆತ: ಎಂ.ಕಾಣಿಕಾ (ಆಳ್ವಾಸ್, ದೂರ: 21.47 ಮೀ.); ಡಿಸ್ಕಸ್ ಎಸೆತ: ನಿವೇದಿತಾ ಪಿ.ಸಾವಂತ್ (ಕಾರವಾರ, ದೂರ: 33.69 ಮೀ.).

18 ವರ್ಷದೊಳಗಿನವರು: 800 ಮೀ. ಓಟ: ಉಮಾ ಭಾಗ್ಯಲಕ್ಷ್ಮೀ (ದಕ್ಷಿಣ ಕನ್ನಡ ಜಿಲ್ಲೆ, 2:26.05); ಹೈಜಂಪ್: ಜೆಸ್ಸಿ ಥಾಮಸ್ (ಆಳ್ವಾಸ್, ಮೂಡುಬಿದಿರೆ, ಎತ್ತರ: 1.45 ಮೀ.); ಜಾವೆಲಿನ್ ಎಸೆತ: ಎ.ಡಿ.ಚೇತನಾ (ಆಳ್ವಾಸ್, ದೂರ: 30.73 ಮೀ.); ಡಿಸ್ಕಸ್ ಎಸೆತ: ಜೆ.ಎಸ್.ಪ್ರಿಯಾಂಕಾ (ದಕ್ಷಿಣ ಕನ್ನಡ: ದೂರ: 33.79 ಮೀ.).

20 ವರ್ಷದೊಳಗಿನವರು: 800 ಮೀ. ಓಟ: ಕೆ.ಆರ್.ಮೇಘನಾ (ಡಿಎಎ, ಮೈಸೂರು, ಕಾಲ: 2:26.06); ಜಾವೆಲಿನ್ ಎಸೆತ: ಕೆ.ದೀಕ್ಷಾ (ಆಳ್ವಾಸ್, ದೂರ: 30.14 ಮೀ.); ಷಾಟ್‌ಪಟ್: ನಿಶಾ (ಆಳ್ವಾಸ್, ದೂರ: 10.89 ಮೀ.); ಹೈಜಂಪ್: ಕೆ.ಎಚ್.ಶಿಲ್ಪಾರಾಣಿ (ಎಸ್‌ಡಿಎಂ, ಉಜಿರೆ, ಎತ್ತರ: 1.49 ಮೀ.); 1600 ಮೀ. ರಿಲೆ: ಡಿವೈಎಸ್‌ಎಸ್, ಮೈಸೂರು (ಕಾಲ: 4ನಿ.01.6 ಸೆ.).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT