ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಬಜೆಟ್‌ನಲ್ಲಿ ಎಸ್ಸಿಎಸ್ಟಿ ಸಮುದಾಯಕ್ಕೆ ಅನ್ಯಾಯ

Last Updated 5 ಮಾರ್ಚ್ 2011, 11:15 IST
ಅಕ್ಷರ ಗಾತ್ರ

ಆನೇಕಲ್ : ರಾಜ್ಯ ಬಜೆಟ್‌ನಲ್ಲಿ ಪ.ಜಾ ಮತ್ತು ಪ.ವರ್ಗಗಳ ಕಲ್ಯಾಣ ಕಾರ್ಯಕ್ರಮಗಳಿಗೆ  ಹೆಚ್ಚಿನ ಅನುದಾನ ನೀಡದೆ ಅನ್ಯಾಯ ಮಾಡಲಾಗಿದೆ ಎಂದು ಪ್ರಜಾ ವಿಮೋಚನಾ ಚಳವಳಿ (ಸಮತಾವಾದ) ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆನೇಕಲ್ ಕೃಷ್ಣಪ್ಪ ನುಡಿದರು.

ಅವರು ಪಟ್ಟಣದಲ್ಲಿ ಪಿ.ವಿ.ಸಿ (ಎಸ್) ಸಂಘಟನೆಗೆ ಸೇರ್ಪಡೆಗೊಂಡ ಇಂಡ್ಲವಾಡಿಯ ಕಾರ್ಯಕರ್ತರನ್ನು ಸ್ವಾಗತಿಸಿ ಮಾತನಾಡಿದರು.  ಕೂಲಿ ಕಾರ್ಮಿಕರ ಕುಟುಂಬಕ್ಕೆ ತಲಾ 2 ಎಕರೆ ಭೂಮಿಯನ್ನು ಸರ್ಕಾರ ವಿತರಿಸಿ ವಸತಿ ಹೀನ ಎಲ್ಲರಿಗೂ ವಸತಿ ಕಲ್ಪಿಸಲು ಸರ್ಕಾರ ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕಾಗಿತ್ತು. ಆದರೆ ಇಂತಹ ವಿಷಯಗಳ ಬಗ್ಗೆ ಸರ್ಕಾರ ಯಾವುದೇ ಪ್ರಸ್ತಾಪ ಮಾಡಿಲ್ಲ ಎಂದು ಟೀಕಿಸಿದರು. ಇಂಡ್ಲವಾಡಿಯ ನಾರಾಯಣಸ್ವಾಮಿ, ಪಿ.ವೆಂಕಟೇಶ್, ಮುನಿರಾಜು, ಆನಂದ, ವೆಂಕಟೇಶ್ ಹಾರಗದ್ದೆ ನಾಗರಾಜು ಕೊಪ್ಪ ವೀರಭದ್ರಪ್ಪ ಸಂಘಟನೆಗೆ ಸೇರ್ಪಡೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT