ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಹಾಕಿ ಸಂಸ್ಥೆಗಳಿಗೆ ಅನುದಾನ

Last Updated 12 ಮೇ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಗ್ರಾಮೀಣ ಭಾಗಗಳಲ್ಲಿ ಹಾಕಿ ಕ್ರೀಡೆಯನ್ನು ಅಭಿವೃದ್ಧಿ ಪಡಿಸಲು ಹಾಗೂ ಟೂರ್ನಿಗಳನ್ನು ಸಂಘಟಿಸಲು ಹಾಕಿ ಇಂಡಿಯಾ (ಎಚ್‌ಐ) ರಾಜ್ಯ ಹಾಕಿ ಸಂಸ್ಥೆಗಳಿಗೆ ಐದು ಲಕ್ಷ ರೂಪಾಯಿ ಅನುದಾನ ನೀಡಲು ನಿರ್ಧರಿಸಿದೆ.

ಶನಿವಾರ ನಡೆದ ಹಾಕಿ ಇಂಡಿಯಾದ ಕಾರ್ಯಕಾರಿಣಿ ಮಂಡಳಿ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಯಿತು. ಸೀನಿಯರ್, ಜೂನಿಯರ್, ಸಬ್ ಜೂನಿಯರ್ ಹಂತದ ಟೂರ್ನಿ  ಸಂಘಟಿಸಲು ಈ ಹಣ ಬಳಕೆ ಮಾಡಬಹುದು.
`ದೇಶಾದ್ಯಂತ ಹಾಕಿ ಕ್ರೀಡೆ ಜನಪ್ರಿಯಗೊಳ್ಳಬೇಕು.

ಈ ಕ್ರೀಡೆಯತ್ತ ಯುವಕರನ್ನು ಸೆಳೆಯಬೇಕು ಹಾಗೂ ಅವರಿಗೆ ಅಗತ್ಯ ನೆರವು ದೊರೆಯಬೇಕು ಎನ್ನುವುದು ನಮ್ಮ ಉದ್ದೇಶ~ ಎಂದು ಎಚ್‌ಐನ ಪ್ರಧಾನ ಕಾರ್ಯದರ್ಶಿ ನರೀಂದರ್ ಬಾತ್ರಾ ಹೇಳಿದರು. ಆರ್ಥಿಕವಾಗಿ ಹಿಂದುಳಿದಿರುವ ಸುಮಾರು 66 ಜೂನಿಯರ್ ಆಟಗಾರರಿಗೆ ಆರ್ಥಿಕ ನೆರವು ನೀಡುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT