ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಅಂದಾಜು ಸಮಿತಿ ಸದಸ್ಯರು ದುರಂತದಿಂದ ಪಾರು

Last Updated 13 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ: ರಾಜ್ಯ ವಿಧಾನ ಮಂಡಲದ ಅಂದಾಜು ಸಮಿತಿ ಸದಸ್ಯರು ಪ್ರಯಾಣಿಸುತ್ತಿದ್ದ ವಿಮಾನವೊಂದಕ್ಕೆ ಹಕ್ಕಿ ಬಡಿದು ಸ್ವಲ್ಪದರಲ್ಲಿ ದುರಂತದಿಂದ ಪಾರಾದ ಘಟನೆ ಗುರುವಾರ ಬೆಳಿಗ್ಗೆ ಅಮೃತಸರ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಅಂದಾಜು ಸಮಿತಿ ಸದಸ್ಯರಾದ ವಿಜಯ ಕುಮಾರ್, ನಾಗೇಶ್, ಅಮರೇಗೌಡ, ದೊಡ್ಡನಗೌಡ ಪಾಟೀಲ್, ಎಚ್. ಎಸ್.ಮಹದೇವ ಪ್ರಸಾದ್ ಅಧಿಕೃತ ಕಾರ್ಯಕ್ರಮದ ಮೇಲೆ ಅಮೃತಸರಕ್ಕೆ ಹೋಗಿದ್ದರು. ಬೆಳಿಗ್ಗೆ 9.40ಕ್ಕೆ ಖಾಸಗಿ ಅಮೃತಸರದಿಂದ ದೆಹಲಿ ಹೊರಟಾಗ ಈ ಘಟನೆ ನಡೆಯಿತು.

ವಿಮಾನ ರನ್‌ವೇಯಲ್ಲಿ ವೇಗವಾಗಿ ಹೊರಟಿದ್ದಾಗ ಹಕ್ಕಿ ಬಡಿಯಿತು. ತಕ್ಷಣ ಜಾಗೃತರಾದ ಚಾಲಕ ವಿಮಾನವನ್ನು ಮೇಲಕ್ಕೆ ಹಾರಿಸದೆ ವೇಗ ಕಡಿಮೆ ಮಾಡಿ ನಿಲ್ದಾಣಕ್ಕೆ ವಾಪಸ್ ತಂದರು. ಅಂದಾಜು ಸಮಿತಿ ಸದಸ್ಯರು ಮತ್ತೊಂದು ವಿಮಾನದಲ್ಲಿ ಮಧ್ಯಾಹ್ನ 3.30ಕ್ಕೆ ದೆಹಲಿಗೆ ಧಾವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT