ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ನಂಟಿನ `ರೆಬೆಕಾ ಸೋಮರ್ಸ್‌' ನಿಧನ

ಭಾರತ-ಅಮೆರಿಕ ವಾಣಿಜ್ಯ ಪರಿಷತ್ ಅಧ್ಯಕ್ಷ ರಾನ್ ಸೋಮರ್ಸ್‌ ಪತ್ನಿ
Last Updated 14 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ವಾಷಿಂಗ್ಟನ್(ಪಿಟಿಐ):  ಕರ್ನಾಟಕದೊಂದಿಗೆ ಗಾಢ ನಂಟು ಹೊಂದಿದ್ದ ಭಾರತ- ಅಮೆರಿಕ ವಾಣಿಜ್ಯ ಪರಿಷತ್ತಿನ ಅಧ್ಯಕ್ಷ ರಾನ್ ಸೋಮರ್ಸ್‌ ಪತ್ನಿ ರೆಬೆಕಾ ಸೋಮರ್ಸ್‌ (50) ಅವರು ಶುಕ್ರವಾರ ಕೊನೆಯುಸಿರೆಳೆದಿದ್ದಾರೆ.

ಅವರು ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಕೊಜೆಂಟ್ರಿಕ್ಸ್ ಇತ್ಯಾದಿ ಅಮೆರಿಕ ಮೂಲದ ವಿದ್ಯುತ್ ಕಂಪೆನಿ ರಾನ್ ಸೋಮರ್ಸ್‌ ಕೆಲಸ ಮಾಡುತ್ತಿದ್ದಾಗ 1992-2004ರ ಅವಧಿಯಲ್ಲಿ ಬೆಂಗಳೂರು ಮತ್ತು ದೆಹಲಿಯಲ್ಲಿ ಈ ದಂಪತಿ ವಾಸವಾಗಿದ್ದರು.  ಬೆಂಗಳೂರಿನಲ್ಲಿ ನೆಲೆಸ್ದ್ದಿದ ವೇಳೆ  ಇಂದಿರಾನಗರದಲ್ಲಿರುವ ಅನಾಥಾಶ್ರಮವೊಂದರಲ್ಲಿ ರೆಬೇಕಾ ಸ್ವಯಂ ಸೇವಕಿಯಾಗಿ ಸೇವೆ ಸಲ್ಲಿಸಿದ್ದರು.  ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿ, ವಿದ್ಯಾರ್ಥಿ ವೇತನ ನೀಡುತ್ತಿದ್ದರು.

ಸಮಾಜ ಸೇವೆಯ ಜೊತೆಗೆ ಸಾಹಸ ಮನೋಭಾವವನ್ನು ರೂಢಿಸಿಕೊಂಡಿದ್ದ ರೆಬೆಕಾ ಅವರು ಹಳ್ಳ-ತೊರೆಗಳ ಶೋಧ, ಚಾರಣ, ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದರು. ಕಾವೇರಿ ಮತ್ತು ಗಂಗಾ ನದಿಗಳಲ್ಲಿ ಕಂಡುಬರುವ ವಿಶಿಷ್ಟ `ಮಶೀರ್' ಮೀನು ಹಿಡಿಯುವುರಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ಅಲ್ಲದೆ ಕಬಿನಿ, ಬಂಡೀಪುರ ಹಾಗೂ ನಾಗರಹೊಳೆ ಕಾಡುಗಳಲ್ಲಿ ಹೆಚ್ಚು ಸುತ್ತಾಡಿದ್ದ ಅವರು, ಆನೆ ಮತ್ತು ಪಕ್ಷಿಗಳ ಕುರಿತು ಅಧ್ಯಯನ ನಡೆಸಿದ್ದರು.

`ಭಾರತೀಯರ  ಸ್ನೇಹಪರತೆ ಮತ್ತು ಮತ್ತು ವಿಶಾಲ ಹೃದಯನ್ನು ಅರಿಯಲು ರೆಬೆಕಾ ನನಗೆ ನೆರವಾದಳು' ಎಂದು ಪತಿ ರಾನ್ ಸೋಮರ್ಸ್‌ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT