ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಹಿತ ಮರೆತ ರಾಷ್ಟ್ರೀಯ ಪಕ್ಷಗಳು: ಕುರಡಗಿ

Last Updated 13 ಏಪ್ರಿಲ್ 2013, 6:32 IST
ಅಕ್ಷರ ಗಾತ್ರ

ಗದಗ: ರಾಷ್ಟ್ರೀಯ ಪಕ್ಷಗಳಿಂದ ಕರ್ನಾಟಕ ರಾಜ್ಯದ ಹಿತಾಸಕ್ತಿ ರಕ್ಷಣೆ ಅಸಾಧ್ಯವೆಂಬುದು ಇತಿಹಾಸದ ಅನೇಕ ಘಟನೆಗಳಿಂದ ರುಜುವಾತಾಗಿದೆ ಎಂದು  ಕೆಜೆಪಿ ಜಿಲ್ಲಾಧ್ಯಕ್ಷ  ರಾಜು ಕುರಡಗಿ ಹೇಳಿದರು.

ತಾಲ್ಲೂಕಿನ ಮುಳಗುಂದ ಪಟ್ಟಣದಲ್ಲಿ ಗದಗ ವಿಧಾನಸಭೆ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಎಸ್.ಬಿ.ಸಂಕಣ್ಣ ವರ ಪರ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರೈತರು, ನೇಕಾರರು, ಮುಸ್ಲಿಂಬಾಂಧವರಿಗೆ ಹೆಚ್ಚು  ಅನುದಾನವನ್ನು ಯಡಿಯೂರಪ್ಪ ನೀಡಿದ್ದಾರೆ.

ಎಸ್.ಬಿ.ಸಂಕಣ್ಣವರ ಅವರನ್ನು ಗೆಲ್ಲಿಸುವ ಮೂಲಕ ಯಡಿಯೂರಪ್ಪ ಅವರ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು. ಪಕ್ಷದ ಅಭ್ಯರ್ಥಿ ಎಸ್.ಬಿ.ಸಂಕಣ್ಣವರ ಮಾತನಾಡಿ, ಜನತೆ ನನ್ನನ್ನು ಬೆಂಬಲಿಸುವ ಮೂಲಕ  ಗದಗ ಶಹರ, ಗ್ರಾಮಾಂತರ ಭಾಗದ ಪ್ರಗತಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಹೇಳಿದರು.


ಕೆಜೆಪಿ ಯುವ ಧುರೀಣ ಸದು  ಮದರಿಮಠ ಮಾತನಾಡಿ, ಜಿಲ್ಲೆಯಾದ್ಯಂತ ಕೆಜೆಪಿ ಅಲೆ ಇದ್ದು, ಜನತೆ ಬಿಜೆಪಿ-ಕಾಂಗ್ರೆಸ್‌ನಂತಹ ರಾಷ್ಟ್ರೀಯ ಪಕ್ಷ ಗಳನ್ನು ತಿರಸ್ಕರಿಸಲಿದ್ದಾರೆ ಎಂದರು.

ನಗರಸಭೆ ಸದಸ್ಯ ಅನಿಲ ಅಬ್ಬಿಗೇರಿ, ಸಿದ್ದು ಪಲ್ಲೆೀದ, ಅಮರೇಶ ಅಂಗಡಿ, ಕೆ.ಪಿ.ಗುಳಗೌಡ್ರ, ಸಂಗಣ್ಣ ಬಂಗಾರಶೆಟ್ರ, ರಜಾಕ ಡಂಕೇದ, ಚಂದ್ರು ತಡಸದ, ಪ್ರಭುದೇವ ಹಿರೇಮಠ, ಖಾಲೀದ ಕೊಪ್ಪಳ  ಮಾತನಾಡಿದರು. ಪಕ್ಷದ ಧುರೀಣರಾದ ಅಮರೇಶ ಬೆಟಗೇರಿ, ವಿಕ್ರಾಂತ ಅಬ್ಬಿಗೇರಿ, ದಾನು ದಾನಪ್ಪಗೌಡ್ರ, ಉಡಚಪ್ಪ ಹಳ್ಳಿಕೇರಿ, ರಾಜಣ್ಣ ವಾಲಿ, ಹನುಮಂತಪ್ಪ ಅಳವಂಡಿ, ಇರ್ಷಾದ್ ಮಾನ್ವಿ, ಚಂದ್ರು ಹಾದಿಮನಿ,ಆನಂದ ಸರ್ವದೆ, ಪೂಜಾ ಬೇವೂರ, ಪದ್ಮಾ ಗುಜ್ಜಲ್, ಶಂಕ್ರವ್ವ ಬಳ್ಳೊಳ್ಳಿ  ಹಾಜರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT