ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಮಟ್ಟದ ಪ್ರಾಥಮಿಕ, ಪ್ರೌಢಶಾಲಾ ಅಥ್ಲೆಟಿಕ್ ಕೂಟಕ್ಕೆ ತೆರೆ

ಪ್ರಭುತ್ವ ಮೆರೆದ ದಕ್ಷಿಣ ಕನ್ನಡ ಜಿಲ್ಲಾ ತಂಡಗಳು
Last Updated 2 ಡಿಸೆಂಬರ್ 2012, 20:54 IST
ಅಕ್ಷರ ಗಾತ್ರ

ಚಿತ್ರದುರ್ಗ: ದಕ್ಷಿಣ ಕನ್ನಡ ಜಿಲ್ಲೆಯ ತಂಡಗಳು ನಗರದ ವೀರ ವನಿತೆ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ 14 ಮತ್ತು 17 ವರ್ಷ ವಯೋಮಿತಿಯ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ-ಬಾಲಕಿಯರ ರಾಜ್ಯಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಭಾನುವಾರ ಸಮಗ್ರ ಪ್ರಶಸ್ತಿ ಪಡೆದುಕೊಂಡವು.

ಕಳೆದ ಮೂರು ದಿನಗಳಿಂದ ನಡೆದ ಕೂಟದಲ್ಲಿ ಪ್ರಮುಖವಾಗಿ ಆಳ್ವಾಸ್ ಪ್ರೌಢಶಾಲೆ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದು ಗಮನಸೆಳೆಯಿತು.

17ವರ್ಷದ ವಯೋಮಿತಿಯ ಬಾಲಕರ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಂದೇಶ್ ಮತ್ತು ಬಾಲಕಿಯರ ವಿಭಾಗದಲ್ಲಿ ಇದೇ ಜಿಲ್ಲೆಯ ದೀಕ್ಷಾ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ ಪಡೆದರು.

14ರ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಶ್ರಾವ್ಯಾ ರೈ(ದ.ಕ.) ಹಾಗೂ ಬಾಲಕರ ವಿಭಾಗದಲ್ಲಿ ವಿದ್ಯಾನಗರ ಕ್ರೀಡಾಶಾಲೆಯ ಸೈಮನ್ ಎಸ್. ನಾಯಕ್ ವೈಯಕ್ತಿಕ ಚಾಂಪಿಯನ್‌ಶಿಪ್ ಪ್ರಶಸ್ತಿ ಪಡೆದರು. ಮೂರು ದಿನಗಳ ಕೂಟದಲ್ಲಿ 19 ಹೊಸ ದಾಖಲೆಗಳು ನಿರ್ಮಾಣವಾದವು.

ಕೊನೇ ದಿನದ ಫಲಿತಾಂಶ:

14 ವರ್ಷದ ಬಾಲಕರ ವಿಭಾಗ: 100 ಮೀ. ಓಟ:
ಬೆಂಗಳೂರಿನ ವಿದ್ಯಾನಗರ ಕ್ರೀಡಾಶಾಲೆಯ ಸೈಮನ್ ಎಸ್. ನಾಯಕ್ (ಕಾಲ 11.90 ಸೆ.)-1, ಮಂಗಳೂರಿನ ಜಾಫರ್ ಸಾಧಿಕ್ (ಕಾಲ 12. 10 ಸೆ.)-2, ವಿಜಾಪುರದ ಸಂಜೀವ್ ರಾಥೋಡ್ (ಕಾಲ 12.40 ಸೆ.)-3.
200 ಮೀ. ಓಟ: ಬೆಳಗಾವಿಯ ಬಸವರಾಜ್ ಎ. ಪೂಜಾರಿ (ಕಾಲ 24.30 ಸೆ.)-1, ಬೆಂಗಳೂರಿನ ವಿದ್ಯಾನಗರ ಕ್ರೀಡಾಶಾಲೆಯ ಬಸ್ತಿಯಾನ್ (ಕಾಲ 24.70 ಸೆ.)-2, ದಕ್ಷಿಣ ಕನ್ನಡ ಜಿಲ್ಲೆಯ ಓವಿನ್ ಡಿಸೋಜಾ (ಕಾಲ 25 ಸೆ)-3.

600 ಮೀಟರ್ ಓಟ: ದ.ಕ.ದ ಎಂ.ವಿ. ಧನಂಜಯ (ಕಾಲ 1:35:9 ನಿ.)-1, ಓವಿನ್ ಡಿಸೋಜಾ (ಕಾಲ 1:36:1 ನಿ.)-2, ಕೂಡಿಗೆಯ ಶಂಕರ್ ಕೌಜಲಗಿ (ಕಾಲ 1:37:2 ನಿ.)-3.

80 ಮೀಟರ್ ಹರ್ಡಲ್ಸ್ ಓಟ:  ಅಮನ್ ಅರುಣ್ (ದ.ಕ.) (ಕಾಲ 12.30 ಸೆ.)-1, ಬೆಳಗಾವಿಯ ಬಸವರಾಜ್ ಎ. ಪೂಜಾರಿ (ಕಾಲ 12.60 ಸೆ.)-2, ಉಡುಪಿಯ ಸಂಜೀತ್ (ಕಾಲ 13.00 ಸೆ.)-3.

14 ವರ್ಷದ ಬಾಲಕಿಯರ ವಿಭಾಗ: 100 ಮೀ. ಓಟ: ಶ್ರೇಯಾ ಎಸ್. ಸುವರ್ಣ (ದ.ಕ.) (ಕಾಲ 13.30 ಸೆ.)-1, ವಿಜಾಪುರದ ಸಮ್ಸಿನ್ ಇಂಡಿಕಾರ್ (ಕಾಲ 13.60 ಸೆ.)-2, ಎನ್. ಶ್ರೇಯಾ ರೈ (ದ.ಕ) (ಕಾಲ 14.10 ಸೆ.)-3.
200 ಮೀಟರ್ ಓಟ: ಶ್ರಾವ್ಯಾ ರೈ (ದ.ಕ.) (ಕಾಲ 27.80 ಸೆ.)-1, ಜಿಲ್ಲೆಯ ಶ್ರೇಯಾ (ದ.ಕ.) (ಕಾಲ 27.90 ಸೆ.)-2, ಬೆಂಗಳೂರಿನ ವಿದ್ಯಾನಗರದ ಎಚ್.ಆರ್. ಧನುಷಾ (ಕಾಲ 28.30 ಸೆ.)-3.

600 ಮೀ. ಓಟ: ಜಯಲಕ್ಷ್ಮೀ (ದ.ಕ.) (ಕಾಲ 1:44:3 ನಿ.)-1, ಮೈಸೂರಿನ ಮರ್ಸಿ ಜಾಯ್ನರ್ (ಕಾಲ 1:48:09 ನಿ.)-2, ಬೆಳಗಾವಿಯ ಪ್ರಣಲಿ ಡಿ. ಜಾದವ್ (ಕಾಲ 1:50:4 ನಿ.)-3.

80 ಮೀಟರ್ ಹರ್ಡಲ್ಸ್: ಎಂ. ಸೌಮ್ಯಶ್ರೀ (ದ.ಕ.) (ಕಾಲ 13.30 ಸೆ.)-1, ಉಡುಪಿಯ ದೀಕ್ಷಿತಾ (ಕಾಲ 15.20 ಸೆ.)-2, ದಕ್ಷಿಣ ಕನ್ನಡ ಜಿಲ್ಲೆಯ ಕೃತಿಪರಮೋಡಿ (ಕಾಲ 15.40 ಸೆ.)-3.

17 ವರ್ಷದ ಬಾಲಕರ ವಿಭಾಗ:
100 ಮೀಟರ್ ಓಟ: ಬೆಂಗಳೂರಿನ ವಿದ್ಯಾನಗರ ಕ್ರೀಡಾಶಾಲೆಯ ಬಿ. ಸಲ್ಮಾನ್ (ಕಾಲ 11.60 ಸೆ.)-1, ದಕ್ಷಿಣ ಕನ್ನಡದ ಎಚ್.ಎಸ್. ಮಹಮದ್ ಅಲ್ತಾಫ್ ಗುಜರಾತ್ (ಕಾಲ 11.70 ಸೆ.)-2, ಬೆಳಗಾವಿಯ ಯಶ್ ಕೆ. ಕಾರಿಗಾರ್ (ಕಾಲ 11.80 ಸೆ.)-3.

200 ಮೀಟರ್ ಓಟ: ಬೆಂಗಳೂರು ಉತ್ತರದ ಎಲ್. ಭರತ್ (ಕಾಲ 23.30 ಸೆ.)-1, ದಕ್ಷಿಣ ಕನ್ನಡ ಜಿಲ್ಲೆಯ ಬೇಹು (ಕಾಲ 23.60 ಸೆ.)-2, ಶಿರಸಿಯ ವಿ. ಅರುಣ್ (ಕಾಲ 23.80 ಸೆ.)-3.

800 ಮೀಟರ್ ಓಟ: ಕೂಡಿಗೆಯ ಬಿ. ಶರತ್ (ಕಾಲ 2:01:07 ನಿ.)-1, ಬೆಂಗಳೂರು ಗ್ರಾಮಾಂತರದ ವಿ. ಸುದರ್ಶನ್ (ಕಾಲ 2:02:08 ನಿ.)-2, ಚಿಕ್ಕೋಡಿಯ ಅನಿಲ್ ಗಾಣಿಗೇರ್ 2:04:02 ನಿ.)-3.

3000 ಮೀಟರ್ ಓಟ: ಚಿಕ್ಕೋಡಿಯ ಮಹಾಂತೇಶ್ ನಾಯ್ಕ (ಕಾಲ 9:28:8 ನಿ.)-1, ಕೊಡಗಿನ ಕೂಡಿಗೆ ಕ್ರೀಡಾಶಾಲೆಯ ಲೋಕ್ಯಾ (ಕಾಲ 9:32:1 ನಿ.)-2, ಬೆಂಗಳೂರಿನ ವಿದ್ಯಾನಗರದ ಗಣೇಶ್ ಗೌಡ ( ಕಾಲ 9:33:9 ನಿ.)-3.

ಪೋಲ್‌ವಾಲ್ಟ್:  ಉಡುಪಿ ಜಿಲ್ಲೆ ನಿಟ್ಟೆಯ ಡಾ.ಎನ್‌ಎಸ್‌ಎಎಂ ಪದವಿಪೂರ್ವ ಕಾಲೇಜಿನ ಶರತ್ (ಎತ್ತರ 3ಮೀ.)-1, ಉತ್ತರ ಕನ್ನಡ ಮುಕುಂದ ಮಂಜಯ್ಯ ದೇವಡಿಗ್ (ಎತ್ತರ 2.90ಮೀ.)-2, ಸಮರ್ಥ (ಎತ್ತರ 2.90ಮೀ.)-3

ಡಿಸ್ಕಸ್ ಥ್ರೋ:  ದಾವಣಗೆರೆ ಜಿಲ್ಲೆಯ ಆರ್.ಪಿ. ಶರತ್‌ಬಾಬು (ದೂರ 33.57 ಮೀ.)-1, ಕೊಪ್ಪಳದ ಗವಿಸ್ವಾಮಿ (ದೂರ 33.31ಮೀ.), ಬೆಳಗಾವಿಯ ಅಲ್ಲಾಭಕ್ಷ (ದೂರ 33.22ಮೀ.)-3

17 ವರ್ಷ ವಯೋಮಿತಿಯ ಬಾಲಕಿಯರ ವಿಭಾಗ
100 ಮೀ. ಓಟ: ಕಾರುಣ್ಯ ಕೊಂಡೆ (ದ.ಕ.) (ಕಾಲ 12.70 ಸೆ.)-1, ಶಿಮ್ಮಿ ಎನ್.ಎಸ್. (ದ.ಕ.) (ಕಾಲ 12.80 ಸೆ.)-2, ಕೂಡಿಗೆ ಕ್ರೀಡಾಶಾಲೆ ಅನುಷಾ ಎಸ್. ಶೆಟ್ಟಿ (ಕಾಲ 12.90 ಸೆ.)-3.

200 ಮೀಟರ್ ಓಟ: ಕೂಡಿಗೆ ಕ್ರೀಡಾಶಾಲೆಯ ಎನ್.ಎಸ್. ಇಂಚರಾ (ಕಾಲ 26.20 ಸೆ.)-1, ತಾರುಣ್ಯ ಕೊಂಡೆ (ದ.ಕ.) (ಕಾಲ 26.30 ಸೆ.)-2, ಎನ್.ಎಸ್. ಸೀಮಾ (ಕಾಲ 26.40 ಸೆ.)-3.

800 ಮೀಟರ್ ಓಟ: ವೆನ್ನಿಸ್ಸಾ ಕರೋಲ್ ಕ್ವಾಡ್ರಸ್ (ದ.ಕ.) (ಕಾಲ 2:26:06. ನಿ.)-1, ಬೆಂಗಳೂರು ಉತ್ತರದ ವಿ. ಹೇಮಾ (ಕಾಲ 2:27:08 ನಿ.)-2, ಕೂಡಿಗೆ ಕ್ರೀಡಾಶಾಲೆಯ ಎಂ.ಎಚ್. ಅಶ್ವಿನಿ (ಕಾಲ 2:27:08 ನಿ.)-3.

3000 ಮೀ. ಓಟ: ಮೈಸೂರಿನ ಎಂ. ಮಂಜುಳಾ (ಕಾಲ 11:07:02 ನಿ.)-1, ದಕ್ಷಿಣ ಕನ್ನಡ ಜಿಲ್ಲೆಯ ಬಿ. ದೀಕ್ಷಾ (ಕಾಲ 11:14:03 ನಿ.)-2, ಶಿವಮೊಗ್ಗದ ದಿವ್ಯಾ (ಕಾಲ 11:23:5 ನಿ.)-3.

100 ಮೀಟರ್ ಹರ್ಡಲ್ಸ್: ಧಾರವಾಡದ ಪುಷ್ಪಾಂಜಲಿ (ಕಾಲ 16.02 ಸೆ.)-1, ಧಾರವಾಡ ಐಶ್ವರ್ಯಾ ಹಲಗಲಿ (ಕಾಲ 16.07 ಸೆ.)-2, ಬೆಂಗಳೂರು ದಕ್ಷಿಣದ ಸುಷ್ಮಾ ರಾಮ್ ( ಕಾಲ 17.40 ಸೆ.)-3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT