ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಮಟ್ಟದ ವಾಲಿಬಾಲ್ ಟೂರ್ನಿ ಉದ್ಘಾಟನೆ

Last Updated 19 ಫೆಬ್ರುವರಿ 2012, 5:30 IST
ಅಕ್ಷರ ಗಾತ್ರ

ಶಿಕಾರಿಪುರ: ರಾಜಕೀಯದಲ್ಲಿ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು. ಆದರೆ, ಕ್ರೀಡೆಯಲ್ಲಿ ರಾಜಕೀಯ ಬೆರೆಸುವಂತಹ ಕೆಲಸ ಮಾಡುವುದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ಶನಿವಾರ ಮೈತ್ರಾದೇವಿ ಸೇವಾ ಪ್ರತಿಷ್ಠಾನ, ಪೌರವಿಹಾರ, ಕುಮದ್ವತಿ ಕ್ರೀಡಾ ಸಂಸ್ಥೆ, ಜಿಲ್ಲಾ ವಾಲೀಬಾಲ್ ಸಂಸ್ಥೆಗಳ ಆಶ್ರಯದಲ್ಲಿ ಆರಂಭಗೊಂಡ ಮೂರು ದಿನಗಳ ರಾಜ್ಯಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಟೂರ್ನಿ ಉದ್ಘಾಟಿಸಿ ಅವರು ಮಾತನಾಡಿದರು.

ದೈನಂದಿನ ಜೀವನದ ಜಂಜಾಟದಲ್ಲಿ ತೊಡಗಿರುವ ಜನರಿಗೆ ಕ್ರೀಡಾಕೂಟಗಳು ಮನಸ್ಸಿಗೆ ಉಲ್ಲಾಸ ನೀಡುತ್ತವೆ ಎನ್ನುವ ಕಾರಣಕ್ಕೆ ವಾಲಿಬಾಲ್ ಪಂದ್ಯಾವಳಿ ನಡೆಸಿದ್ದು, ತಾಲ್ಲೂಕಿನ ಯುವಜನರು ಕ್ರೀಡೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದಕ್ಕೂ ಇದು ಸಹಕಾರಿ ಆಗುತ್ತದೆ ಎಂದರು.

ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ರಾಜಕೀಯದಲ್ಲಿ ಆಪಾದನೆಗಳನ್ನು ಪರಸ್ಪರ ಎರೆಚುವ ಕೆಲಸದಲ್ಲಿ ರಾಜಕಾರಣಿಗಳು ಮಾಡುತ್ತಾರೆ. ಇವು ಜನರ ಮನಸ್ಸಿಗೆ ಹಿತ ನೀಡುವುದಿಲ್ಲ. ಆದರೆ, ವಾಲಿಬಾಲ್ ಕ್ರೀಡೆಯಲ್ಲಿ ಬಾಲ್ ಅನ್ನು ಪರಸ್ಪರ ಎಸೆದಾಗ ಮನಸ್ಸು ಜಾಗೃತವಾಗಿರುತ್ತದೆ. ಅಲ್ಲದೇ, ಉಲ್ಲಾಸದಿಂದ ಸ್ಪಂದಿಸುತ್ತದೆ ಎಂದರು.

ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ ಮಾತನಾಡಿ, ಆರೋಗ್ಯವಂತ ದೇಹದಲ್ಲಿ ಮಾತ್ರ ಉತ್ತಮ ಮನಸ್ಸು ಹೊಂದಿರುತ್ತದೆ. ವಿದ್ಯಾರ್ಥಿಗಳು, ಯುವಕರು ಉತ್ತಮ ದೇಹ ಹೊಂದಬೇಕಾದಲ್ಲಿ ಕ್ರೀಡೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಶಾಸಕರಾದ ಕೆ.ಜಿ. ಕುಮಾರಸ್ವಾಮಿ, ಹಾಲಾಡಿ ಶಿವರಾಜಶೆಟ್ಟರ್, ಲಾಲಾಜಿ ಮಂಡನ್, ರಘುಪತಿ ಭಟ್, `ಕಾಡಾ~ ಅಧ್ಯಕ್ಷ ಕೆ. ಶೇಖರಪ್ಪ, ಪುರಸಭೆ ಅಧ್ಯಕ್ಷೆ ವೀಣಾ ಮಲ್ಲೇಶಪ್ಪ, ಬೇಗೂರು ರಘುನಾಥ್, ರಾಮಪ್ಪ, ಶಿರಾಳಕೊಪ್ಪ ಚಂದ್ರಶೇಖರಪ್ಪ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT