ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

ಹಿರಿಯ ರಂಗಭೂಮಿ ಕಲಾವಿದೆ ಎಚ್‌. ಫ್ಲೊರಿನಾ ಬಾಯಿ ಅವರಿಗೆ ಗೌರವ
Last Updated 2 ಡಿಸೆಂಬರ್ 2013, 8:21 IST
ಅಕ್ಷರ ಗಾತ್ರ

ಗದಗ: ಹಿರಿಯ ರಂಗಭೂಮಿ ಕಲಾವಿದೆ ಎಚ್‌. ಫ್ಲೊರಿನಾ ಬಾಯಿ ಅವರಿಗೆ 2013ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ಭಾನುವಾರ ಪ್ರದಾನ ಮಾಡಲಾಯಿತು.

ನಗರದ ಶಹಪುರಪೇಟೆಯ ಫ್ಲೊರಿನಾ ನಿವಾಸಕ್ಕೆ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾ­ಯತ್‌ ರಾಜ್‌ ಸಚಿವ ಎಚ್‌.ಕೆ.ಪಾಟೀಲ ಭೇಟಿ ನೀಡಿ ಶಾಲು ಹೊದಿಸಿ, ಪ್ರಶಸ್ತಿ ಫಲಕ ಮತ್ತು ಒಂದು ಲಕ್ಷ ರೂಪಾಯಿ ಚೆಕ್‌ ನೀಡಿ ಗೌರವಿಸಿದರು.
‘ನನ್ನಂತೆ ನೂರಾರು ಕಲಾವಿದರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ನೀವು ಕಲಾವಿದೆ ಆಗಿ­ರುವುದರಿಂದ ಅವರ ಸಮಸ್ಯೆ ಗೊತ್ತು. ಅಂತಹವರಿಗೆ ಸಹಾಯ ಮಾಡಿ’ ಎಂದು ಫ್ಲೊರಿನಾ ಕಣ್ಣೀರಿಟ್ಟರು.

ಫ್ಲೊರಿನಾ ಅವರನ್ನು ಸಮಾಧಾನ ಪಡಿಸಿದ ಸಚಿವೆ, ಸರ್ಕಾರದಿಂದ ದೊರಕುತ್ತಿರುವ ಸೌಲಭ್ಯದ ಬಗ್ಗೆ ಅವರ ಪತಿ ಕೆ.ಎಚ್‌.ಲಕ್ಕುಂಡಿ ಅವರಿಂದ ಮಾಹಿತಿ ಪಡೆದರು.

ಉಮಾಶ್ರೀ ಅವರ  ಜತೆ ಯಾವುದಾದರೂ ನಾಟಕ­ದಲ್ಲಿ ನಟಿಸಿದ್ದೀರಾ ಎಂದು ಸಚಿವ ಎಚ್‌.ಕೆ.ಪಾಟೀಲ ಪ್ರಶ್ನಿಸಿದಾಗ, ಬಸ್‌ ಕಂಡಕ್ಟರ್‌ ನಾಟಕದಲ್ಲಿ ನಟಿಸಿದ್ದೇನೆ ಎಂದು ಫ್ಲೊರಿನಾ ಉತ್ತ­ರಿಸಿದರು. ‘ನನ್ನ ಕಾಲು ಚೆನ್ನಾಗಿದ್ದರೆ ಉಮಾಶ್ರೀ ಅವರ ಜತೆ ಈಗಲೂ ನಾಟಕದಲ್ಲಿ ನಟಿಸುತ್ತಿದೆ’ ಎಂದು ಫ್ಲೊರಿನಾ ಹಾಸ್ಯ ಚಟಾಕಿ ಹಾರಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಉಮಾಶ್ರೀ, ಫ್ಲೊರಿನಾ ಅವರ ವೈದ್ಯಕೀಯ ವೆಚ್ಚ ರೂ1.15 ಲಕ್ಷವನ್ನು ಸರ್ಕಾರ ಭರಿಸಲಿದೆ ಎಂದರು. ಜಿಲ್ಲಾಧಿಕಾರಿ ಎನ್‌.ಎಸ್‌.­ಪ್ರಸನ್ನಕುಮಾರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿ­ಕಾರಿ ಡಾ.ಎಸ್‌.ಡಿ.ಶರಣಪ್ಪ, ನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಬನಶಂಕರಿ ಅಂಗಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿ.ಜಿ.ತುರಮರಿ ಅವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT