ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಝ್-3 ಆರಂಭ

Last Updated 6 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ವಿಕ್ರಂ ಭಟ್ `ರಾಝ್-3~ ಚಿತ್ರವನ್ನು ಆರಂಭಿಸಿದ್ದಾರೆ. `ಹಾರರ್ ಆಫ್ ದಿ ಹಾರ್ಟ್ಸ್~ ಎಂಬ ವಿಷಯವನ್ನು ಆಧಾರವಾಗಿಟ್ಟುಕೊಂಡು ಕತೆ ಹೆಣೆಯಲಾಗಿದೆ. `ಇದು ಸಂಪೂರ್ಣವಾಗಿ ಹೊಸ ಕತೆ. `ರಾಝ್-3~ ಎಂಬ ಹೆಸರನ್ನು ಪ್ರಚಾರಕ್ಕಾಗಿ ಇಡಲಾಗಿದೆ.
 
ಒಂದನೇ ಮತ್ತು ಎರಡನೇ ಸರಣಿಗೂ ಇದಕ್ಕೂ ಯಾವುದೇ ಸಂಬಂಧ ಇರುವುದಿಲ್ಲ. ಹಾರರ್ ದೃಶ್ಯಗಳಷ್ಟೇ ರೊಮ್ಯಾಂಟಿಕ್ ದೃಶ್ಯಗಳೂ ಚಿತ್ರದಲ್ಲಿವೆ. ಪ್ರತಿಯೊಂದು ಸನ್ನಿವೇಶವೂ ಆಶ್ಚರ್ಯ ಮತ್ತು ಆಘಾತ ನೀಡಲಿವೆ. ನಮ್ಮ ಈ ಮೊದಲಿನ ಎಲ್ಲಾ ದಾಖಲೆಗಳನ್ನು ಈ ಚಿತ್ರ ಮುರಿಯಲಿದೆ~ ಎಂದು ಮುಖೇಶ್ ಭಟ್ ಹೇಳಿದ್ದಾರೆ.

ಶಗುಫ್ತಾ ರಫಿಕ್ ಹೆಸರಿನ ಹೊಸ ಹುಡುಗ ಬರೆದಿರುವ ಸ್ಕ್ರಿಪ್ಟ್ ಬಗ್ಗೆ ಅಪಾರ ಭರವಸೆ ವ್ಯಕ್ತಪಡಿಸಿರುವ ಮಹೇಶ್ ಭಟ್, ತಮ್ಮ ಎರಡನೇ ಪುತ್ರಿ ಶಹೀನ್ ಈ ಚಿತ್ರದ ಮೂಲಕ ಸಹಾಯಕ ನಿರ್ದೇಶಕಿಯಾಗಿ ಕೆಲಸ ಆರಂಭಿಸುತ್ತಿರುವ ವಿಚಾರವನ್ನೂ ತಿಳಿಸಿದ್ದಾರೆ. ಅಂದಹಾಗೆ, ಚಿತ್ರದ ನಾಯಕ ಇಮ್ರಾನ್ ಹಷ್ಮಿ , ನಾಯಕಿ ಬಿಪಾಶಾ ಬಸು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT