ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಡಿಯಾ ಟೇಪ್ ನಲ್ಲಿ ಹಸ್ತಕ್ಷೇಪ: ಸುಪ್ರೀಂಗೆ ಕೇಂದ್ರ ಮಾಹಿತಿ

Last Updated 31 ಜನವರಿ 2012, 10:20 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮಾಧ್ಯಮ ಸಂಸ್ಥೆಗಳು ಪ್ರಸಾರ ಮಾಡಿದ ರಾಡಿಯಾ ಟೇಪ್ ಗಳನ್ನು ತಿದ್ದಲಾಗಿದೆ ಎಂಬ ಮಹತ್ವದ ಮಾಹಿತಿಯನ್ನು ಮಂಗಳವಾರ ಸುಪ್ರೀಂಕೋರ್ಟ್ ಗೆ ನೀಡಿದ ಕೇಂದ್ರ ಸರ್ಕಾರ ~ಟೇಪ್ ಸೋರಿಕೆಗೆ ಸರ್ಕಾರಿ ಸಂಸ್ಥೆಗಳು ಹೊಣೆಯಲ್ಲ~ ಎಂದು ಪ್ರತಿಪಾದಿಸಿತು.

ನ್ಯಾಯಮೂರ್ತಿ ಜಿ.ಎಸ್. ಸಿಂಘ್ವಿ ನೇತೃತ್ವದ ಪೀಠಕ್ಕೆ ಮೊಹರು ಮಾಡಲಾದ ಲಕೋಟೆಯಲ್ಲಿ ~ರಹಸ್ಯ ವರದಿಯನ್ನು~ ಸಲ್ಲಿಸಿದ ಸರ್ಕಾರ, ಹಿಂದಿನ ಕಾರ್ಪೋರೇಟ್ ದಲ್ಲಾಳಿ ನೀರಾ ರಾಡಿಯಾ ಅವರ ವಿವಾದಿತ ದೂರವಾಣಿ ಸಂಭಾಷಣೆಯಲ್ಲಿ ನಡೆದ ಹಸ್ತಕ್ಷೇಪದಲ್ಲಿ ಸೇವಾ ಸಂಸ್ಥೆಗಳು ಸೇರಿದಂತೆ ಎಂಟರಿಂದ ಹತ್ತು ಸಂಸ್ಥೆಗಳು ಸೇರಿವೆ ಎಂದು ಪ್ರತಿಪಾದಿಸಿತು.

ಮಾಧ್ಯಮಗಳು ಬಿಡುಗಡೆ ಮಾಡಿದ ಟೇಪ್ ಗಳನ್ನು ತಿದ್ದಲಾದ ಬಗ್ಗೆ ತಿಳಿಸಲಾಗಿದೆ ಎಂದು ಹೇಳಿದ ರಹಸ್ಯ ವರದಿಯ ಕೆಲವು ಆರಂಭಿಕ ಪುಟಗಳನ್ನು ಪೀಠವು ಪರಿಶೀಲಿಸಿತು.

ಮೂಲ ಟೇಪ್ ಜೊತೆಗೆ ಪ್ರಸಾರ ಮಾಡಲಾದ ಟೇಪ್ ಗಳ ಆರಂಭ ಮತ್ತು ಕೊನೆಯ ಸಂಭಾಷಣೆಗಳು ತಾಳೆಯಾಗುವುದಿಲ್ಲ ಎಂದು ವರದಿ ಹೇಳಿರುವುದಾಗಿ ನ್ಯಾಯಮೂರ್ತಿ ಸಿಂಘ್ವಿ ಅವರು ವರದಿಯನ್ನು ಉಲ್ಲೇಖಿಸುತ್ತಾ ನುಡಿದರು.

ಪ್ರಕರಣದ ವಿಚಾರಣೆ ನಡೆಸಿದ ಅಧಿಕಾರಿಗಳಿಗೆ ಟೇಪ್ ನ್ನು ಯಾರು ಸೋರಿಕೆ ಮಾಡಿದರು ಎಂಬುದು ಗೊತ್ತಿಲ್ಲ ಎಂದೂ ವರದಿ ಹೇಳುತ್ತದೆ ಎಂದು ನ್ಯಾಯಮೂರ್ತಿ ತಿಳಿಸಿದರು. ~ಬೇರೆ ಯಾರಾದರೂ ಇದನ್ನು ಮಾಡಿರುವ ಸಾಧ್ಯತೆ ಇದೆ~ ಎಂದು ಪೀಠ ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT