ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಣಿ ಚನ್ನಮ್ಮ ವಿ.ವಿ. ತಂಡಕ್ಕೆ ಅಮೋಘ ಗೆಲುವು

Last Updated 20 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ
ಮಣಿಪಾಲ: ಗಿರೀಶ್ ಕುಂದೋಜಿ ಮತ್ತು ಗಣೇಶ್ ಕಂಗ್ರಾಲಕರ ಅವರ ಶತಕಗಳ ನೆರವಿನಿಂದ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಕ್ರಿಕೆಟ್ ಟೂರ್ನಿ ಪಂದ್ಯದಲ್ಲಿ ಗುರುವಾರ ತ್ರಿಶೂರಿನ ಕೇರಳ ಕೃಷಿ ವಿ.ವಿ. ವಿರುದ್ಧ 277 ರನ್‌ಗಳ ಭಾರಿ ಗೆಲುವು ಸಾಧಿಸಿತು. 
 
ಸುರತ್ಕಲ್‌ನ ಎನ್‌ಐಟಿಕೆ ಮೈದಾನದಲ್ಲಿ ಟಾಸ್ ಗೆದ್ದು ಬ್ಯಾಟ್ ಮಾಡಲು ನಿರ್ಧರಿಸಿದ ರಾಣಿ ಚನ್ನಮ್ಮ  ವಿ.ವಿ. 50 ಓವರುಗಳಲ್ಲಿ 4 ವಿಕೆಟ್‌ಗೆ 377 ರನ್ ಹೊಡೆಯಿತು. ನಂತರ ಕೃಷಿ ವಿ.ವಿ.ಯನ್ನು 100 ರನ್ನಿಗೆ ಉರುಳಿಸಿತು.
 
ಗಿರೀಶ್ 118 ಎಸೆತಗಳಲ್ಲಿ 3 ಸಿಕ್ಸರ್, 14 ಬೌಂಡರಿಗಳಿದ್ದ 136 ರನ್ ಬಾರಿಸಿದರೆ, ಗಣೇಶ್ 108 ಎಸೆತಗಳಲ್ಲಿ ಒಂದು ಸಿಕ್ಸರ್, 17 ಬೌಂಡರಿಗಳಿದ್ದ 134 ರನ್ ಸಿಡಿಸಿದರು. ಮೂರನೇ ವಿಕೆಟ್‌ಗೆ ಇವರಿಬ್ಬರು 224 ರನ್ ಸೇರಿಸಿದ್ದರು.
 
ರಾಣಿ ಚೆನ್ನಮ್ಮ ವಿ.ವಿ. ಮುಂದಿನ ಸುತ್ತಿನಲ್ಲಿ ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿ.ವಿ. ವಿರುದ್ಧ ಆಡಲಿದೆ. ಸಂಸ್ಕೃತ ವಿ.ವಿ. ಇನ್ನೊಂದು ಪಂದ್ಯದಲ್ಲಿ ಎರ್ನಾಕುಲಂನ ಶಂಕರಾಚಾರ್ಯ ಸಂಸ್ಕೃತ ವಿ.ವಿ. ವಿರುದ್ಧ 5 ವಿಕೆಟ್‌ಗಳ ಜಯಪಡೆಯಿತು.
 
ಇನ್ನೊಂದು ಕುತೂಹಲಕರ ಪಂದ್ಯದಲ್ಲಿ ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ ವಿಶ್ವವಿದ್ಯಾಲಯ  (ಎನ್‌ಎಲ್‌ಎಸ್‌ಐಯು) ತಂಡ ಒಂದು ಓವರ್ ಉಳಿದಿರುವಂತೆ 3 ವಿಕೆಟ್‌ಗಳಿಂದ ಕೊಯಮತ್ತೂರಿನ ರಾಮಕೃಷ್ಣ ಎಂ.ವಿ. ವಿಶ್ವವಿದ್ಯಾಲಯ ವಿರುದ್ಧ ಜಯಸಾಧಿಸಿತು. ಸಾಹಿಲ್ ಖೇರ್ ಅವರ ಅಜೇಯ 156 (154 ಎಸೆತ, 21 ಬೌಂಡರಿ) ರನ್ ಬಾರಿಸಿ ಬೆಂಗಳೂರು ತಂಡ ಗೆಲುವಿಗೆ ಅಗತ್ಯವಿದ್ದ 261 ರನ್‌ಗಳ ಗುರಿ ತಲುಪಲು ನೆರವಾದರು.
ಬೆಂಗಳೂರಿನ ತಂಡ, ಮುಂದಿನ ಪಂದ್ಯದಲ್ಲಿ ಆತಿಥೇಯ ಮಣಿಪಾಲ ವಿ.ವಿ. ತಂಡವನ್ನು ಎದುರಿಸಲಿದೆ.
 
ನೆಲ್ಲೂರಿನ ವಿಕ್ರಮಸಿಂಹಪುರ ವಿ.ವಿ. ತಂಡ, ಮಣಿಪಾಲ ವಿ.ವಿ. ಮೈದಾನದಲ್ಲಿ ನಡೆದ ಇನ್ನೊಂದು ಪಂದ್ಯದಲ್ಲಿ ತುಮಕೂರು ವಿ.ವಿ. ವಿರುದ್ಧ ನಾಲ್ಕು ರನ್‌ಗಳ ರೋಚಕ ಜಯಪಡೆಯಿತು.
ಸ್ಕೋರುಗಳು: ಎಂಐಟಿ ಮೈದಾನ: ಗೀತಮ್ ವಿ.ವಿ., ವಿಶಾಖಪಟ್ಟಣ: 32.2 ಓವರುಗಳಲ್ಲಿ 144 (ಬಿ.ತುಳಸಿರಾಮ್ 26; ಜೆ.ಲಕ್ಷ್ಮಿಪತಿ 19ಕ್ಕೆ3); ದ್ರಾವಿಡ ವಿ.ವಿ., ಕುಪ್ಪಂ: 21.2 ಓವರುಗಳಲ್ಲಿ 54 (ಎನ್.ಎಸ್.ಪ್ರತೀಕ್ 15ಕ್ಕೆ3, ಸಾಹಿ ಅನೂಪ್ 15ಕ್ಕೆ4).
ಮಣಿಪಾಲ ವಿ.ವಿ. ಮೈದಾನ: ಡಾ.ಅಂಬೇಡ್ಕರ್ ಕಾನೂನು ವಿಶ್ವವಿದ್ಯಾಲಯ, ಚೆನ್ನೈ: 39.4 ಓವರುಗಳಲ್ಲಿ 140 (ಎಂ.ಪ್ರಿನ್ಸ್‌ಲಿ 38); ಶ್ರೀವೆಂಕಟೇಶ್ವರ ವಿ.ವಿ., ತಿರುಪತಿ: 27.2 ಓವರುಗಳಲ್ಲಿ 4 ವಿಕೆಟ್‌ಗೆ 143 (ಸಿ.ಎಚ್.ವಿಕ್ರಮ್ ಔಟಾಗದೇ 43, ಎಂ.ಮಹೇಶ್ 43).
 
ಮಣಿಪಾಲ ವಿ.ವಿ. ಮೈದಾನ2: ವಿಕ್ರಮಸಿಂಹಪುರ ವಿ.ವಿ., ನೆಲ್ಲೂರು: 39.4 ಓವರುಗಳಲ್ಲಿ 134 (ಕೆ.ವೆಂಕಟಸುಬ್ಬಯ್ಯ 37, ಅರಿಫ್ ಅಹ್ಮದ್ 40; ಜಿ.ಟಿ.ಪವನ್ ಕುಮಾರ್ 19ಕ್ಕೆ3, ಬಿ.ಆರ್.ಭೀಮಂತರಾಜ್ 16ಕ್ಕೆ4); ತುಮಕೂರು ವಿ.ವಿ: 37.1 ಓವರುಗಳಲ್ಲಿ 130 (ಗವಿಸಿದ್ದೇಶ್ ಎಂ.ಹುಲ್ಲೂರ್ 41; ಟಿ.ಹರಿಪ್ರಸಾದ್ 35ಕ್ಕೆ4, ಸಿ.ಎಚ್.ಗುರವಯ್ಯ 19ಕ್ಕೆ3). 
 
ಎಂಜಿಎಂ ಕಾಲೇಜು ಮೈದಾನ: ಶಂಕರಾಚಾರ್ಯ ಸಂಸ್ಕೃತ ವಿ.ವಿ., ಎರ್ನಾಕುಲಂ: 26.4 ಓವರುಗಳಲ್ಲಿ 117 (ದುರ್ಗಾಪ್ರಸಾದ್ 22ಕ್ಕೆ4, ಅನಿಲ್ ದಾಸ್ 11ಕ್ಕೆ3); ರಾಷ್ಟ್ರೀಯ ಸಂಸ್ಕೃತ ವಿ.ವಿ, ತಿರುಪತಿ: 30.5 ಓವರುಗಳಲ್ಲಿ 5 ವಿಕೆಟ್‌ಗೆ 118 (ಎ.ರಾಕೇಶ್ 37, ಓಬಯ್ಯ ಔಟಾಗದೇ 24).
 
ಸುರತ್ಕಲ್‌ನ ಎನ್‌ಐಟಿಕೆ ಮೈದಾನ 1: ರಾಣಿ ಚೆನ್ನಮ್ಮ ವಿ.ವಿ, ಬೆಳಗಾವಿ: 50 ಓವರುಗಳಲ್ಲಿ 4 ವಿಕೆಟ್‌ಗೆ 377 (ಗಿರೀಶ್ 136, ಗಣೇಶ್ 134); ಕೇರಳ ಕೃಷಿ ವಿ.ವಿ. ತ್ರಿಶೂರು: 33 ಓವರುಗಳಲ್ಲಿ 100 (ಇರ್ಫಾನ್ 8ಕ್ಕೆ3, ತೇಜಸ್ 14ಕ್ಕೆ3).
 
ಎನ್‌ಐಟಿಕೆ ಮೈದಾನ2: ರಾಮಕೃಷ್ಣ ಎಂ.ವಿ. ವಿ.ವಿ: 50 ಓವರುಗಳಲ್ಲಿ 7 ವಿಕೆಟ್‌ಗೆ 260 (ಮಗುದ್ದೇಶ್ವರನ್ 60, ಮಣಿಕಂಠನ್ 40, ಸೆಲ್ವಕುಮಾರ್ 60); ಎನ್‌ಎಲ್‌ಎಸ್‌ಐಯು, ಬೆಂಗಳೂರು: 49 ಓವರುಗಳಲ್ಲಿ 7 ವಿಕೆಟ್‌ಗೆ 264 (ಸಾಹಿಲ್ ಖೇರ್ ಔಟಾಗದೇ 156; ಸೆಲ್ವ ಕುಮಾರ್ 40ಕ್ಕೆ4).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT