ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಣಿ ಮತ್ತು ಮೊಬೈಲ್

Last Updated 11 ಜೂನ್ 2011, 19:30 IST
ಅಕ್ಷರ ಗಾತ್ರ

ರಾಣಿ ಮೊಬೈಲ್‌ನಲ್ಲಿ ಆಟವಾಡುತ್ತಿದ್ದಳು. `ಮೊಬೈಲ್ ಯಾರದು?~ ಎಂದು ಅಮ್ಮ ಕೇಳಿದರು. `ಪಕ್ಕದ ಮನೆ ಅಂಕಲ್‌ದು~ ಎಂದ ರಾಣಿ ಆಟದಲ್ಲಿ ಮುಳುಗಿದಳು. ಅದು ಕೈಜಾರಿ ನೆಲಕ್ಕೆ ಬಿತ್ತು. ರಾಣಿ ಬೆಚ್ಚಿದಳು. ಆಗ ಅಮ್ಮ, `ಯಾರಿಗೂ ಹೇಳದೇ ಮೊಬೈಲನ್ನು ಪಕ್ಕದ ಮನೆ ಆಂಟಿ ಕೈಗೆ ಕೊಟ್ಟು ಬಾ~ ಎಂದು ಹೇಳಿ ಕಳುಹಿಸಿದರು. ರಾಣಿ ಹಾಗೆ ಮಾಡಿದಳು.

ಪಕ್ಕದ ಮನೆಯವರು ಮೊಬೈಲ್ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಗಮನಿಸಿ ರಾಣಿಯನ್ನು ಕೇಳಿದಾಗ ಅಮ್ಮ ಹೇಳಿಕೊಟ್ಟಂತೆ `ನನಗೇನು ಗೊತ್ತಿಲ್ಲ ನಾನು ಆಟವಾಡುವಾಗ ಸರಿಯಾಗಿಯೇ ಇತ್ತು~ ಎಂದು ರಾಣಿ ಸುಳ್ಳು ಹೇಳಿದಳು.

ಸ್ವಲ್ಪ ದಿವಸದಲ್ಲೇ ರಾಣಿ ಅಮ್ಮ ಹೊಸ ಮೊಬೈಲ್ ಖರೀದಿಸಿದರು. ರಾಣಿ ಪದೇ ಪದೇ ಆಟವಾಡಬೇಕೆಂದು ಮೊಬೈಲ್ ಕೇಳತೊಡಗಿದಳು. ಅಮ್ಮ ಕೊಡಲೊಲ್ಲರು. ಒಮ್ಮೆ ಅಮ್ಮ ಮರೆವಿನಲ್ಲಿ ಮೊಬೈಲ್ ಬಿಟ್ಟು ಹೋದಾಗ ರಾಣಿ ಅದನ್ನೆತ್ತಿಕೊಂಡು ಆಟವಾಡುತ್ತಿದ್ದಳು.

ಅಂದು ಕೂಡ ಅವಳ ಕೈಜಾರಿ ಮೊಬೈಲ್ ನೆಲಕ್ಕೆ ಬಿತ್ತು. ಅಮ್ಮನಿಗೆ ಸಿಟ್ಟು ನೆತ್ತಿಗೇರಿತು. ರಾಣಿಗೆ ಎರಡು ಏಟು ಕೊಟ್ಟರು. ಆಗ ರಾಣಿ, ಅಮ್ಮ ಪಕ್ಕದ ಮನೆ ಅಂಕಲ್ ಮೊಬೈಲ್ ನೆಲಕ್ಕೆ ಬೀಳಿಸಿದ್ದಕ್ಕೆ ನೀನು ಹೊಡೆಯಲಿಲ್ಲ. ಈಗ ಯಾಕೆ ಹೊಡೆಯುವೆ?~ ಎಂದು ಅಳುತ್ತಲೇ ಪ್ರಶ್ನಿಸಿದಳು. ಅಮ್ಮನಿಗೆ ಕಸಿವಿಸಿಯಾಯಿತು. ತನ್ನ ತಪ್ಪು ಅರಿವಾಯಿತು.

ಮಗಳನ್ನು ಸಮಾಧಾನಪಡಿಸುತ್ತಾ, `ರಾಣಿ ನಿನ್ನಿಂದ ನಾನು ಪಾಠ ಕಲಿತೆ. ಅಂಕಲ್ ಮೊಬೈಲ್ ಬೀಳಿಸಿದಾಗಲೇ ನಾನು ನಿನಗೆ ಬೈಯದೇ ತಪ್ಪು ಮಾಡಿದೆ. ಅದರಿಂದ ಇಂದು ನೀನು ಮತ್ತೆ ಅದೇ ತಪ್ಪು ಮಾಡಿದೆ. ಅಂದೇ ನಾನು ನಿನಗೆ ಬುದ್ಧಿ ಹೇಳಬೇಕಿತ್ತು.
 
ಬೇರೆಯವರ ವಸ್ತುವನ್ನು ಕೆಡಿಸಿದಾಗ ಬೈಯದ ನನಗೆ ನನ್ನ ವಸ್ತು ಕೆಡಿಸಿದಾಗ ಬೈಯುವ ಹಕ್ಕಿರುವುದಿಲ್ಲ. ಇನ್ನು ಮುಂದೆ ಯಾರ ವಸ್ತುವಾದರೂ ಕಾಳಜಿಯಿಂದ ನೋಡಿಕೋ~ ಎಂದು ಹೇಳಿ ನೊಂದುಕೊಂಡರು.ರಾಣಿಗೆ ಅಮ್ಮನ ಮಾತುಗಳು ಅರ್ಥವಾದವು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT