ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾತ್ರಿ ತಾಜ್‌ಮಹಲ್ ವೀಕ್ಷಣೆಗೆ ಸೈಕಲ್ ಬಳಕೆ

Last Updated 3 ಮೇ 2012, 19:30 IST
ಅಕ್ಷರ ಗಾತ್ರ

ಲಖನೌ (ಪಿಟಿಐ): ತಾಜ್‌ಮಹಲ್‌ಗೆ ಭೇಟಿ ನೀಡುವವರು ಇನ್ನು ಮುಂದೆ ಬೆಳದಿಂಗಳ ಬೆಳಕಿನಲ್ಲಿ ಸೈಕಲ್ ಸವಾರಿ ಮಾಡುತ್ತಲೇ ತಾಜ್‌ಮಹಲ್ ವೀಕ್ಷಿಸಲಿದ್ದಾರೆ. ಅಂಥ ಸೌಲಭ್ಯ ಒದಗಿಸಲು ಉತ್ತರ ಪ್ರದೇಶ ಸರ್ಕಾರ ಇದೀಗ ಮುಂದಾಗಿದೆ.

ಪರಿಸರ ಪ್ರವಾಸೋದ್ಯಮ  ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಉತ್ತರಪ್ರದೇಶ ಸರ್ಕಾರ ಈ ಹೊಸ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಬಯಸಿದ್ದು, ಇದರನ್ವಯ ರಾತ್ರಿಯ ವೇಳೆ ತಾಜ್‌ಮಹಲ್ ವೀಕ್ಷಿಸಲೆಂದೇ ಎಂಟು ಕಿ.ಮೀ ಉದ್ದದ ಸೈಕಲ್ ಟ್ರ್ಯಾಕ್ ನಿರ್ಮಿಸಲಾಗುವುದು.

ಇದರೊಂದಿಗೆ ಮುಮ್ತಾಜ್ ಪರಿಸರ ಪಾರ್ಕ್ ಕೂಡ ನಿರ್ಮಾಣಗೊಳ್ಳಲಿದ್ದು ಒಂಟೆ ಮೇಲೆ ಸಫಾರಿ ಹಾಗೂ ಯಮುನಾ ನದಿಯಲ್ಲಿ ದೋಣಿ ವಿಹಾರ ಖುಷಿಯನ್ನೂ ಪ್ರವಾಸಿಗರು ಅನುಭವಿಸಬಹುದಾಗಿದೆ. ಪ್ರವಾಸಿಗರಿಗೆ ಈ ಎಲ್ಲ ಸೌಲಭ್ಯಗಳನ್ನು ಒದಗಿಸುವ ಯೋಜನೆಯ ರೂಪುರೇಷೆಗಳನ್ನು ತಯಾರಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಜಾವೇದ್ ಉಸ್ಮಾನಿ ಅವರು ತಿಳಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT