ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಬ್ಲೆಸ್ ಕನಸಿನ ಓಟಕ್ಕೆ ಅಡ್ಡಿಯಾದ ವಿಧಿ

Last Updated 9 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಲಂಡನ್ (ಐಎಎನ್‌ಎಸ್): ನಾಲ್ಕು ವರ್ಷಗಳ ಹಿಂದೆ ಬೀಜಿಂಗ್‌ನಲ್ಲಿ ಗೆದ್ದಿದ್ದ ಚಿನ್ನದ ಪದಕದ ಪ್ರದರ್ಶನವನ್ನು ಪುನರಾವರ್ತಿಸುವ ಡೇರಾನ್ ರಾಬ್ಲೆಸ್ ಅವರ ಕನಸು ಭಗ್ನಗೊಂಡಿದೆ.

ಲಂಡನ್ ಒಲಿಂಪಿಕ್ಸ್‌ನ ಪುರುಷರ ವಿಭಾಗದ 110 ಮೀಟರ್ ಹರ್ಡಲ್ಸ್ ಫೈನಲ್‌ನಲ್ಲಿ ಸ್ಪರ್ಧೆ ಆರಂಭಿಸಿದ ಅವರು ಅರ್ಧದಲ್ಲೇ ಹಿಂದೆ ಸರಿದರು. ಬುಧವಾರ ರಾತ್ರಿ ನಡೆದ ಈ ವಿಭಾಗದ ಓಟದಲ್ಲಿ ಕ್ಯೂಬಾದ ಡೇರಾನ್ ಸ್ನಾಯುಸೆಳೆತಕ್ಕೆ ಒಳಗಾದರು. ಈ ಕಾರಣ ಅವರ ಕನಸಿನ ಓಟಕ್ಕೆ ವಿಧಿ ಅಡ್ಡಿಯಾಯಿತು. ಈ ಮೂಲಕ ಚಿನ್ನ ಗೆಲ್ಲುವ ಅವರ ಕನಸು ಛಿದ್ರಗೊಂಡಿತು. 50 ಮೀಟರ್ ದೂರ ಓಡಿದ್ದ ಅವರು ಮುನ್ನಡೆಯಲ್ಲಿಯೇ ಇದ್ದರು. ಆದರೆ ಈ ಹಂತದಲ್ಲಿ ಹರ್ಡಲ್ಸ್ ಬಡಿದು ಸ್ನಾಯು ಸೆಳೆತಕ್ಕೆ ಒಳಗಾದರು. ನಿರಾಶೆಗೆ ಒಳಗಾದ ಅವರು ಅಲ್ಲೇ ಕುಸಿದು ಕುಳಿತರು. ಡೇರಾನ್ ಈ ಓಟದ ಸೆಮಿಫೈನಲ್‌ನಲ್ಲಿ 13.10 ಸೆಕೆಂಡ್‌ಗಳಲ್ಲಿ ಓಡಿದ್ದರು. ಈ ಮೂಲಕ ಎರಡನೇ ಸ್ಥಾನದಲ್ಲಿದ್ದರು. ಆದರೆ ಫೈನಲ್‌ನಲ್ಲಿ ಅದೃಷ್ಟ ಕೈಕೊಟ್ಟಿತು. ಈ ವಿಭಾಗದಲ್ಲಿ ಅಮೆರಿಕಾದ ಏರಿಸ್ ಮೆರಿಟ್ ಚಿನ್ನ ಗೆದ್ದರು. ಅವರು 12.92 ಸೆಕೆಂಡ್‌ಗಳಲ್ಲಿ ಕ್ರಮಿಸಿದರು. ಅಮೆರಿಕಾದವರೇ ಆದ ಜೆಸಾನ್ ರಿಚರ್ಡ್ಸನ್ (13.04 ಸೆ.) ಬೆಳ್ಳಿ ಗೆದ್ದರು. ಕಂಚಿನ ಪದಕ ಜಮೈಕಾದ ಹ್ಯಾನ್ಸೆ ಪಾರ್ಚ್‌ಮೆಂಟ್ (13.12 ಸೆ.) ಪಾಲಾಯಿತು.

25 ವರ್ಷ ವಯಸ್ಸಿನ ಡೇರಾನ್ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ 12.93 ಸೆಕೆಂಡ್‌ಗಳಲ್ಲಿ ಓಡಿ ಚಿನ್ನದ ಪದಕ ಗೆದ್ದಿದ್ದರು. ಅವರು 2008ರಲ್ಲಿಯೇ ಗೋಲ್ಡನ್ ಸ್ಪೈಕ್ ಆಸ್ಟ್ರೇವ್ ಕ್ರೀಡಾಕೂಟದಲ್ಲಿ 12.87 ಸೆಕೆಂಡ್‌ಗಳಲ್ಲಿ ಓಡಿ ವಿಶ್ವದಾಖಲೆ ನಿರ್ಮಿಸಿದ್ದರು. ಆ ದಾಖಲೆ ಇನ್ನೂ ಅವರ ಹೆಸರಿನಲ್ಲಿಯೇ ಇದೆ. 2004ರ ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಚೀನಾದ ಲಿಯು ಕ್ಸಿಯಾನ್ ಕೂಡ ಹೀಟ್ಸ್‌ನಲ್ಲಿಯೇ ಹಿಂದೆ ಸರಿದಿದ್ದರು. ಕ್ಸಿನ್ ಮೊದಲ ಹರ್ಡಲ್ ದಾಟುವಾಗ ಎಡವಿ ಬಿದ್ದಿದ್ದರು. ಹಾಗಾಗಿ ಕಾಲಿಗೆ ತೀವ್ರ ಏಟು ಬಿದ್ದಿದೆ. ಈ ಕಾರಣ ಅವರು ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT