ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮದುರ್ಗ: ಜೇಸಿ ಸಪ್ತಾಹ ಆರಂಭ

Last Updated 10 ಅಕ್ಟೋಬರ್ 2011, 6:55 IST
ಅಕ್ಷರ ಗಾತ್ರ

ರಾಮದುರ್ಗ: ಸಂಘಟನೆಯಿಂದಲೇ ಸಾಮಾಜಿಕ ಕಾರ್ಯವು ಯಶಸ್ವಿಯಾಗಲು ಸಾಧ್ಯ. ಅಂತಹ ಸಂಘಟನೆಯಲ್ಲಿ ಜೆಸಿಐ ಸಂಘಟನೆಯು ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮವು ಶ್ಲಾಘನೀಯ ಎಂದು ಡಾ. ವೈ. ಬಿ. ಕುಲಗೋಡ ಬಣ್ಣಿಸಿದರು.

ಸ್ಥಳೀಯ ಸಿ. ಎಸ್. ಬೆಂಬಳಗಿ ಕಾಲೇಜಿನಲ್ಲಿ ಭಾನುವಾರ ಜ್ಯೂನಿಯರ್ ಛೇಂಬರ್ ಆಫ್ ಇಂಟರ್ ನ್ಯಾಶನಲ್ ಸಂಸ್ಥೆ ಹಮ್ಮಿಕೊಂಡ `ಜೇಸಿ ಸಪ್ತಾಹ ಕಾರ್ಯಕ್ರಮ~ವನ್ನು ಉದ್ಘಾಟಿಸಿ ಮಾತನಾಡಿದ ಅವರು ಯುವಕರು ಅಂತರ್‌ರಾಷ್ಟ್ರೀಯ ಸಂಸ್ಥೆಗಳಲ್ಲಿ ಸದಸ್ಯತ್ವ ಹೊಂದಿ ಸಮಾಜ ಸುಧಾರಣೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.

ಸಾಹಿತಿ ಡಾ. ವೈ. ಎಂ. ಯಾಕೊಳ್ಳಿ ಮುಖ್ಯ ಅತಿಥಿಯಾಗಿ ಮಾತನಾಡಿ, ಯುವಕರು ದೇಶದ ಪ್ರಗತಿ ಮತ್ತು ರಕ್ಷಣೆ ಬಗ್ಗೆ ಚಿಂತನೆ ಮಾಡುವಂತಹ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಮಹಾತ್ಮರ ಆದರ್ಶಗಳನ್ನು ಯುವಕರು ಜೀವನದಲ್ಲಿ ಅಳವಡಿಸಿಕೊಂಡು ನಾಡಿನ ಪ್ರಗತಿ ಬಗ್ಗೆ ಯೋಚಿಸಬೇಕು ಎಂದು ಹೇಳಿದರು.

ಜೈಂಟ್ಸ್ ಇಂಟರ್ ನ್ಯಾಶನಲ್ ಸಂಸ್ಥೆಯ ವಿಶೇಷ ಸಮಿತಿ ಸದಸ್ಯ ದಿನಕರ ಅಮಿನ್ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಉತ್ತಮ ವ್ಯಕ್ತಿತ್ವ ರೂಪುಗೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಜೇಸಿ ಸಂಸ್ಥೆ ವ್ಯಕ್ತಿತ್ವ ವಿಕಸನಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ ಜೆಸಿಐ ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಹೊಸಮನಿ ಮಾತನಾಡಿ, 5 ದಿನಗಳ ವರೆಗೆ ಗ್ರಾಮೀಣ ಭಾಗದಲ್ಲಿ ವಿನೂತನ ಕಾರ್ಯಕ್ರಮಗಳ ಹಮ್ಮಿಕೊಳ್ಳುವ ಮೂಲಕ ಜೇಸಿ ಸಪ್ತಾಹವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುತ್ತಿದೆ ಎಂದು ಹೇಳಿದರು. ಕಾರ್ಯಕ್ರಮ ಸಂಯೋಜಕ ಅಶೋಕ ಕುಲಗೋಡ, ಕಾರ್ಯದರ್ಶಿ ಎಸ್. ಎಲ್. ಪೆಟ್ಲೂರ ಉಪಸ್ಥಿತರಿದ್ದರು. ಪ್ರೊ. ಎಸ್. ಎಂ. ಸಕ್ರಿ ಸ್ವಾಗತಿಸಿದರು. ಪ್ರೊ. ಪಿ. ಬಿ. ತೆಗ್ಗಿಹಳ್ಳಿ ಕಾರ್ಯಕ್ರಮ ನಿರೂಪಿಸಿದರು. ಅನುಸೂಯಾ ಸಾವಳಗಿ ವಂದಿಸಿದರು.

`ಆರ್ಥಿಕ ಸಬಲತೆ ಅಗತ್ಯ~
ರಾಮದುರ್ಗ: ಮಹಿಳೆಯರು ಸಮಾಜದಲ್ಲಿ ಏನನ್ನಾದರೂ ಸಾಧಿಸಬೇಕಾದರೆ ಮೊದಲು ಶಾರೀರಿಕವಾಗಿ, ಬೌದ್ಧಿಕವಾಗಿ, ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಬಲಾಢ್ಯವಿರಬೇಕು ಎಂದು ರಾಜ್ಯ ಮಾನವ ಹಕ್ಕುಗಳ ಮಂಡಳಿಯ ತಾಲ್ಲೂಕು ಘಟಕದ ಅಧ್ಯಕ್ಷ ಡಾ. ಎಸ್. ಜಿ. ದೇವಾಂಗಮಠ ಹೇಳಿದರು.

ಇಲ್ಲಿನ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಗ್ರಾಮೀಣ ಫೈನಾನ್ಸಿಯಲ್ ಸರ್ವಿಸಸ್ ಪ್ರೈ.ಲಿ ಸಂಸ್ಥೆಯು ಹಮ್ಮಿಕೊಂಡ ಸಾಮಾಜಿಕ ಮತ್ತು ಆರ್ಥಿಕ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸದ್ಯ ಸಮಾಜ ಸುಧಾರಣೆಯಾಗಲು ಮಹಿಳೆಯರ ಪಾತ್ರ ಮುಖ್ಯವಾಗಿದೆ ಎಂದರು. ಆರ್. ಐ. ಕೆರೂರ್ ಮಾತನಾಡಿದರು. ಎಂ. ಬಿ. ಪುರಾಣಿಕ, ನಾಗಪ್ಪ ಐ. ಟಿ., ನಾರಾಯಣ, ಸುರೇಶ ದೊಡ್ಡಬಸಪ್ಪ, ಆಕಾಶ, ಉಮೇಶ, ಮಂಜುನಾಥ ವೇದಿಕೆ ಮೇಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT