ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ, ಬಾಗಲಕೋಟೆ ಆತಿಥ್ಯ

Last Updated 30 ಮೇ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಡೆಕ್ಕನ್ ಅಥ್ಲೆಟಿಕ್ ಕ್ಲಬ್ ಆಶ್ರಯದ `ಪ್ರಜಾವಾಣಿ- ಡೆಕ್ಕನ್ ಹೆರಾಲ್ಡ್~ ಪ್ರಾಯೋಜಿತ ಕೆ.ಎ. ನೆಟ್ಟಕಲ್ಲಪ್ಪ ಸ್ಮಾರಕ ರಾಜ್ಯಮಟ್ಟದ ವಾರ್ಷಿಕ ರಸ್ತೆ ಓಟದ ಸ್ಪರ್ಧೆಗಳು ಈ ಬಾರಿ ರಾಮನಗರ ಮತ್ತು ಬಾಗಲಕೋಟೆಯಲ್ಲಿ ನಡೆಯಲಿವೆ.

ರಾಮನಗರದಲ್ಲಿ ಜೂನ್ 17 ರಂದು ಹಾಗೂ ಬಾಗಲಕೋಟೆಯಲ್ಲಿ ಜುಲೈ 1 ರಂದು ಸ್ಪರ್ಧೆ ಏರ್ಪಡಿಸಲಾಗಿದೆ. ವಿವಿಧ ವಿಭಾಗದ ಓಟದ ಸ್ಪರ್ಧೆಗಳು ಬೆಳಿಗ್ಗೆ 6.30ಕ್ಕೆ ಆರಂಭವಾಗಲಿವೆ. ಪುರುಷರು, ಮಹಿಳೆಯರು, 16 ವರ್ಷ ವಯಸ್ಸಿನೊಳಗಿನ ಬಾಲಕ ಮತ್ತು ಬಾಲಕಿಯರ ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಪುರುಷರಿಗೆ 12 ಕಿ.ಮೀ., ಮಹಿಳೆಯರಿಗೆ 6 ಕಿ.ಮೀ ಹಾಗೂ ಬಾಲಕ ಮತ್ತು ಬಾಲಕಿಯರಿಗೆ 2.5 ಕಿ.ಮೀ. ದೂರದ ಓಟ ಏರ್ಪಡಿಸಲಾಗಿದೆ.

ಪುರುಷ ಹಾಗೂ ಮಹಿಳೆಯರ ವಿಭಾಗಗಳಲ್ಲಿ ಮೊದಲ ಮೂರು ಸ್ಥಾನ ಪಡೆಯುವವರು ಕ್ರಮವಾಗಿ ರೂ. 5,000, 3,500 ಹಾಗೂ 2,500 ನಗದು ಬಹುಮಾನ ತಮ್ಮದಾಗಿಸಿಕೊಳ್ಳುವರು. 4,5 ಹಾಗೂ 6ನೇ ಸ್ಥಾನ ಗಳಿಸುವ ಅಥ್ಲೀಟ್‌ಗಳಿಗೆ ರೂ. 1,500, 650 ಮತ್ತು 500 ದೊರೆಯಲಿದೆ. ಏಳರಿಂದ ಹತ್ತರವರೆಗಿನ ಸ್ಥಾನ ಪಡೆಯುವವರು ತಲಾ 350 ರೂ. ಗಳಿಸಲಿದ್ದಾರೆ.

ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಮೊದಲ ಮೂರು ಸ್ಥಾನ ಪಡೆಯುವವರಿಗೆ ಕ್ರಮವಾಗಿ ರೂ. 1,500, 1,000 ಹಾಗೂ 750 ನಗದು ಬಹುಮಾನ ಲಭಿಸಲಿದೆ. ಈ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ರಾಜ್ಯದ ಇತರ ಭಾಗಗಂದ ಆಗಮಿಸುವ ಅಥ್ಲೀಟ್‌ಗಳಿಗೆ ಉಚಿತ ವಸತಿ ಸೌಲಭ್ಯ ಕಲ್ಪಿಸಲಾಗುವುದು. ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ.

ಹೆಸರು ನೋಂದಾಯಿಸಿದ ಅಥ್ಲೀಟ್‌ಗಳಿಗೆ ರಾಮನಗರದ ಜಿಲ್ಲಾ ಕ್ರೀಡಾಂಗಣದ ಮುಖ್ಯದ್ವಾರದಲ್ಲಿ ಜೂನ್ 16 ರಂದು ಮಧ್ಯಾಹ್ನ 3.00 ಗಂಟೆಯ ಬಳಿಕ ಹಾಗೂ ಬಾಗಲಕೋಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಜೂನ್ 30 ರಂದು ಮಧ್ಯಾಹ್ನ 3.00 ಗಂಟೆಯಿಂದ `ಚೆಸ್ಟ್ ನಂಬರ್~ ವಿತರಿಸಲಾಗುವುದು.

ಪ್ರವೇಶ ಪತ್ರಗಳನ್ನು (ಬಾಲಕ ಮತ್ತು ಬಾಲಕಿಯರು ಜನ್ಮ ದಿನಾಂಕದ ದಾಖಲೆಯೊಂದಿಗೆ) ಅನಂತರಾಜು, ಸಂಘಟನಾ ಕಾರ್ಯದರ್ಶಿ, ಡೆಕ್ಕನ್ ಅಥ್ಲೆಟಿಕ್ ಕ್ಲಬ್, ಪ್ರಗತಿ, ನಂ.39/137, 1 `ಡಿ~ ಕ್ರಾಸ್, 6ನೇ ಮೇನ್, ರೆಮ್ಕೊ ಲೇಔಟ್, ವಿಜಯನಗರ, ಬೆಂಗಳೂರು- 560 040 (ದೂ: 22275656) ವಿಳಾಸಕ್ಕೆ ಕಳುಹಿಸಿಕೊಡಬೇಕು.

ರಾಮನಗರದಲ್ಲಿ ಪಾಲ್ಗೊಳ್ಳುವ ಸ್ಪರ್ಧಿಗಳು ಜೂ. 15 ಹಾಗೂ ಬಾಗಲಕೋಟೆಯಲ್ಲಿ ಪಾಲ್ಗೊಳ್ಳುವ ಸ್ಪರ್ಧಿಗಳು ಪ್ರವೇಶಪತ್ರಗಳನ್ನು ಜೂ. 29ರ ಒಳಗೆ ತಲುಪುವಂತೆ ಕಳುಹಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT