ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಹೊನಲು ಬೆಳಕಿನ ಕಬಡ್ಡಿ ಪಂದ್ಯ ಮುಕ್ತಾಯ

ಪುರುಷರ ವಿಭಾಗ `ಎಸ್‌ಬಿಎಂ ಬೆಂಗಳೂರು'-ಮಹಿಳೆಯರ ವಿಭಾಗ `ಮಾತಾ ಬೆಂಗಳೂರು'
Last Updated 17 ಡಿಸೆಂಬರ್ 2012, 20:01 IST
ಅಕ್ಷರ ಗಾತ್ರ

ರಾಮನಗರ: ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಮಟ್ಟದ ಹೊನಲು ಬೆಳಕಿನ ಪುರುಷರ ಮತ್ತು ಮಹಿಳೆಯರ ಕಬಡ್ಡಿ ಪಂದ್ಯಾವಳಿಯಲ್ಲಿ ಪುರುಷರ ವಿಭಾಗದಲ್ಲಿ `ಎಸ್‌ಬಿಎಂ ಬೆಂಗಳೂರು' ತಂಡ ಹಾಗೂ ಮಹಿಳೆಯರ ವಿಭಾಗದಲ್ಲಿ `ಮಾತಾ ಬೆಂಗಳೂರು' ತಂಡ ಚಾಂಪಿಯನ್ ಆಗಿ ಹೊರಹೊಮ್ಮಿವೆ. ಈ ಪಂದ್ಯಾವಳಿಯಲ್ಲಿ ಒಟ್ಟು 40 ಪುರುಷರ ತಂಡ ಹಾಗೂ 6 ಮಹಿಳಾ ತಂಡಗಳು ಪಾಲ್ಗೊಂಡಿದ್ದವು.

ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ `ಎಸ್‌ಬಿಎಂ ಬೆಂಗಳೂರು' ತಂಡಕ್ಕೆ 50 ಸಾವಿರ ರೂಪಾಯಿ ಹಾಗೂ ಮಹಿಳಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ `ಮಾತಾ ಬೆಂಗಳೂರು' ತಂಡಕ್ಕೆ 30 ಸಾವಿರ ರೂಪಾಯಿ ಬಹುಮಾನ ನೀಡಲಾಯಿತು.

ಪುರಷರ ವಿಭಾಗದಲ್ಲಿ  ವಿಜಯಾ ಬ್ಯಾಂಕ್ ಬೆಂಗಳೂರು ದ್ವಿತೀಯ ಸ್ಥಾನ ಪಡೆದು ರೂ.30,000, ಕೆಪಿಟಿಸಿಎಲ್ ಬೆಂಗಳೂರು ಹಾಗೂ ಸಿಟಿ ಪೊಲೀಸ್ ಬೆಂಗಳೂರು ತೃತೀಯ ಸ್ಥಾನ ಪಡೆದು ರೂ.10,000 ಬಹುಮಾನ ಪಡೆದರು.

ಮಹಿಳೆಯರ ವಿಭಾಗದಲ್ಲಿ ಸೇಂಟ್ ಫಿಲೊಮಿನಾ ದ್ವಿತೀಯ ಸ್ಥಾನ ಪಡೆದು ರೂ.20,000 ಸಾವಿರ, ಅಮೃತಾ ಬೆಂಗಳೂರು ಹಾಗೂ ಯಂಗ್ ಗರ್ಲ್ಸ್ ರಾಮನಗರ ತೃತೀಯ ಸ್ಥಾನ ಪಡೆದು ರೂ. 10,000 ಬಹುಮಾನ ಪಡೆದರು.

ಮಹಿಳೆಯರ ವಿಭಾಗದಲ್ಲಿ ಮಾತಾ ತಂಡದ ಹಂಸವೇಣಿ `ಬೆಸ್ಟ್ ರೈಡರ್', ಅಮೃತ ತಂಡದ ಕಾವ್ಯ `ಬೆಸ್ಟ್ ಕ್ಯಾಚರ್', ಸೇಂಟ್ ಫಿಲೋಮಿನಾದ ಕಾತ್ಯಾಯಿನಿ `ಬೆಸ್ಟ್ ಆಲ್‌ರೌಂಡ್' ಪ್ರಶಸ್ತಿಗೆ ಪಾತ್ರರಾದರು.

ಪುರಷರ ವಿಭಾಗದಲ್ಲಿ ವಿಜಯಾ ಬ್ಯಾಂಕ್ ತಂಡದ ಮನೋಜ್ `ಬೆಸ್ಟ್ ರೈಡರ್', ಕೆಪಿಟಿಸಿಎಲ್‌ನ ತ್ಯಾಗರಾಜ್ `ಬೆಸ್ಟ್ ಕ್ಯಾಚರ್', ಎಸ್‌ಬಿಎಂನ್ ಸುರೇಶ್‌ಕುಮಾರ್ `ಬೆಸ್ಟ್ ಆಲ್‌ರೌಂಡರ್' ಪ್ರಶಸ್ತಿ ದಕ್ಕಿಸಿಕೊಂಡರು.

ಅಂತಿಮ ಪಂದ್ಯ ವೀಕ್ಷಣೆಗೆ ಬಂದಿದ್ದ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಮುಂದಿನ ದಿನಗಳಲ್ಲಿ ರಾಮನಗರದಲ್ಲಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಯನ್ನು ಆಯೋಜಿಸುವುದಾಗಿ ಘೋಷಿಸಿದರು.

ಶಾಸಕರಾದ ಕೆ. ರಾಜು, ಜಮೀರ್ ಅಹ್ಮದ್ ಖಾನ್, ವಿಧಾನ ಪರಿಷತ್ತಿನ ಸದಸ್ಯ ಪುಟ್ಟಣ್ಣ, ಮಾಜಿ ಶಾಸಕ ಅನ್ನದಾನಿ, ಅಂತರರಾಷ್ಟ್ರೀಯ ಕಬಡ್ಡಿ ಕ್ರೀಡಾಪಟುಗಳಾದ ಬಿ.ಸಿ. ರಮೇಶ್, ಬಿ.ಸಿ.ಸುರೇಶ್, ವಿಷಕಂಠ, ಮನೋಜ್ ಕುಮಾರ್, ತ್ಯಾಗರಾಜ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಕೆ. ದೇವೇಗೌಡ, ನಗರಸಭೆ ಅಧ್ಯಕ್ಷ ಸಾಬಾನ್ ಸಾಬ್, ಉಪಾಧ್ಯಕ್ಷ  ಬಿ.ಉಮೇಶ್, ಸದಸ್ಯರುಗಳಾದ ಸೋಮಶೇಖರ್ ರಾವ್, ಎ.ರವಿ, ರೈಡ್ ನಾಗರಾಜ್, ಪರ್ವೀಜ್ ಪಾಷಾ ಮುಖಂಡರಾದ ಎಂ.ಶಿವಲಿಂಗಪ್ಪ ಸಬ್ಬಕೆರೆ, ಪಿ.ಶಬರಿ, ಮುರುಗೇಶ್, ಈಶ್ವರ, ನಾಗಚಂದ್ರ, ಪುನೀತ್, ಶ್ರೀಕಾಂತ್, ಸುಬ್ರಹ್ಮಣಿ, ಅಶೋಕ್, ವಿಜಯ್ ಕುಮಾರ್ ಇತರರು ಭಾಗವಹಿಸಿದ್ದರು.
ನಗರಸಭೆ ಮತ್ತು ಯಂಗ್ ಬಾಯ್ಸ ಕಬಡ್ಡಿ ಕ್ಲಬ್ ಜಂಟಿಯಾಗಿ ಪಂದ್ಯಾವಳಿ ಆಯೋಜಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT