ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನವಮಿ ಸಂಗೀತ ಉತ್ಸವ ಆರಂಭ

Last Updated 12 ಏಪ್ರಿಲ್ 2013, 19:53 IST
ಅಕ್ಷರ ಗಾತ್ರ

ಬೆಂಗಳೂರು: ಚಾಮರಾಜಪೇಟೆ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಶ್ರೀ ರಾಮಸೇವಾ ಮಂಡಳಿ ಏರ್ಪಡಿಸಿರುವ 75ನೇ ರಾಮನವಮಿ ರಾಷ್ಟ್ರೀಯಸಂಗೀತ ಉತ್ಸವ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಲಾಯಿತು.

ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು, ಕಾರ್ಯಕ್ರಮಕ್ಕೆ ಚಾಲನೆ ನೀಡಿ,  ಮಂಡಳಿಯ ಅಮೃತ ಮಹೋತ್ಸವದ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು.

ಆಂಧ್ರಪ್ರದೇಶ ರಾಜ್ಯಪಾಲ ಇ.ಎಸ್. ಎಲ್.ನರಸಿಂಹನ್ ಅವರು `ರಾಮಪ್ರಿಯ' ಎಂಬ ಅಂತರ್ಜಾಲ ರೇಡಿಯೋಅನಾವರಣ ಮಾಡಿದರು. ಯು.ಶ್ರೀನಿವಾಸ್, ಯು. ರಾಜೇಶ್ ಮ್ಯಾಂಡೋಲಿನ್ ಕಛೇರಿ ಪ್ರಸ್ತುತಪಡಿಸಿದರು.

ಹೈದರಾಬಾದ್‌ನ  ಶೇಷಾಚಾರಿ ಮತ್ತು ರಾಘವಾಚಾರಿ ಸಹೋದರರ ಸಂಗೀತ ಕಾರ್ಯಕ್ರಮ ಗಮನ ಸೆಳೆಯಿತು. ಪಿಟೀಲಿನಲ್ಲಿ ಎಚ್.ಕೆ.ವೆಂಕಟರಾಮ, ಮೃದಂಗದಲ್ಲಿ ತ್ರಿವೇಂದ್ರಮ ಬಾಲಾಜಿ, ಕಂಜಿರಾದಲ್ಲಿ ಅಮೃತ್ ಸಹಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT