ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಾಜೋಯಿಸ್ ಅವರ ವಿಷಾದದ ನುಡಿ

Last Updated 26 ಜನವರಿ 2012, 19:40 IST
ಅಕ್ಷರ ಗಾತ್ರ

ರಾಜರಾಜೇಶ್ವರಿನಗರ: `ಇಂದಿನ ರಾಜಕೀಯ ಸಂಪೂರ್ಣ ಕಲುಷಿತಗೊಂಡಿದ್ದು, ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಲಾಗುತ್ತಿದೆ~ ಎಂದು ರಾಜ್ಯಸಭಾ ಸದಸ್ಯ ರಾಮಾಜೋಯಿಸ್ ವಿಷಾದ ವ್ಯಕ್ತಪಡಿಸಿದರು.

ಇಲ್ಲಿನ ನೇತಾಜಿ ಸುಭಾಷ್‌ಚಂದ್ರಬೋಸ್ ಸಂಶೋಧನಾ ಮತ್ತು ಬಹು ಅಭಿವೃದ್ದಿ ಟ್ರಸ್ಟ್ ಹಮ್ಮಿಕೊಂಡಿದ್ದ ನೇತಾಜಿ ಮಾಡೆಲ್ ಶಾಲೆಯ ಭೂಮಿ ಪೂಜೆ ಮತ್ತು ಸುಭಾಷ್‌ಚಂದ್ರಬೋಸರ 115ನೇ ಜನ್ಮ ದಿನಾಚರಣೆ  ಕಾರ್ಯಕ್ರಮದಲ್ಲಿ ಅತಿಥಿಯಾಗಿ ಅವರು ಮಾತನಾಡಿದರು.

`ಎಲ್ಲೆಡೆ ಭ್ರಷ್ಟಾಚಾರ, ಲಂಚಕೋರತನ ತುಂಬಿ ತುಳುಕುತ್ತಿದೆ. ಅಣ್ಣಾ ಹಜಾರೆ ಹೋರಾಟ ಸೇರಿದಂತೆ ಯಾವುದೇ ಕಾನೂನಿನಿಂದ ಲಂಚಗುಳಿತನ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ~ ಎಂದು ವಿಷಾದದಿಂದ ನುಡಿದರು.
ಕೈಲಾಸ ಆಶ್ರಮದ ಜಯೇಂದ್ರಪುರಿ ಸ್ವಾಮಿ ಸಮಾರಂಭದ ಸಾನ್ನಿಧ್ಯ ವಹಿಸಿದ್ದರು.

ಟ್ರಸ್ಟ್‌ನ ಸಂಘಟನಾ ಕಾರ್ಯದರ್ಶಿ ಎಂ.ರಾಜಕುಮಾರ್, ನೇತಾಜಿ ಅವರ ತತ್ವ ಆದರ್ಶಗಳನ್ನು ಮಕ್ಕಳಿಗೆ ಕಲಿಸಿ ಅವರಲ್ಲಿ ದೇಶ ಪ್ರೇಮ ಬೆಳೆಸುವ ದೃಷ್ಟಿಯಿಂದ ಮಾದರಿ ಶಾಲೆ ಪ್ರಾರಂಭಿಸಲಾಗುತ್ತಿದೆ ಎಂದರು.

ಟ್ರಸ್ಟ್ ಅಧ್ಯಕ್ಷ, ರಾಜ ಯೋಗೀಂದ್ರ ವೀರಯ್ಯಸ್ವಾಮಿ ಶಾಸ್ತ್ರಿಮಠ ಗುರೂಜಿ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಜಿ.ಆರ್.ಶಿವಶಂಕರ್, ಎನ್.ಎಸ್. ಜೋಷಿ, ಡಾ.ಉಮಾಶೇಷಗಿರಿ, ಸಂಜಯ್ ಡಿ.ಕಲ್ಮಣಕರ್, ನಿವೃತ್ತ ಐಎಎಸ್ ಅಧಿಕಾರಿ ಕೆ.ಎಂ. ಕೊಟ್ಟಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT