ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯರು ಬೃಂದಾವನಸ್ಥರಾದರು

Last Updated 5 ಜನವರಿ 2012, 19:30 IST
ಅಕ್ಷರ ಗಾತ್ರ

`ರಾಘವೇಂದ್ರ ವೈಭವ~ ಧಾರಾವಾಹಿಗಾಗಿ ನಿರ್ಮಾಪಕರಾದ ಪಟ್ಟಾಭಿರಾಮ್ ಮತ್ತು ಅನಿತಾ ಪಟ್ಟಾಭಿರಾಮ್ ಗುರುರಾಯರು 17ನೇ ಶತಮಾನದಲ್ಲಿ ಬೃಂದಾವನ ಪ್ರವೇಶಿಸಿದ ಅಮೋಘ ಸನ್ನಿವೇಶಗಳನ್ನು ಅದ್ದೂರಿ ಸೆಟ್ ಹಾಕಿಸಿ ಚಿತ್ರೀಕರಿಸಿಕೊಳ್ಳಲು ನೆರವಾದರು.

ನಿರ್ದೇಶಕ ಬ.ಲ.ಸುರೇಶ್ ಅವರು ಮಂತ್ರಾಲಯ ಶ್ರಿ ಮಠದ ಪದ್ಧತಿಯಂತೆ ಸನ್ನಿವೇಶಗಳನ್ನು ನಿರ್ದೇಶಿಸಿದರು. ಛಾಯಾಗ್ರಾಹಕ ಎಂ.ಎನ್.ಮಂಜುನಾಥ್ ಈ ದೃಶ್ಯಗಳನ್ನು ಸೆರೆಹಿಡಿದರು.

ಸಾವಿರಾರು ಜನ ಕಲಾವಿದರು, ಅವರಿಗೆ 17ನೇ ಶತಮಾನದ ವೇಷಭೂಷಣಗಳನ್ನು ಹಾಕಿಸಿ ಚಿತ್ರೀಕರಿಸಲಾಯಿತು. ನಾಲ್ಕು ಕ್ಯಾಮೆರಾಗಳನ್ನು ಬಳಸಲಾಗಿತ್ತು. ರಾಯರ ಪಾತ್ರಧಾರಿ ಪರೀಕ್ಷಿತ್ ಅವರಂತೂ ನಟಿಸುವಾಗ ಭಾವುಕರಾಗಿದ್ದರು.

`ಕಿಲಕಿಲ~ ಆರಂಭ

ಜಿ 2 ಸಂಸ್ಥೆಯ ಅರುಣ್ ಗೋಪಾಲ್ ~ಕಿಲಕಿಲ~ ಎಂಬ ಹಾಸ್ಯ ಧಾರಾವಾಹಿಯನ್ನು ನಿರ್ಮಿಸಿದ್ದಾರೆ.

ಕಿಲಕಿಲ~ ಹಾಸ್ಯ ಧಾರಾವಾಹಿಯಲ್ಲಿ ಬ್ಯಾಂಕ್ ಜನಾರ್ದನ್, ಗೋಟೂರಿ ಪ್ರಮುಖ ಪಾತ್ರಧಾರಿಗಳು. ಕಾಳಯ್ಯ ಎಂಬ ಇನ್ಸ್‌ಪೆಕ್ಟರ್ ಹಾಗೂ ಆತನ ಸಹೋದ್ಯೋಗಿಗಳ ಸುತ್ತ ಸಿದ್ಧಪಡಿಸಿರುವ ಈ ಹಾಸ್ಯ ಧಾರಾವಾಹಿ ಜನಪ್ರಿಯವಾಗುವುದರಲ್ಲಿ ಯಾವುದೇ ಸಂದೇಹ ಇಲ್ಲ ಎಂದು ತಂಡ ಹೇಳುತ್ತದೆ. ಇದು ಉದಯ ಟಿವಿಯಲ್ಲಿ ಜ. 7ರಿಂದ ಪ್ರತೀರಾತ್ರಿ 10 ರಿಂದ 10.30ರವರೆಗೆ ಪ್ರಸಾರವಾಗಲಿದೆ. 

ಇದೇ ತಿಂಗಳಲ್ಲಿ `ಸುನಾಮಿ~ ತೆರೆಗೆ

ರಾಜ ನಿರ್ಮಿಸಿ ನಟಿಸಿರುವ `ಸುನಾಮಿ~ ಚಿತ್ರ ಇದೇ ತಿಂಗಳಲ್ಲಿ ಬಿಡುಗಡೆಯಾಗಲಿದೆ.
ಮಾಕಂ ಮನೋಹರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದ ತಾರಾಬಳಗದಲ್ಲಿ ರಾಜ, ಸೋನಿಯಾ, ರಂಗಾಯಣ ರಘು, ದೊಡ್ಡಣ್ಣ, ಬುಲೆಟ್‌ಪ್ರಕಾಶ್, ಟೆನಿಸ್ ಕೃಷ್ಣ, ಹರೀಶ್‌ರಾಯ್, ಕಿಲ್ಲರ್ ವೆಂಕಟೇಶ್, ಜೊಸೈಮನ್, ಗಜರ್‌ಖಾನ್, ಡಿಂಗ್ರಿ ನಾಗರಾಜ್, ಬ್ಯಾಂಕ್ ಜನಾರ್ದನ್, ಬಿರಾದಾರ್ ಮುಂತಾದವರಿದ್ದಾರೆ.

ಗೌರಿ ವೆಂಕಟೇಶ್ ಛಾಯಾಗ್ರಹಣ ನೀಡಿರುವ ಈ ಚಿತ್ರಕ್ಕೆ ಬಲರಾಮ್ ಸಂಕಲನ, ಪರಮೇಶ್, ಪ್ರವೀಣ್ ನೃತ್ಯ ನಿರ್ದೇಶನ, ಥ್ರಿಲ್ಲರ್ ಮಂಜು, ಕೌರವ ವೆಂಕಟೇಶ್, ಟೈಗರ್ ಮಧು ಸಾಹಸ ನಿರ್ದೇಶನ, ಶ್ರಿನಿವಾಸ್ ಕೌಶಿಕ್ ಸಂಭಾಷಣೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT