ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಲ್ಸ್ ಜಯಭೇರಿ

ಕೂಪರ್, ತ್ರಿವೇದಿ ಪ್ರಭಾವಿ ಬೌಲಿಂಗ್; ರೈಡರ್ಸ್‌ಗೆ ನಿರಾಸೆ
Last Updated 8 ಏಪ್ರಿಲ್ 2013, 20:05 IST
ಅಕ್ಷರ ಗಾತ್ರ

ಜೈಪುರ (ಪಿಟಿಐ): ಬ್ರಾಡ್ ಹಾಡ್ಜ್ ಅವರ ಬಿರುಸಿನ ಬ್ಯಾಟಿಂಗ್ ಮತ್ತು ಸಿದ್ಧಾರ್ಥ್ ತ್ರಿವೇದಿ ಹಾಗೂ ಕೆವೊನ್ ಕೂಪರ್ ತೋರಿದ ಸಮರ್ಥ ಬೌಲಿಂಗ್ ನೆರವಿನಿಂದ ರಾಜಸ್ತಾನ ರಾಯಲ್ಸ್‌ಗೆ ಐಪಿಎಲ್ ಟ್ವೆಂಟಿ-20 ಟೂರ್ನಿಯಲ್ಲಿ ಸತತ ಎರಡನೇ ಗೆಲುವು ಲಭಿಸಿತು.

ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ಬಳಗ 19 ರನ್‌ಗಳಿಂದ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಮಣಿಸಿತು.

ಮೊದಲು ಬ್ಯಾಟ್ ಮಾಡಿದ ರಾಜಸ್ತಾನ ರಾಯಲ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 144 ರನ್ ಪೇರಿಸಿತು. ಇಷ್ಟು ಮೊತ್ತ ಕಲೆಹಾಕಲು ಅಜಿಂಕ್ಯ ರಹಾನೆ (36) ಹಾಗೂ ಹಾಡ್ಜ್ (ಔಟಾಗದೆ 46) ಅವರ ಜವಾಬ್ದಾರಿಯುತ ಬ್ಯಾಟಿಂಗ್ ಕಾರಣ.

ಈ ಗುರಿ ಬೆನ್ನಟ್ಟಿದ ಗೌತಮ್ ಗಂಭೀರ್ ನಾಯಕತ್ವದ ರೈಡರ್ಸ್ 19 ಓವರ್‌ಗಳಲ್ಲಿ 125 ರನ್‌ಗಳಿಗೆ ಆಲೌಟಾಯಿತು. ತ್ರಿವೇದಿ (23ಕ್ಕೆ 3), ಕೂಪರ್ (15ಕ್ಕೆ 3) ಮತ್ತು ರಾಹುಲ್ ಶುಕ್ಲಾ (28ಕ್ಕೆ 2) ತಂಡದ ಗೆಲುವಿಗೆ ನೆರವಾದರು. ರೈಡರ್ಸ್ ಪರ ಎಯೊನ್ ಮಾರ್ಗನ್ (51, 38 ಎಸೆತ, 3 ಬೌಂ, 3 ಸಿಕ್ಸರ್) ಮಾತ್ರ ಅಲ್ಪ ಹೋರಾಟ ತೋರಲು ಯಶಸ್ವಿಯಾದರು.

ಇದಕ್ಕೂ ಮುನ್ನ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಲು ಅವಕಾಶ ಪಡೆದ ರಾಯಲ್ಸ್ ತಂಡಕ್ಕೆ ಉತ್ತಮ ಆರಂಭ ದೊರಕಲಿಲ್ಲ. ಇನಿಂಗ್ಸ್ ಆರಂಭಿಸಿದ ಆಲ್‌ರೌಂಡರ್ ಶೇನ್ ವಾಟ್ಸನ್ ಬೇಗನೇ ವಿಕೆಟ್ ಒಪ್ಪಿಸಿದರು.

ಆದರೆ ರಹಾನೆ ಹಾಗೂ ದ್ರಾವಿಡ್ ಬಿರುಸಿನ ಆಟ ಈ ತಂಡಕ್ಕೆ ಬಲ ನೀಡಿತು. ದ್ರಾವಿಡ್ ಮತ್ತು ಸ್ಟುವರ್ಟ್ ಬಿನ್ನಿ ವಿಕೆಟ್ ಪತನ ಈ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿತು. ಆಗ ಕ್ರೀಸ್‌ಗೆ ಬಂದ ಹಾಡ್ಜ್ ಬಿರುಸಿನಆಟದ ಮೂಲಕ ರಾಯಲ್ಸ್ ಮೊತ್ತ ಹೆಚ್ಚಿಸಿದರು. 31 ಎಸೆತ ಎದುರಿಸಿದ ಅವರು 7 ಬೌಂಡರಿ ಬಾರಿಸಿದರು. ಅವರಿಗೆ ರಹಾನೆ ಉತ್ತಮ ಬೆಂಬಲ ನೀಡಿದರು. 34 ಎಸೆತ ಎದುರಿಸಿದ ಅಜಿಂಕ್ಯ ಒಂದು ಸಿಕ್ಸರ್ ಹಾಗೂ ಮೂರು ಬೌಂಡರಿ ಸಿಡಿಸಿದರು.

ಕೊನೆಯಲ್ಲಿ ದಿಶಾಂತ್ ಯಾಗ್ನಿಕ್ ಒಂದು ಸಿಕ್ಸರ್ ಹಾಗೂ ಬೌಂಡರಿ ಸಿಡಿಸಿದರು. ನೈಟ್ ರೈಡರ್ಸ್ ತಂಡದ ಸುನಿಲ್ ನಾರಾಯಣ್ ತಮ್ಮ ಮೊದಲ ಮೂರು ಓವರ್‌ಗಳಲ್ಲಿ ಕೇವಲ 11 ರನ್ ನೀಡಿ ಒಂದು ವಿಕೆಟ್ ಪಡೆದಿದ್ದರು. ಆದರೆ ಕೊನೆಯ ಓವರ್‌ನಲ್ಲಿ ದುಬಾರಿಯಾದರು. ಬ್ರೆಟ್ ಲೀ 4 ಓವರ್‌ಗಳಲ್ಲಿ ಕೇವಲ 20 ರನ್ ನೀಡಿ ಒಂದು ವಿಕೆಟ್ ಕಬಳಿಸಿದರು.

ಸ್ಕೋರ್ ವಿವರ
ರಾಜಸ್ತಾನ ರಾಯಲ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 144

ಶೇನ್ ವಾಟ್ಸನ್ ಸಿ ಎಯೋನ್ ಮಾರ್ಗನ್ ಬಿ ಬ್ರೆಟ್ ಲೀ 05
ಅಜಿಂಕ್ಯ ರಹಾನೆ ಸಿ ಮನ್ವಿಂದರ್ ಬಿಸ್ಲಾ ಬಿ ಸುನಿಲ್  ನಾರಾಯಣ್  36
ರಾಹುಲ್ ದ್ರಾವಿಡ್ ಬಿ ರಜತ್ ಭಾಟಿಯಾ  17
ಸ್ಟುವರ್ಟ್ ಬಿನ್ನಿ ಎಲ್‌ಬಿಡಬ್ಲ್ಯು ಬಿ ಲಕ್ಷ್ಮಿರತನ್ ಶುಕ್ಲಾ  14
ಬ್ರಾಡ್ ಹಾಡ್ಜ್ ಔಟಾಗದೆ  46
ಕೆವೋನ್ ಕೂಪರ್ ಸ್ಟಂಪ್ಡ್ ಮನ್ವಿಂದರ್ ಬಿಸ್ಲಾ ಬಿ ಸುನಿಲ್ ನಾರಾಯಣ್  00
ದಿಶಾಂತ್ ಯಾಗ್ನಿಕ್ ರನ್‌ಔಟ್ (ಶಮಿ/ಬಿಸ್ಲಾ)  16
ಎಸ್.ಶ್ರೀಶಾಂತ್ ಔಟಾಗದೆ  01
ಇತರೆ (ಬೈ-1, ಲೆಗ್‌ಬೈ-6, ವೈಡ್-1, ನೋಬಾಲ್-1)  09
ವಿಕೆಟ್ ಪತನ: 1-11 (ವಾಟ್ಸನ್; 2.3); 2-46 (ದ್ರಾವಿಡ್; 7.5); 3-63 (ಬಿನ್ನಿ; 10.1); 4-101 (ರಹಾನೆ; 15.2); 5-101 (ಕೂಪರ್; 15.4); 6-137 (ಯಾಗ್ನಿಕ್; 19.2)
ಬೌಲಿಂಗ್: ಬ್ರೆಟ್ ಲೀ 4-0-20-1 (ವೈಡ್-1), ಶಮಿ ಅಹ್ಮದ್ 3-0-26-0, ಸುನಿಲ್ ನಾರಾಯಣ್ 4-0-28-2, ಜಾಕ್ ಕಾಲಿಸ್ 4-0-28-0 (ನೋಬಾಲ್-1), ರಜತ್ ಭಾಟಿಯಾ 3-0-21-1, ಲಕ್ಷ್ಮಿರತನ್ ಶುಕ್ಲಾ 2-0-14-1

ಕೋಲ್ಕತ್ತ ನೈಟ್ ರೈಡರ್ಸ್: 19 ಓವರ್‌ಗಳಲ್ಲಿ 125
ಮನ್ವಿಂದರ್ ಬಿಸ್ಲಾ ಬಿ ರಾಹುಲ್ ಶುಕ್ಲಾ  01
ಗೌತಮ್ ಗಂಭೀರ್ ಸಿ ಯಾಗ್ನಿಕ್ ಬಿ ಸಿದ್ಧಾರ್ಥ್ ತ್ರಿವೇದಿ 22
ಜಾಕ್ ಕಾಲಿಸ್ ಸಿ ಯಾಗ್ನಿಕ್ ಬಿ ರಾಹುಲ್ ಶುಕ್ಲಾ  00
ಮನೋಜ್ ತಿವಾರಿ ಎಲ್‌ಬಿಡಬ್ಲ್ಯು ಬಿ ತ್ರಿವೇದಿ  14
ಎಯೊನ್ ಮಾರ್ಗನ್ ಬಿ ಕೆವೊನ್ ಕೂಪರ್  51
ಯೂಸುಫ್ ಪಠಾಣ್ ಸಿ ಯಾಗ್ನಿಕ್ ಬಿ ಕೆವೊನ್ ಕೂಪರ್ 00
ಲಕ್ಷ್ಮಿರತನ್ ಶುಕ್ಲಾ ಸಿ ಶುಕ್ಲಾ ಬಿ ಸಿದ್ಧಾರ್ಥ್ ತ್ರಿವೇದಿ  02
ರಜತ್ ಭಾಟಿಯಾ ಸಿ ಬಿನ್ನಿ ಬಿ ಶಾನ್ ಟೇಟ್  12
ಬ್ರೆಟ್ ಲೀ ಸಿ ಶುಕ್ಲಾ ಬಿ ಎಸ್. ಶ್ರೀಶಾಂತ್  05
ಶಮಿ ಅಹ್ಮದ್ ಸಿ ರಹಾನೆ ಬಿ ಕೆವೊನ್ ಕೂಪರ್  05
ಸುನಿಲ್ ನಾರಾಯಣ್ ಔಟಾಗದೆ  02
ಇತರೆ: (ಲೆಗ್‌ಬೈ-5, ವೈಡ್-6)  11
ವಿಕೆಟ್ ಪತನ: 1-19 (ಬಿಸ್ಲಾ; 2.2), 2-20 (ಕಾಲಿಸ್; 2.3), 3-40 (ತಿವಾರಿ; 6.1), 4-43 (ಗಂಭೀರ್; 6.5), 5-44 (ಪಠಾಣ್; 7.3), 6-56 (ಶುಕ್ಲಾ; 10.6), 7-90 (ಭಾಟಿಯಾ; 14.1), 8-103 (ಲೀ; 15.3), 9-122 (ಮಾರ್ಗನ್; 18.1), 10-125 (ಶಮಿ; 18.6)
ಬೌಲಿಂಗ್: ಎಸ್. ಶ್ರೀಶಾಂತ್ 4-0-25-1, ಶಾನ್ ಟೇಟ್ 4-0-29-1, ರಾಹುಲ್ ಶುಕ್ಲಾ 3-0-28-2, ಕೆವೊನ್ ಕೂಪರ್ 4-0-15-3, ಸಿದ್ಧಾರ್ಥ್ ತ್ರಿವೇದಿ 4-0-23-3

ಫಲಿತಾಂಶ: ರಾಜಸ್ತಾನ ರಾಯಲ್ಸ್‌ಗೆ 19 ರನ್ ಗೆಲುವು

ಪಂದ್ಯಶ್ರೇಷ್ಠ: ಸಿದ್ಧಾರ್ಥ್ ತ್ರಿವೇದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT