ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಲ್ಸ್ ಮೇಲೆ ಕಿಂಗ್ಸ್ ಸವಾರಿ

ಶೇನ್ ವಾಟ್ಸನ್ ಶತಕ ವ್ಯರ್ಥ; ಗೆಲುವು ತಂದುಕೊಟ್ಟ ಹಸ್ಸಿ ಆಟ
Last Updated 22 ಏಪ್ರಿಲ್ 2013, 19:07 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ಗೆಲುವಿಗಾಗಿ ಚೆನ್ನೈ ಸೂಪರ್ ಕಿಂಗ್ಸ್‌ಗೆ ಕೊನೆಯ ಓವರ್‌ನಲ್ಲಿ 11 ರನ್‌ಗಳು ಬೇಕಿದ್ದವು. ಆ ಓವರ್ ಮಾಡಿದ ಶೇನ್ ವಾಟ್ಸನ್ ಮೊದಲ ಎರಡು ಎಸೆತಗಳಲ್ಲಿ 1 ರನ್ ಮಾತ್ರ ನೀಡಿದರು. ಆದರೆ ಮೂರನೇ ಎಸೆತವನ್ನು ಬ್ರಾವೊ ಸಿಕ್ಸರ್‌ಗೆ ಎತ್ತಿದರು. ನಂತರದ ಎಸೆತಗಳನ್ನು ಸಮರ್ಥವಾಗಿ ಎದುರಿಸಿ, ಸೂಪರ್ ಕಿಂಗ್ಸ್‌ಗೆ ಗೆಲುವು ತಂದುಕೊಟ್ಟ ಅವರು ಕುಣಿಯಲು ಶುರು ಮಾಡಿದರು. ಬ್ರಾವೊ ಅವರನ್ನು ತಬ್ಬಿಕೊಂಡ ಸಹ ಆಟಗಾರರು ಸಂಭ್ರಮಿಸಿದರು.

ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ತಂಡವನ್ನು ಐದು ವಿಕೆಟ್‌ಗಳಿಂದ ಮಣಿಸಿದ ಸೂಪರ್ ಕಿಂಗ್ಸ್ ಎರಡು ಪಾಯಿಂಟ್ ಗಳಿಸಿತು. ಮೈಕ್ ಹಸ್ಸಿ (88; 51 ಎ, 13 ಬೌಂ, 1 ಸಿ.) ಆಟ ಈ ಗೆಲುವಿಗೆ ಪ್ರಮುಖ ಕಾರಣ.

ರಾಯಲ್ಸ್ ನೀಡಿದ 186 ರನ್‌ಗಳ ಗುರಿಯನ್ನು ಸೂಪರ್ ಕಿಂಗ್ಸ್ 19.5 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ತಲುಪಿತು. ಮುರಳಿ ವಿಜಯ್ ಬೇಗನೇ ನಿರ್ಗಮಿಸಿದರು. ಆದರೆ ಹಸ್ಸಿ ಹಾಗೂ ಸುರೇಶ್ ರೈನಾ (51; 35 ಎ, 4 ಬೌಂ., 2 ಸಿ.,) ಯಾವುದೇ ಅಪಾಯಕ್ಕೆ ಆಸ್ಪದ ನೀಡಲಿಲ್ಲ. ಇವರಿಬ್ಬರು ಎರಡನೇ  ವಿಕೆಟ್‌ಗೆ 90 ರನ್ (61 ಎಸೆತ) ಸೇರಿಸಿದರು.

ಈ ಮುನ್ನ ಮೊದಲು ಬ್ಯಾಟ್ ಮಾಡಿದ ರಾಹುಲ್ ದ್ರಾವಿಡ್ ನೇತೃತ್ವದ ರಾಯಲ್ಸ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 185 ರನ್ ಪೇರಿಸಿತು. ಶೇನ್ ವಾಟ್ಸನ್ (101; 61 ಎಸೆತ) ಆರನೇ ಋತುವಿನ ಟೂರ್ನಿಯಲ್ಲಿ ಶತಕ ಗಳಿಸಿದ ಮೊದಲ ಆಟಗಾರ ಎಂಬ ಗೌರವ ತಮ್ಮದಾಗಿಸಿಕೊಂಡರು. 

ವಾಟ್ಸನ್ ತಮ್ಮ ನೈಜ ಸಾಮರ್ಥ್ಯ ಏನೆಂಬುದನ್ನು ಚಿದಂಬರಂ ಕ್ರೀಡಾಂಗಣದಲ್ಲಿ ತೋರಿಸಿಕೊಟ್ಟರು. ತಲಾ ಆರು ಸಿಕ್ಸರ್ ಹಾಗೂ ಬೌಂಡರಿಗಳ ಮೂಲಕ ಅವರು ನೆರೆದ ಪ್ರೇಕ್ಷಕರನ್ನು ರಂಜಿಸಿದರು.

ಬಿನ್ನಿ (ಅಜೇಯ 36, 22 ಎಸೆತ, 3 ಬೌಂ, 1 ಸಿಕ್ಸರ್) ಕೊನೆಯಲ್ಲಿ ವಾಟ್ಸನ್‌ಗೆ ಉತ್ತಮ ಸಾಥ್ ನೀಡಿದರು.

ಸ್ಕೋರ್ ವಿವರ :

ರಾಜಸ್ತಾನ ರಾಯಲ್ಸ್: 20 ಓವರ್‌ಗಳಲ್ಲಿ 4 ವಿಕೆಟ್‌ಗೆ 185
ಶೇನ್ ವಾಟ್ಸನ್ ಸಿ ಹಸ್ಸಿ ಬಿ ಡ್ವೇನ್ ಬ್ರಾವೊ  101
ಅಜಿಂಕ್ಯ ರಹಾನೆ ಬಿ ಆರ್. ಅಶ್ವಿನ್  16
ದಿಶಾಂತ್ ಯಾಗ್ನಿಕ್ ಸಿ ಮತ್ತು ಬಿ ಆರ್. ಅಶ್ವಿನ್  07
ರಾಹುಲ್ ದ್ರಾವಿಡ್ ಸಿ ದೋನಿ ಬಿ ಡ್ವೇನ್ ಬ್ರಾವೊ  06
ಸ್ಟುವರ್ಟ್ ಬಿನ್ನಿ ಔಟಾಗದೆ  36
ಬ್ರಾಡ್ ಹಾಡ್ಜ್ ಔಟಾಗದೆ  09

ಇತರೆ (ಲೆಗ್‌ಬೈ-3, ವೈಡ್-6, ನೋಬಾಲ್-1)  10
ವಿಕೆಟ್ ಪತನ: 1-71 (ರಹಾನೆ; 7.2), 2-84 (ಯಾಗ್ನಿಕ್; 9.3), 3-113 (ದ್ರಾವಿಡ್; 13.2), 4-159 (ವಾಟ್ಸನ್; 17.3)
ಬೌಲಿಂಗ್: ಮೋಹಿತ್ ಮಿಶ್ರಾ 2-0-19-0, ಜಾಸನ್ ಹೋಲ್ಡರ್ 4-0-30-0, ಕ್ರಿಸ್ ಮಾರಿಸ್ 3-0-32-0, ಆರ್. ಅಶ್ವಿನ್ 4-0-20-2, ರವೀಂದ್ರ ಜಡೇಜ 3-0-45-0, ಡ್ವೇನ್ ಬ್ರಾವೊ 4-0-36-2 

ಚೆನ್ನೈ ಸೂಪರ್ ಕಿಂಗ್ಸ್ 19.5 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 186
ಮುರಳಿ ವಿಜಯ್ ಸಿ ಅಂಡ್ ಬಿ ಅಜಿತ್ ಚಾಂಡಿಲ  03
ಮೈಕ್ ಹಸ್ಸಿ ರನ್‌ಔಟ್ (ದ್ರಾವಿಡ್)  88
ಸುರೇಶ್ ರೈನಾ ಎಲ್‌ಬಿಡಬ್ಲ್ಯು ಬಿ ಫಾಲ್ಕನರ್  51
ಎಂ.ಎಸ್.ದೋನಿ ಸಿ ಸ್ಟುವರ್ಟ್ ಬಿನ್ನಿ ಬಿ ಫಾಲ್ಕನರ್  21
ರವೀಂದ್ರ ಜಡೇಜ ಬಿ ಫಾಲ್ಕನರ್  00
ಡ್ವೇನ್ ಬ್ರಾವೊ ಔಟಾಗದೆ  15
ಕ್ರಿಸ್ ಮಾರಿಸ್ ಔಟಾಗದೆ  01
ಇತರೆ (ಲೆಗ್‌ಬೈ-4, ವೈಡ್-3)  07

ವಿಕೆಟ್ ಪತನ: 1-22 (ವಿಜಯ್; 2.3); 2-112 (ರೈನಾ; 12.4); 3-154 (ಹಸ್ಸಿ; 16.1); 4-154 (ಜಡೇಜ; 16.3); 5-175 (ದೋನಿ; 18.6).
ಬೌಲಿಂಗ್: ಅಜಿತ್ ಚಾಂಡಿಲ 3-0-16-1, ರಾಹುಲ್ ಶುಕ್ಲಾ 2-0-24-0, ಜೇಮ್ಸ ಫಾಲ್ಕನರ್ 4-0-20-3, ಕೆವೊನ್ ಕೂಪರ್ 4-0-49-0, ಸಿದ್ದಾರ್ಥ್ ತ್ರಿವೇದಿ 3-0-32-0 (ವೈಡ್-1), ಶೇನ್ ವಾಟ್ಸನ್ 1.5-0-21-0, ಸ್ಟುವರ್ಟ್ ಬಿನ್ನಿ 2-0-20-0 (ವೈಡ್-1)

ಫಲಿತಾಂಶ: ಚೆನ್ನೈ ಸೂಪರ್ ಕಿಂಗ್ಸ್‌ಗೆ 5 ವಿಕೆಟ್ ಜಯ.
ಪಂದ್ಯ ಶ್ರೇಷ್ಠ: ಮೈಕ್ ಹಸ್ಸಿ



 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT